Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್​’ ಚಿತ್ರದ ಬೋಲ್ಡ್​ ದೃಶ್ಯಗಳಿಗೆ ಕತ್ತರಿ; 27 ನಿಮಿಷ ಕಟ್​ ಮಾಡಿದ ಸೆನ್ಸಾರ್​ ಮಂಡಳಿ

ತೃಪ್ತಿ ದಿಮ್ರಿ ಮತ್ತು ರಣಬೀರ್​ ಕಪೂರ್​ ಅವರು ‘ಅನಿಮಲ್​’ ಚಿತ್ರದ ಬೋಲ್ಡ್​ ದೃಶ್ಯಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿತ್ತು. ಕೆಟ್ಟ ಭಾಷೆಯ ಜೊತೆಗೆ ಅತಿಯಾದ ಕ್ರೌರ್ಯ ಇದೆ ಎಂಬ ಕಾರಣದಿಂದಲೂ ಟೀಕೆ ಎದುರಾಯಿತು. ಆದರೆ ಬಾಂಗ್ಲಾದೇಶದಲ್ಲಿ ಇಂಥ ದೃಶ್ಯಗಳಿಗೆ ಅವಕಾಶವನ್ನೇ ನೀಡುತ್ತಿಲ್ಲ.

‘ಅನಿಮಲ್​’ ಚಿತ್ರದ ಬೋಲ್ಡ್​ ದೃಶ್ಯಗಳಿಗೆ ಕತ್ತರಿ; 27 ನಿಮಿಷ ಕಟ್​ ಮಾಡಿದ ಸೆನ್ಸಾರ್​ ಮಂಡಳಿ
‘ಅನಿಮಲ್​’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Dec 24, 2023 | 7:16 AM

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡಿದ ‘ಅನಿಮಲ್​’ ಸಿನಿಮಾ (Animal Movie) ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈಗ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor), ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್​ ಮುಂತಾದವರು ನಟಿಸಿದ್ದಾರೆ. ತೃಪ್ತಿ ದಿಮ್ರಿ ಮತ್ತು ರಣಬೀರ್​ ಕಪೂರ್​ ಅವರು ಸಖತ್​ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀನ್​ಗಳಿಗೆ ಬಾಂಗ್ಲಾದೇಶದ ಸೆನ್ಸಾರ್​ ಮಂಡಳಿ (Censor Board) ಕತ್ತರಿ ಹಾಕಿದೆ. ಅಲ್ಲಿನ ಪ್ರೇಕ್ಷಕರಿಗೆ ಇಂಥ ದೃಶ್ಯಗಳು ಸೂಕ್ತವಲ್ಲವೆಂದು ಸೆನ್ಸಾರ್​ ಸದಸ್ಯರು ನಿರ್ಧರಿಸಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಭಾರತದಲ್ಲಿ ‘ಅನಿಮಲ್​’ ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿತ್ತು. ಚಿತ್ರದಲ್ಲಿನ ಕೆಲವು ಹಸಿ-ಬಿಸಿ ದೃಶ್ಯಗಳ ಕ್ಲೋಸಪ್​ ಶಾಟ್​ಗಳನ್ನು ಡಿಲೀಟ್​ ಮಾಡಿದ ಬಳಿಕವೇ ‘ಎ’ ಸರ್ಟಿಫಿಕೇಟ್​ ನೀಡಲಾಗಿತ್ತು. ಈ ಸಿನಿಮಾದಲ್ಲಿ ಕೆಟ್ಟ ಭಾಷೆಯ ಜೊತೆಗೆ ಅತಿಯಾದ ಕ್ರೌರ್ಯ ಇದೆ. ಆ ಕಾರಣದಿಂದಲೂ ‘ಅನಿಮಲ್​’ ಚಿತ್ರ ಟೀಕೆಗೆ ಒಳಗಾಯಿತು. ಆದರೆ ಬಾಂಗ್ಲಾದೇಶದಲ್ಲಿ ಇಂಥ ದೃಶ್ಯಗಳಿಗೆ ಅವಕಾಶವನ್ನೇ ನೀಡುತ್ತಿಲ್ಲ.

ಇದನ್ನೂ ಓದಿ: ‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

ಬಾಂಗ್ಲಾದೇಶದ ಸೆನ್ಸಾರ್​ ಮಂಡಳಿ ಸದಸ್ಯರು ‘ಅನಿಮಲ್​’ ಸಿನಿಮಾದ 27 ನಿಮಿಷವನ್ನು ಕತ್ತರಿಸಿದ್ದಾರೆ. ಈಗ ಅದರ ಒಟ್ಟು ಅವಧಿ 2 ಗಂಟೆ 56 ನಿಮಿಷ ಆಗಿದೆ. ಅಲ್ಲಿನ ಪ್ರೇಕ್ಷಕರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಭಾರತದಲ್ಲಿ ಡಿಸೆಂಬರ್​ 1ರಂದು ಬಿಡುಗಡೆ ಆದ ಈ ಸಿನಿಮಾ ರಣಬೀರ್​ ಕಪೂರ್​ ಪಾಲಿಗೆ ದೊಡ್ಡ ಗೆಲುವು ತಂದುಕೊಟ್ಟಿದೆ.

ಇದನ್ನೂ ಓದಿ: ‘ಅನಿಮಲ್​’​ ಚಿತ್ರದ ಬೋಲ್ಡ್​ ದೃಶ್ಯ ಹೇಗೆ ಶೂಟ್​ ಮಾಡಲಾಯ್ತು? ವಿವರಿಸಿದ ನಟಿ

ಭಾರತದ ಗಲ್ಲಾಪೆಟ್ಟಿಗೆಯಲ್ಲಿ ‘ಅನಿಮಲ್​’ ಸಿನಿಮಾ 532 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಚಿತ್ರವನ್ನು ವಿಮರ್ಶಕರು ಕಟುವಾಗಿ ಟೀಕಿಸಿದ್ದಾರೆ. ಆದರೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಒಂದು ವರ್ಗದ ಪ್ರೇಕ್ಷಕರು ಈ ಚಿತ್ರದ ಒಂದಷ್ಟು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಖಂಡಿಸಿದ್ದಾರೆ. ಅದಕ್ಕೆಲ್ಲ ಚಿತ್ರತಂಡ ತಲೆ ಕೆಡಿಸಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ