AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲವೂ ಮುಗಿದಂತೆ ಅನಿಸಿತ್ತು’: ಸಲ್ಲು ಜೊತೆಗಿನ ದ್ವೇಷದ ದಿನಗಳನ್ನು ನೆನೆದ್ರಾ ವಿವೆಕ್ ಒಬೆರಾಯ್?

ತಮ್ಮ ಹೊಸ ವೆಬ್ ಸರಣಿಯ ಪ್ರಚಾರದ ವೇಳೆ ಮಾತನಾಡಿರುವ ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಜೊತೆಗಿನ ಜಗಳದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

‘ಎಲ್ಲವೂ ಮುಗಿದಂತೆ ಅನಿಸಿತ್ತು’: ಸಲ್ಲು ಜೊತೆಗಿನ ದ್ವೇಷದ ದಿನಗಳನ್ನು ನೆನೆದ್ರಾ ವಿವೆಕ್ ಒಬೆರಾಯ್?
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 13, 2024 | 6:57 PM

Share

ಒಂದು ಕಾಲದಲ್ಲಿ ನಟಿ ಐಶ್ವರ್ಯಾ ರೈ (Aishwarya Rai) ಮತ್ತು ನಟ ವಿವೇಕ್ ಒಬೆರಾಯ್ (Vivek Oberoi) ನಡುವಿನ ಸಂಬಂಧವು ಸಾಕಷ್ಟು ಚರ್ಚೆಯಾಗಿತ್ತು. ನಟ ಸಲ್ಮಾನ್ ಖಾನ್ ಅವರೊಂದಿಗೆ ಇದ್ದ ಸಂಬಂಧ ಮುರಿದುಬಿದ್ದ ನಂತರ ವಿವೇಕ್ ಅವರು ಐಶ್ವರ್ಯಾ ಅವರ ಜೀವನವನ್ನು ಪ್ರವೇಶಿಸಿದರು. ಈ ಕಾರಣಕ್ಕೆ ವಿವೇಕ್ ಮೇಲೆ ಸಲ್ಮಾನ್ ಖಾನ್ ಸಾಕಷ್ಟು ದ್ವೇಷ ಸಾಧಿಸಿದರು. ಇದರಿಂದ ವಿವೇಕ್‌ಗೆ ತುಂಬಾ ನಷ್ಟವಾಯಿತು. ಅದಕ್ಕಾಗಿ ವಿವೇಕ್ ಭಾರೀ ಬೆಲೆ ತೆರಬೇಕಾಯಿತು. ಅವರು ಆಫರ್ ಕಳೆದುಕೊಂಡರು. ಈಗ ಅವರ ವೃತ್ತಿಜೀವನವು ಮತ್ತೆ ಟ್ರ್ಯಾಕ್ಗೆ ಮರಳುತ್ತಿದೆ. ಅವರು ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಜನವರಿ 19ಕ್ಕೆ ಇದು ರಿಲೀಸ್ ಆಗುತ್ತಿದ್ದು, ಇದಕ್ಕಾಗಿ ಸಾಕಷ್ಟು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.

‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯ ಮೂಲಕ ವಿವೇಕ್ ಮತ್ತೆ ಜನಪ್ರಿಯತೆ ಪಡೆಯುವ ಉದ್ದೇಶ ಇಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ವಿವೇಕ್ ಹಿಂದೆ ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಈಗ ನೀವು ಎದುರಿಸುತ್ತಿರುವ ಹಲವು ಸನ್ನಿವೇಶಗಳನ್ನು ನಾನು ಎದುರಿಸಿದ್ದೇನೆ. ಶಾಲೆ, ಕಾಲೇಜು ಅಥವಾ ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಹಲವು ಘಟನೆಗಳು ನಡೆಯುತ್ತವೆ. ಜನರು ಯಾವಾಗಲೂ ನಿಮ್ಮನ್ನು ಟ್ರೋಲ್ ಮಾಡುತ್ತಾರೆ. ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸಂಭವಿಸುವ ಎಲ್ಲಾ ಘಟನೆಗಳಿಂದ ನೀವು ಬೇಸರ ಮಾಡಿಕೊಳ್ಳಬೇಕೇ? ಅದು ಸಂಪೂರ್ಣವಾಗಿ ನಿಮ್ಮ ಕೈಯಲ್ಲಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಕಾರು ಅಪಘಾತ, ಕೃಷ್ಣ ಮೃಗ ಹತ್ಯೆ; ಸಲ್ಮಾನ್ ಖಾನ್ ಮಾಡಿಕೊಂಡ ವಿವಾದಗಳು ಒಂದೆರಡಲ್ಲ

‘ನನ್ನನ್ನು ದ್ವೇಷಿಸುವ ಅನೇಕ ಜನರಿದ್ದರು. ಆದರೆ ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಗ ನನಗೆ ಬೇಸರವಾಯಿತು. ಎಲ್ಲವೂ ಮುಗಿದಂತೆ ಅನಿಸಿತು.. ಆದರೆ ನಂತರ ನಾನು ಚೇತರಿಸಿಕೊಂಡೆ. ಇನ್ನು ಮುಂದೆ ನನ್ನನ್ನು ನಾನು ನೋಯಿಸಿಕೊಳ್ಳಬಾರದು ಎಂದು ನಿರ್ಧರಿಸಿದೆ’ ಎಂದು ವಿವೇಕ್​ ಹೇಳಿದ್ದಾರೆ. ಈ ಮೊದಲು ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ವಿವೇಕ್ ಆಗಮಿಸಿದ್ದರು. ಈ ವೇಳೆ ನಟಿ ಐಶ್ವರ್ಯಾ ರೈ ಜೊತೆಗಿನ ಸಂಬಂಧವನ್ನು ವಿವೇಕ್ ಖಚಿತಪಡಿಸಿದ್ದರು. ಆದರೆ ಈ ಬಗ್ಗೆ ಐಶ್ವರ್ಯಾ ರೈ ಯಾವುದೇ ಹೇಳಿಕೆ ನೀಡಿರಲಿಲ್ಲ.

ಐಶ್ವರ್ಯಾ ಅವರ ಹೆಸರು ಮೊದಲು ಸಲ್ಮಾನ್ ಖಾನ್ ಮತ್ತು ನಂತರ ವಿವೇಕ್ ಒಬೆರಾಯ್ ಜೊತೆ ಲಿಂಕ್ ಆಗಿತ್ತು. ನಂತರ ನಟ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈ ಅವರ ಜೀವನದಲ್ಲಿ ಪ್ರವೇಶಿಸಿದರು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಐಶ್ವರ್ಯಾ ಮತ್ತು ಅಭಿಷೇಕ್ 2007ರಲ್ಲಿ ವಿವಾಹವಾದರು. ಮದುವೆಯ ನಂತರ, ಐಶ್ವರ್ಯಾ 2011ರಲ್ಲಿ ಮಗಳಿಗೆ ಜನ್ಮನೀಡಿದರು. ಮಗಳಿಗೆ ಆರಾಧ್ಯ ಬಚ್ಚನ್‌ ಎಂದು ಹೆಸರು ಇಡಲಾಗಿದೆ. ಇತ್ತೀಚೆಗೆ ಐಶ್ವರ್ಯಾ ರೈ ಅವರು ವಿಚ್ಛೇದ ಪಡೆಯುತ್ತಾರೆ ಎಂದು ಸುದ್ದಿ ಆಗುತ್ತಿದೆ. ಆದರೆ, ಇದನ್ನು ಐಶ್ವರ್ಯಾ ರೈ ಅವರು ಪದೇ ಪದೇ ಸುಳ್ಳು ಎಂದು ಸಾಬೀತು ಮಾಡುತ್ತಿದ್ದಾರೆ.

ಇಂಡಿಯನ್ ಪೊಲೀಸ್ ಫೋರ್ಸ್ ಬಗ್ಗೆ

‘ಇಂಡಿಯನ್ ಪೊಲೀಸ್ ಫೋರ್ಸ್’ ಸೀರಿಸ್​ಗೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದ ಮೊದಲ ಸೀರಿಸ್ ಇದು. ಇದರಲ್ಲಿ ಸಿದ್ದಾರ್ಥ್ ಮಲ್ಹೋತ್ರ, ಶಿಲ್ಪಾ ಶೆಟ್ಟಿ, ವಿವೆಕ್ ಒಬೆರಾಯ್ ಮೊದಲಾದವರು ನಟಿಸಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಜನವರಿ 19ರಂದು ಈ ಸೀರಿಸ್ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ