ಇಂಡೋನೇಷ್ಯಾದಲ್ಲಿ ರಾಮಾಯಣದ ತೊಗಲು ಬೊಂಬೆಯಾಟ ನೋಡಿ ಅಚ್ಚರಿಗೊಂಡ ಮೋದಿ
ಇಂಡೋನೇಷ್ಯಾದ ಶಾಡೋ ಬೊಂಬೆಯಾಟ ಸಂಪ್ರದಾಯದಲ್ಲಿ ಅನಾವರಣಗೊಂಡ ರಾಮಾಯಣವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಜಕಾರ್ತಾಗೆ ಆಗಮಿಸಿದ ಬಳಿಕ ಮೋದಿ ಅವರು ಅಲ್ಲಿನ ವಿಶೇಷ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಪ್ರಧಾನಿ ಮೋದಿಗಾಗಿ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಇದರಲ್ಲಿ ಪ್ರಮುಖವಾಗಿ, ರಾಮಾಯಣದ ಸಾರ್ವಕಾಲಿಕ ವೈಭವವನ್ನು ಬಿಂಬಿಸುವ ಇಂಡೋನೇಷ್ಯಾದ ಸಾಂಪ್ರದಾಯಿಕ ಶ್ಯಾಡೋ ಪಪೆಟ್ರಿ (ತೊಗಲು ಬೊಂಬೆಯಾಟ) ಪ್ರದರ್ಶನವು ಮೋದಿಯ ಗಮನ ಸೆಳೆಯಿತು.
ಜಕಾರ್ತ, ಜುಲೈ 6: ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ 3 ದೇಶಗಳ ಪ್ರವಾಸದ ಮೊದಲ ಭಾಗವಾಗಿ 3 ದಿನಗಳ ಅಧಿಕೃತ ಭೇಟಿಗಾಗಿ ಇಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಾಕ್ಕೆ ಆಗಮಿಸಿದ್ದು, ಅವರಿಗೆ ಅಲ್ಲಿ ಭವ್ಯ ಸ್ವಾಗತ ದೊರೆತಿದೆ. ಇಂಡೋನೇಷ್ಯಾದ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂಟೊ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಧಾನಮಂತ್ರಿ ಮೋದಿಯವರನ್ನು (PM Narendra Modi) ಬರಮಾಡಿಕೊಂಡರು. ಪ್ರಧಾನಮಂತ್ರಿ ಮೋದಿಯವರ ವಿಮಾನವು ಇಂಡೋನೇಷ್ಯಾದ ವೈಮಾನಿಕ ವಲಯವನ್ನು ಪ್ರವೇಶಿಸುತ್ತಿದ್ದಂತೆ ಇಂಡೋನೇಷ್ಯಾ ವಾಯುಪಡೆಯ ಯುದ್ಧ ವಿಮಾನಗಳು ಅದಕ್ಕೆ ಬೆಂಗಾವಲಾಗಿ ಬಂದವು. ಭಾರತದ ನಾಯಕರನ್ನು ಸ್ವಾಗತಿಸಲು ಇಂಡೋನೇಷ್ಯಾದ ನಾಲ್ವರು ಪ್ರಮುಖ ಸಚಿವರು ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಜಕಾರ್ತಾಗೆ ಆಗಮಿಸಿದ ಬಳಿಕ ಮೋದಿ ಅವರು ಅಲ್ಲಿನ ವಿಶೇಷ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಪ್ರಧಾನಿ ಮೋದಿಗಾಗಿ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಶ್ಲಾಘಿಸಿದರು. ಇದರಲ್ಲಿ ಪ್ರಮುಖವಾಗಿ, ರಾಮಾಯಣದ ಸಾರ್ವಕಾಲಿಕ ವೈಭವವನ್ನು ಬಿಂಬಿಸುವ ಇಂಡೋನೇಷ್ಯಾದ ಸಾಂಪ್ರದಾಯಿಕ ಶ್ಯಾಡೋ ಪಪೆಟ್ರಿ (ತೊಗಲು ಬೊಂಬೆಯಾಟ) ಪ್ರದರ್ಶನವು ಮೋದಿಯ ಗಮನ ಸೆಳೆಯಿತು.
ಇಂಡೋನೇಷ್ಯಾದಲ್ಲಿ ಇಂದಿಗೂ ರಾಮಾಯಣ ಮತ್ತು ಮಹಾಭಾರತದಂತಹ ಭಾರತೀಯ ಮಹಾಕಾವ್ಯಗಳ ಪ್ರಭಾವ ಗಾಢವಾಗಿದೆ. ಅಲ್ಲಿನ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಲ್ಲಿಯೂ ಈ ಜಾನಪದ ಕಲೆಗಳು ಎದ್ದು ಕಾಣುತ್ತವೆ. ಪ್ರಧಾನಿ ಮೋದಿ ಅವರ ಭೇಟಿಯ ಆರಂಭದಲ್ಲೇ ನಡೆದ ಈ ಸಾಂಸ್ಕೃತಿಕ ಸ್ವಾಗತವು ಉಭಯ ದೇಶಗಳ ನಡುವಿನ ‘ಜನರಿಂದ ಜನರ ಬಾಂಧವ್ಯ’ (People-to-People ties) ಮತ್ತು ನಾಗರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

