ಮಗಳ ಮುಖ ತೋರಿಸಿ 1 ಲಕ್ಷ ರೂಪಾಯಿ ದಾನ ಮಾಡಿದ ರಣಬೀರ್​ ಕಪೂರ್​

ಕಪೂರ್​ ಕುಟುಂಬದವರು ಎಲ್ಲರೂ ಒಟ್ಟಾಗಿ ಸೇರಿ ಕ್ರಿಸ್​ಮಸ್​ ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಈ ಪಾರ್ಟಿಗೆ ಮಗಳು ರಹಾ ಜೊತೆ ಬಂದ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ದಂಪತಿ ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ರಣಬೀರ್​ ಕಪೂರ್​ 1 ಲಕ್ಷ ರೂಪಾಯಿ ದಾನ ಮಾಡಿ ಸುದ್ದಿ ಆಗಿದ್ದಾರೆ.

ಮಗಳ ಮುಖ ತೋರಿಸಿ 1 ಲಕ್ಷ ರೂಪಾಯಿ ದಾನ ಮಾಡಿದ ರಣಬೀರ್​ ಕಪೂರ್​
ರಣಬೀರ್​ ಕಪೂರ್​, ರಹಾ, ಆಲಿಯಾ ಭಟ್​
Follow us
ಮದನ್​ ಕುಮಾರ್​
|

Updated on:Dec 26, 2023 | 12:16 PM

ಬಾಲಿವುಡ್​ ನಟ ರಣಬೀರ್​ ಕಪೂರ್​ (Ranbir Kapoor) ಅವರು ಈಗ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ‘ಅನಿಮಲ್​’ ಸಿನಿಮಾದ ಗೆಲುವು. ಈ ಚಿತ್ರ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಇದೇ ಸಂಭ್ರಮದಲ್ಲಿ ರಣಬೀರ್​ ಕಪೂರ್​ ಅವರು ಕುಟುಂಬದ ಜೊತೆ ಸೇರಿ ಕ್ರಿಸ್​ಮಸ್​ (Christmas) ಆಚರಿಸಿದ್ದಾರೆ. ಈ ವೇಳೆ ಅವರು ಮಗಳ ಮುಖವನ್ನು ತೋರಿಸಿದ್ದಾರೆ. ಮಕ್ಕಳ ಕಲ್ಯಾಣಕ್ಕಾಗಿ ಒಂದು ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಈ ವಿಷಯವನ್ನು ಅವರ ಅತ್ತೆ ಸೋನಿ ರಾಝ್​ದಾನ್​ (Soni Razdan) ಖುಷಿಯಿಂದ ಹೇಳಿಕೊಂಡಿದ್ದಾರೆ.

ಕಪೂರ್​ ಕುಟುಂಬದವರು ಎಲ್ಲರೂ ಒಟ್ಟಾಗಿ ಸೇರಿ ಕ್ರಿಸ್​ಮಸ್​ ಹಬ್ಬವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಈ ಪಾರ್ಟಿಗೆ ಮಗಳು ರಹಾ ಜೊತೆ ಬಂದ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ದಂಪತಿ ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಮೊದಲ ಬಾರಿಗೆ ಮಗಳನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದಾರೆ. ರಹಾ ಫೋಟೋ ವೈರಲ್​ ಆಗಿದೆ. ಹಾಗೆಯೇ ರಣಬೀರ್​ ಕಪೂರ್​ 1 ಲಕ್ಷ ರೂಪಾಯಿ ದಾನ ಮಾಡಿದ ಸುದ್ದಿಯೂ ಹೊರಬಿದ್ದಿದೆ.

ರಣಬೀರ್​ ಕಪೂರ್​ ಅವರದ್ದು ಶ್ರೀಮಂತ ಕುಟುಂಬ. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಅವರ ಪತ್ನಿ ಆಲಿಯಾ ಭಟ್​ ಕೂಡ ಶ್ರೀಮಂತ ಕುಟುಂಬದವರು. ಪ್ರತಿ ಸಿನಿಮಾಗಳಿಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ರಣಬೀರ್​ ಕಪೂರ್​ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ರಣಬೀರ್​ ಕಪೂರ್​ ಜತೆ ತೃಪ್ತಿ ದಿಮ್ರಿ ಬೋಲ್ಡ್​ ಪಾತ್ರ: ‘ಅನಿಮಲ್​’ ಚಿತ್ರಕ್ಕೆ ಈ ಸುಂದರಿ ಆಯ್ಕೆ ಆಗಿದ್ದು ಹೇಗೆ?

ಹಿಂದಿ ಚಿತ್ರರಂಗದಲ್ಲಿ ರಣಬೀರ್​ ಕಪೂರ್​ ಅವರು ಭಾರಿ ಡಿಮ್ಯಾಂಡ್​ ಹೊಂದಿದ್ದಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಅವರಿಗೆ ಸಂಭಾವನೆ ಬರುತ್ತದೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. 2023ರಲ್ಲಿ ಅವರು ನಟಿಸಿದ ‘ತು ಜೂಟಿ ಮೈ ಮಕ್ಕಾರ್​’ ಮತ್ತು ‘ಅನಿಮಲ್​’ ಸಿನಿಮಾಗಳು ತೆರೆಕಂಡವು. ಆ ಪೈಕಿ ‘ಅನಿಮಲ್​’ ಚಿತ್ರ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:09 am, Tue, 26 December 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್