ಅಭಿಷೇಕ್ ಜೊತೆ ವಿಚ್ಛೇದನ ಆದರೆ ಐಶ್ವರ್ಯಾ ರೈಗೆ ಸಿಗೋ ಜೀವನಾಂಶ ಎಷ್ಟು?
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ನಡುವಿನ ವಿಚ್ಛೇದನ ಪ್ರಕ್ರಿಯೆ ಸುಲಭವಲ್ಲ. ಈ ವಿಚ್ಛೇದನ ಪ್ರಕ್ರಿಯೆ ನಡೆದರೆ ಐಶ್ವರ್ಯಾ ರೈ ಅವರಿಗೆ ಅಭಿಷೇಕ್ ಬಚ್ಚನ್ ಸಾಕಷ್ಟು ಜೀವನಾಂಶವನ್ನು ಪಾವತಿಸಬೇಕಾಗುತ್ತದೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ದಂಪತಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ವಿಚ್ಛೇದನ ವಿಚಾರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ ಎಂಬುದು ವಿಚ್ಛೇದನದ ಸುದ್ದಿ ಹರಡಲು ಮೂಲ ಕಾರಣ. ಇಬ್ಬರ ನಡುವಿನ ವಾಗ್ವಾದ ಹೆಚ್ಚಿದ್ದು, ಇದು ಐಶ್ವರ್ಯಾ ಮನೆ ತೊರೆಯಲು ಪ್ರಮುಖ ಕಾರಣವಂತೆ. ಇವರ ನಡುವಿನ ಮನಸ್ತಾಪಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಸಿ ಮದುವೆ ಆದವರು. ಆದರೆ, ಈಗ ಇವರ ಮಧ್ಯೆ ಮನಸ್ತಾಪ ಉಂಟಾಗಿದೆ. ಒಂದೊಮ್ಮೆ ಅಭಿಷೇಕ್ ಅವರು ವಿಚ್ಛೇದನ ನೀಡಬೇಕಾಗಿ ಬಂದರೆ ಐಶ್ವರ್ಯಾ ರೈ ಅವರಿಗೆ ದೊಡ್ಡಮೊತ್ತದ ಜೀವನಾಂಶ ನೀಡಬೇಕಾಗುತ್ತದೆ.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ನಡುವಿನ ವಿಚ್ಛೇದನ ಪ್ರಕ್ರಿಯೆ ಸುಲಭವಲ್ಲ. ಈ ವಿಚ್ಛೇದನ ಪ್ರಕ್ರಿಯೆ ನಡೆದರೆ ಐಶ್ವರ್ಯಾ ರೈ ಅವರಿಗೆ ಅಭಿಷೇಕ್ ಬಚ್ಚನ್ ಸಾಕಷ್ಟು ಜೀವನಾಂಶವನ್ನು ಪಾವತಿಸಬೇಕಾಗುತ್ತದೆ. ಅಭಿಷೇಕ್ ಬಚ್ಚನ್ ಶ್ರೀಮಂತ ನಟರಲ್ಲಿ ಒಬ್ಬರು. ಹೀಗಾಗಿ, ಅವರು ಪ್ರತಿ ತಿಂಗಳು ಎಷ್ಟು ಕೋಟಿ ರೂಪಾಯಿ ಪಾವತಿಸಬೇಕಾಗಿ ಬರಬಹುದು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಅಭಿಷೇಕ್ ಬಚ್ಚನ್ ಆಸ್ತಿ 280 ಕೋಟಿ ಇದೆ. ಅಭಿಷೇಕ್ ಬಚ್ಚನ್ ತಿಂಗಳಿಗೆ 1.8 ಕೋಟಿ ಗಳಿಸುತ್ತಾರೆ. ವಿಚ್ಛೇದನದ ವೇಳೆ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಶೇ.25 ಜೀವನಾಂಶ ನೀಡಬೇಕು. ಇದರ ಪ್ರಕಾರ ಪ್ರತಿ ತಿಂಗಳು ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ 45 ಲಕ್ಷ ಜೀವನಾಂಶ ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈಗೆ ವಿಚ್ಛೇದನ ನೀಡುವುದು ಸುಲಭ ಅಲ್ಲ. ಅಭಿಷೇಕ್ ಬಚ್ಚನ್‌ಗಿಂತ ಐಶ್ವರ್ಯಾ ರೈ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಗಳಿಕೆಯಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮೀರಿಸಿದ್ದಾರೆ.
ಅಭಿಷೇಕ್ ಬಚ್ಚನ್ ಅವರಿಂದ ಐಶ್ವರ್ಯಾ ವಿಚ್ಛೇದನ ಪಡೆದರೆ ಐಶ್ವರ್ಯಾ ರೈಗೆ ಆರ್ಥಿಕವಾಗಿ ಅಂಥ ವ್ಯತ್ಯಾಸ ಏನು ಆಗುವುದಿಲ್ಲ. ಐಶ್ವರ್ಯಾ ರೈ ಅವರ ಆಸ್ತಿ 750 ಕೋಟಿ ರೂಪಾಯಿ. ನಟಿಯಾಗಿ ಇಷ್ಟು ಆಸ್ತಿ ಮಾಡುವುದು ಎಂದರೆ ಅದು ಸುಲಭವಲ್ಲ. ಐಶ್ವರ್ಯಾ ರೈ ಅವರು ಹಲವು ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಐಶ್ವರ್ಯಾ ರೈ ಸಿನಿಮಾದಲ್ಲಿ ನಟಿಸಲು 12 ಕೋಟಿ ರೂ ಪಡೆಯುತ್ತಾರೆ. ಜಾಹೀರಾತಿನ ಮೂಲಕ ಸಾಕಷ್ಟು ಸಂಪಾದಿಸುತ್ತಾರೆ.
ಇದನ್ನೂ ಓದಿ: ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’; ಐಶ್ವರ್ಯಾ ರೈ ಬಗ್ಗೆ ಟ್ವೀಟ್ ಮಾಡಿದ್ರಾ ಅಮಿತಾಭ್?
ಐಶ್ವರ್ಯಾ ರೈ ರಿಯಲ್ ಎಸ್ಟೇಟ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಅವರ ಬಳಿ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆ ಇದೆ. 5 ಬಿಎಚ್ಕೆ ಅಪಾರ್ಟ್ಮೆಂಟ್ನ ಇದೆ. ದುಬೈನಲ್ಲಿಯೂ ಈ ದಂಪತಿ ಮನೆ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:26 am, Mon, 25 December 23