AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್​’​ ಚಿತ್ರದ ಬೋಲ್ಡ್​ ದೃಶ್ಯ ಹೇಗೆ ಶೂಟ್​ ಮಾಡಲಾಯ್ತು? ವಿವರಿಸಿದ ನಟಿ

ಇಂಥ ಬೋಲ್ಡ್​ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಕೋಣೆಯಲ್ಲಿ ಇದ್ದಿದ್ದು ಕೇವಲ ನಾಲ್ಕು ಜನ ಎಂಬುದನ್ನು ತೃಪ್ತಿ ದಿಮ್ರಿ ಬಹಿರಂಗಪಡಿಸಿದ್ದಾರೆ. ‘ನಾನು, ರಣಬೀರ್ ಕಪೂರ್, ನಿರ್ದೇಶಕ ಸಂದೀಪ್ ಮತ್ತು ಕ್ಯಾಮೆರಾ ಪರ್ಸನ್​ ಮಾತ್ರ ಇದ್ದೆವು. ತನಗೆ ಇದು ಕಂಫರ್ಟ್​ ಇದೆಯೇ ಎಂದು ನಿರ್ದೇಶಕರು ಆಗಾಗ ಕೇಳುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

‘ಅನಿಮಲ್​’​ ಚಿತ್ರದ ಬೋಲ್ಡ್​ ದೃಶ್ಯ ಹೇಗೆ ಶೂಟ್​ ಮಾಡಲಾಯ್ತು? ವಿವರಿಸಿದ ನಟಿ
ರಣಬೀರ್​ ಕಪೂರ್​, ತೃಪ್ತಿ ದಿಮ್ರಿ
ಮದನ್​ ಕುಮಾರ್​
|

Updated on: Dec 08, 2023 | 12:52 PM

Share

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ (Animal Movie) ಸೂಪರ್​ ಹಿಟ್​ ಆಗಿದೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಅದೇ ರೀತಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ತೃಪ್ತಿ ದಿಮ್ರಿ (Tripti Dimri) ಕೂಡ ಸಖತ್​ ಸುದ್ದಿ ಆಗುತ್ತಿದ್ದಾರೆ. ‘ಅನಿಮಲ್’ ಚಿತ್ರದಲ್ಲಿ ಅವರು ನಟಿಸಿದ ಬೋಲ್ಡ್ ದೃಶ್ಯಗಳು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಆ ಕಾರಣದಿಂದ ಅವರ ಹೆಸರು ಚಾಲ್ತಿಗೆ ಬಂದಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಮತ್ತು ತೃಪ್ತಿ ದಿಮ್ರಿ ಅವರು ನಟಿಸಿದ ಹಸಿಬಿಸಿ ದೃಶ್ಯಗಳು ದ್ವಿತೀಯಾರ್ಧದಲ್ಲಿ ಬರುತ್ತವೆ. ಅದರ ಮೇಕಿಂಗ್​ ಬಗ್ಗೆ ಈಗ ತೃಪ್ತಿ ದಿಮ್ರಿ ಮಾತನಾಡಿದ್ದಾರೆ.

ಈ ರೀತಿಯ ದೃಶ್ಯಗಳಲ್ಲಿ ನಟಿಸುವಾಗ ಧೈರ್ಯ ಬೇಕಾಗುತ್ತದೆ ಎಂದು ತೃಪ್ತಿ ಹೇಳಿದ್ದಾರೆ. ಬಿಡುಗಡೆಯ ದಿನದಂದು ಅವರ ಬಗ್ಗೆ ಹೆಚ್ಚು ಸುದ್ದಿ ಇರಲಿಲ್ಲ. ಆದರೆ ಎರಡನೇ ದಿನದಿಂದ ಜನರು ಅವರ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಈ ದೃಶ್ಯಕ್ಕೆ ಸಂಬಂಧಿಸಿದಂತೆ ತಮಗೆ ಹಲವಾರು ಸಂದೇಶಗಳು ಮತ್ತು ಫೋನ್ ಕರೆಗಳು ಬಂದಿವೆ ಎಂದು ತೃಪ್ತಿ ಹೇಳಿದ್ದಾರೆ. ‘ಅನಿಮಿಲ್​’ ಚಿತ್ರದಲ್ಲಿ ಇಂಥ ದೃಶ್ಯಗಳು ಇರಲಿವೆ ಎಂದು ನಿರ್ದೇಶಕ ಸಂದೀಪ್ ವಂಗಾ ಅವರು ಮೊದಲೇ ಚರ್ಚಿಸಿದರು ಹಾಗೂ ಕಥೆಗೆ ಈ ದೃಶ್ಯಗಳು ಬಹಳ ಮುಖ್ಯ ಎಂದು ಹೇಳಿದ್ದರು ಎಂದು ತೃಪ್ತಿ ತಿಳಿಸಿದ್ದಾರೆ.

ಇಂಥ ಬೋಲ್ಡ್​ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಕೋಣೆಯಲ್ಲಿ ಕೇವಲ ನಾಲ್ಕು ಜನರು ಇದ್ದರು ಎಂಬುದನ್ನು ಕೂಡ ತೃಪ್ತಿ ದಿಮ್ರಿ ಬಹಿರಂಗಪಡಿಸಿದ್ದಾರೆ. ‘ನಾನು, ರಣಬೀರ್ ಕಪೂರ್, ನಿರ್ದೇಶಕ ಸಂದೀಪ್ ಮತ್ತು ಕ್ಯಾಮೆರಾ ಪರ್ಸನ್​ ಮಾತ್ರ ಇದ್ದಿದ್ದು. ತನಗೆ ಇದು ಕಂಫರ್ಟ್​ ಇದೆಯೇ ಎಂದು ನಿರ್ದೇಶಕರು ಆಗಾಗ ಕೇಳುತ್ತಿದ್ದರು. ರಣಬೀರ್ ನರ್ವಸ್​ ಆಗಿದ್ದರೂ ಕೂಡ ಶೂಟಿಂಗ್​ ಸಮಯದಲ್ಲಿ ವೃತ್ತಿಪರರಾಗಿ ನಡೆದುಕೊಂಡರು’ ಎಂದಿದ್ದಾರೆ ತೃಪ್ತಿ ದಿಮ್ರಿ.

ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ತೃಪ್ತಿ ಬೋಲ್ಡ್ ಅವತಾರ

ಇನ್ನು, ತೃಪ್ತಿ ದಿಮ್ರಿ ಅವರಿಗೆ ಶಾರುಖ್ ಖಾನ್ ಮೊದಲ ಕ್ರಶ್ ಆಗಿದ್ದರೆ, ರಣಬೀರ್ ಕಪೂರ್ ಎರಡನೇ ಕ್ರಶ್ ಆಗಿದ್ದಾರಂತೆ. ರಣಬೀರ್ ಕಪೂರ್​ ಓರ್ವ ಶ್ರೇಷ್ಠ ನಟ ಮತ್ತು ವ್ಯಕ್ತಿ ಎಂದು ಅವರು ಹೊಗಳಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಸಂತಸ ನೀಡಿದೆ ಎಂದು ಅವರು ಹೇಳಿದ್ದಾರೆ. ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು