‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾಗಿಂತ ಮುನ್ನ ಆಗಿತ್ತು ಬೇರೆ ನಟಿಯ ಆಯ್ಕೆ; ಯಾರು ಅದು?

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್​ ರೆಡ್ಡಿ ವಂಗಾ ಅವರು ಪಾತ್ರವರ್ಗದ ಆಯ್ಕೆ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್​ ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ಆ ನಟಿ ನಮ್ಮ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ಅವರಲ್ಲಿ ನನಗೆ ಗೀತಾಂಜಲಿ ಪಾತ್ರ ಕಾಣಿಸಲಿಲ್ಲ’ ಎಂದು ಅವರು ಹೇಳಿದ್ದಾರೆ.

‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾಗಿಂತ ಮುನ್ನ ಆಗಿತ್ತು ಬೇರೆ ನಟಿಯ ಆಯ್ಕೆ; ಯಾರು ಅದು?
ರಶ್ಮಿಕಾ ಮಂದಣ್ಣ, ಸಂದೀಪ್​ ರೆಡ್ಡಿ ವಂಗಾ
Follow us
ಮದನ್​ ಕುಮಾರ್​
|

Updated on: Dec 24, 2023 | 2:06 PM

ಪ್ಯಾನ್​ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಒಂದಕ್ಕಿಂತ ಒಂದು ಉತ್ತಮವಾದ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ. ಇದರಿಂದ ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ತೆರೆಕಂಡ ‘ಅನಿಮಲ್​’ (Animal) ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಆಗಿದೆ. ಅಚ್ಚರಿ ಏನೆಂದರೆ, ‘ಅನಿಮಲ್​’ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ಮೊದಲ ಆಯ್ಕೆ ಆಗಿರಲಿಲ್ಲ. ಅವರಿಗಿಂತಲೂ ಮುನ್ನ ಪರಿಣೀತಿ ಚೋಪ್ರಾ (Parineeti Chopra) ಆಯ್ಕೆ ಆಗಿದ್ದರು.

ಸಂದೀಪ್​ ರೆಡ್ಡಿ ವಂಗಾ ಅವರು ‘ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಮತ್ತು ಸಂಭಾಷಣೆಗಳು ಈ ಚಿತ್ರದಲ್ಲಿ ಇವೆ ಎಂಬುದು ಅನೇಕರ ವಾದ. ಅದೇನೇ ಇದ್ದರೂ, ಸಿನಿಮಾದ ಗಳಿಕೆಗೆ ತೊಂದರೆ ಆಗಿಲ್ಲ. ಈ ಸಿನಿಮಾದ ಪಾತ್ರವರ್ಗದ ಆಯ್ಕೆ ಬಗ್ಗೆ ಸಂದೀಪ್​ ರೆಡ್ಡಿ ವಂಗಾ ಅವರು ಈಗ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಅನಿಮಲ್​’ ಚಿತ್ರದ ಬೋಲ್ಡ್​ ದೃಶ್ಯಗಳಿಗೆ ಕತ್ತರಿ; 27 ನಿಮಿಷ ಕಟ್​ ಮಾಡಿದ ಸೆನ್ಸಾರ್​ ಮಂಡಳಿ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್​ ರೆಡ್ಡಿ ವಂಗಾ ಅವರು ಪರಿಣೀತಿ ಚೋಪ್ರಾ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್​ ಸಿನಿಮಾದ ಶೂಟಿಂಗ್​ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ಪರಿಣೀತಿ ಚೋಪ್ರಾ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ತಪ್ಪು ನನ್ನದೇ. ಅದಕ್ಕಾಗಿ ಅವರಿಗೆ ನಾನು ಕ್ಷಮೆ ಕೇಳಿದ್ದೇನೆ. ಅವರಲ್ಲಿ ನನಗೆ ಗೀತಾಂಜಲಿ ಪಾತ್ರ ಕಾಣಿಸಲಿಲ್ಲ. ಕೆಲವರಿಗೆ ಕೆಲವು ಪಾತ್ರಗಳು ಸೂಕ್ತ ಆಗುವುದಿಲ್ಲ’ ಎಂದು ಸಂದೀಪ್​ ರೆಡ್ಡಿ ವಂಗಾ ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ಕೇಸ್​: ನಾಲ್ವರು ಶಂಕಿತರ ವಿಚಾರಣೆ

‘ನನಗೆ ಆಡಿಷನ್​ನಲ್ಲಿ ನಂಬಿಕೆ ಇಲ್ಲ. ಆ ಕ್ಷಣಕ್ಕೆ ಅನಿಸಿದ್ದನ್ನು ಮಾಡುತ್ತೇನೆ. ಮೊದಲಿಂದಲೂ ನನಗೆ ಪರಿಣೀತ ಚೋಪ್ರಾ ನಟನೆ ಇಷ್ಟ ಆಗಿತ್ತು. ಅವರ ಜೊತೆ ಸಿನಿಮಾ ಮಾಡಲು ನಾನು ಬಯಸಿದ್ದೆ. ‘ಕಬೀರ್​ ಸಿಂಗ್​’ ಸಿನಿಮಾಗೂ ಅವರೇ ನಾಯಕಿ ಆಗಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ನಾನು ಅವರಿಗೆ ಕ್ಷಮೆ ಕೇಳಿದೆ. ಸಿನಿಮಾಗಿಂತಲೂ ದೊಡ್ಡದು ಯಾವುದೂ ಇಲ್ಲ. ಹಾಗಾಗಿ ನಾನು ‘ಅನಿಮಲ್​’ ಚಿತ್ರಕ್ಕೆ ಬೇರೆ ನಟಿಯನ್ನುಆಯ್ಕೆ ಮಾಡಿಕೊಳ್ಳುತ್ತೇನೆ ಎಂದೆ. ಅದರಿಂದ ಅವರಿಗೆ ಬೇಸರ ಆಯಿತು. ಆದರೂ ನನ್ನನ್ನು ಅರ್ಥ ಮಾಡಿಕೊಂಡರು’ ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್