100 ಕೋಟಿ ಕ್ಲಬ್​ ಸೇರಿದ ‘ಡಂಕಿ’ ಸಿನಿಮಾ; ನಿಧಾನವಾಗಿ ಹೆಚ್ಚುತ್ತಿದೆ ಕಲೆಕ್ಷನ್​

ಮೊದಲ ದಿನ ‘ಡಂಕಿ’ ಗಳಿಸಿದ್ದು 28 ಕೋಟಿ ರೂಪಾಯಿ. ಎರಡನೇ ದಿನ 20 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಮೂರನೇ ದಿನ 24.50 ಕೋಟಿ ರೂಪಾಯಿ ಕಮಾಯಿ ಮಾಡಿತು. ನಾಲ್ಕನೇ ದಿನ 29 ಕೋಟಿ ರೂಪಾಯಿ ಗಳಿಸುವ ಮೂಲಕ ಆಶಾಭಾವನೆ ಮೂಡಿಸಿತು. ಹೀಗೆ ನಿಧಾನವಾಗಿ ಚಿತ್ರದ ಕಲೆಕ್ಷನ್​ ಏರಿಗೆ ಆಗಿದೆ.

100 ಕೋಟಿ ಕ್ಲಬ್​ ಸೇರಿದ ‘ಡಂಕಿ’ ಸಿನಿಮಾ; ನಿಧಾನವಾಗಿ ಹೆಚ್ಚುತ್ತಿದೆ ಕಲೆಕ್ಷನ್​
ಡಂಕಿ
Follow us
ಮದನ್​ ಕುಮಾರ್​
|

Updated on: Dec 25, 2023 | 6:44 PM

ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ ‘ಡಂಕಿ’ (Dunki) ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಈ ಚಿತ್ರಕ್ಕೆ ಕಲೆಕ್ಷನ್​ ಆಗುತ್ತಿಲ್ಲ. ಹಾಗಂತ ಚಿತ್ರತಂಡಕ್ಕೆ ನಿರಾಸೆ ಕೂಡ ಆಗಿಲ್ಲ. ಪ್ರತಿ ದಿನವೂ ಈ ಚಿತ್ರ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಲೇ ಇದೆ. ಕ್ರಿಸ್​ಮಸ್​ ರಜೆಯ ಪ್ರಯುಕ್ತ ರಿಲೀಸ್​ ಆಗಿರುವ ‘ಡಂಕಿ’ ಸಿನಿಮಾ ಈಗ 100 ಕೋಟಿ ರೂಪಾಯಿ ಕಲೆಕ್ಷನ್​ (Dunki Box Office Collection) ಮಾಡಿದೆ. ಆ ಮೂಲಕ ನಿರ್ಮಾಪಕರ ಮುಖದಲ್ಲಿ ನಗು ಮೂಡಿಸಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕು.

ಶಾರುಖ್​ ಖಾನ್​ ಅವರು ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದರು. ಆ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಬೀಗಿದ್ದವು. ಆದರೆ ಆ ಪರಿ ಕಲೆಕ್ಷನ್​ ಮಾಡಲು ‘ಡಂಕಿ’ ಸಿನಿಮಾಗೆ ಸಾಧ್ಯವಾಗಿಲ್ಲ. ಈ ಚಿತ್ರ ಸಾಧಾರಣ ಮೊತ್ತವನ್ನು ಕಲೆಹಾಕಿದೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ‘ಡಂಕಿ’ ಗಳಿಸಿದ್ದು 28 ಕೋಟಿ ರೂಪಾಯಿ. ಎರಡನೇ ದಿನ 20 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಮೂರನೇ ದಿನ 24.50 ಕೋಟಿ ರೂಪಾಯಿ ಕಮಾಯಿ ಮಾಡಿತು. ನಾಲ್ಕನೇ ದಿನ 29 ಕೋಟಿ ರೂಪಾಯಿ ಗಳಿಸುವ ಮೂಲಕ ಆಶಾಭಾವನೆ ಮೂಡಿಸಿತು. ಹೀಗೆ ನಿಧಾನವಾಗಿ ಚಿತ್ರದ ಕಲೆಕ್ಷನ್​ ಏರಿಗೆ ಆಗಿದೆ. ನಾಲ್ಕು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಗೆ 101.50 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ಸ್ಯಾಮ್​ ಬಹದ್ದೂರ್​’, ‘ಡಂಕಿ’ ಚಿತ್ರಗಳಿಂದ ಹೆಚ್ಚಾಯಿತು ವಿಕ್ಕಿ ಕೌಶಲ್​ ಜನಪ್ರಿಯತೆ

ವಿದೇಶಕ್ಕೆ ಹೋಗಿ ಕೆಲಸ ಮಾಡಿ, ಉತ್ತಮವಾದ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುವವರು ಅಕ್ರಮವಾಗಿ ದೇಶದ ಗಡಿ ದಾಟಲು ಪ್ರಯತ್ನಿಸಿದಾಗ ಏನೆಲ್ಲ ಆಗುತ್ತದೆ ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ‘ಡಂಕಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಶಾರುಖ್​ ಖಾನ್​, ತಾಪ್ಸಿ ಪನ್ನು, ಬೊಮನ್​ ಇರಾನಿ, ವಿಕ್ಕಿ ಕೌಶಲ್​, ಅನಿಲ್​ ಗ್ರೋವರ್​, ವಿಕ್ರಂ ಕೊಚ್ಚರ್​ ಮುಂತಾದ ಕಲಾವಿದರು ನಟಿಸಿದ್ದಾರೆ. ಕ್ರಿಸ್​ಮಸ್​ ಪ್ರಯುಕ್ತ ರಜೆ ಇರುವುದರಿಂದ ಇಂದು (ಡಿ.25) ಹಲವು ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.