AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಿ ಡಿಯೋಲ್​ಗೆ ‘ಅನಿಮಲ್’ ಪಾತ್ರ ದೊರೆತ ಬಗೆ ವಿಚಿತ್ರ

Bobby Deol: ಬಾಲಿವುಡ್​ನಲ್ಲಿ ಮೂಲೆಗುಂಪಾಗಿದ್ದ ಬಾಬಿ ಡಿಯೋಲ್​ರದ್ದು ಅದ್ಭುತವಾದ ಕಮ್​ಬ್ಯಾಕ್, ‘ಅನಿಮಲ್’ ಸಿನಿಮಾದಲ್ಲಿ ಅವರು ನಿರ್ವಹಿಸಿರುವ ಪಾತ್ರದ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಆದರೆ ಆ ಪಾತ್ರ ಅವರಿಗೆ ದೊರೆತಿದ್ದು ಹೇಗೆ?

ಬಾಬಿ ಡಿಯೋಲ್​ಗೆ ‘ಅನಿಮಲ್’ ಪಾತ್ರ ದೊರೆತ ಬಗೆ ವಿಚಿತ್ರ
ಅನಿಮಲ್
ಮಂಜುನಾಥ ಸಿ.
|

Updated on: Dec 08, 2023 | 3:12 PM

Share

ಬಾಬಿ ಡಿಯೋಲ್ (Bobby Deol), ಬಾಲಿವುಡ್​ನಲ್ಲಿ ತುಸು ಜೋರಾಗಿಯೇ ಕೇಳುತ್ತಿರುವ ಹೆಸರಿದು. ಬಾಬಿ ಡಿಯೋಲ್​ಗೆ ಈ ಜನಪ್ರಿಯತೆ ಹೊಸದಲ್ಲ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಲೇ ಅವರು ಸ್ಟಾರ್ ಆಗಿದ್ದರು, ಆದರೆ ಕಾಲಾಂತರದಲ್ಲಿ ಅವರ ಸ್ಟಾರ್​ ಗಿರಿ ಕರಗಿ ಯಾರಿಗೂ ಬೇಡವಾಗಿದ್ದರು. ಆದರೆ ಅವರ ಹೆಸರು ಈಗ ಮತ್ತೆ ಬಾಲಿವುಡ್ಡಿಗರ ಬಾಯಲ್ಲಿ ಕೇಳಿ ಬರುತ್ತಿದೆ. ಕಮ್​ಬ್ಯಾಕ್ ಆದರೆ ಹೀಗೆಯೇ ಆಗಬೇಕು ಎಂದು ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಅದ್ಭುತವಾದ ಕಮ್​ಬ್ಯಾಕ್ ಅನ್ನು ಬಾಬಿ ಡಿಯೋಲ್ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗಿರುವ ‘ಅನಿಮಲ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ನಿರ್ವಹಿಸಿರುವ ವಿಲನ್ ಪಾತ್ರಕ್ಕೆ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಟೀಸರ್, ಟ್ರೈಲರ್​ಗಳಲ್ಲಿಯೇ ಬಾಬಿಯ ನಟನೆ, ಸ್ವಾಗ್ ಪ್ರೇಕ್ಷಕರಿಗೆ ಗುಂಗು ಹಿಡಿಸಿತ್ತು, ಸಿನಿಮಾ ಬಿಡುಗಡೆ ಆದ ಬಳಿಕ, ರಣ್​ಬೀರ್ ನಟನೆಗೆ ಸಿಗುತ್ತಿರುವಷ್ಟೆ ಪ್ರಶಂಸೆ, ಆದರ ಬಾಬಿ ಡಿಯೋಲ್ ಪಾತ್ರಕ್ಕೂ ಸಿಗುತ್ತಿದೆ. ಬಾಬಿ ಡಿಯೋಲ್ ಕಮ್​ಬ್ಯಾಕ್ ಜರ್ನಿಯಲ್ಲಿನ ಪವರ್​ಫುಲ್ ಪಾತ್ರ ಇದಾಗಿದೆ. ಅಂದಹಾಗೆ ಬಾಬಿಗೆ ಈ ಪಾತ್ರ ದೊರೆತಿದ್ದು ಒಂದು ವಿಶೇಷ ಕತೆ.

ಬಾಬಿ ಡಿಯೋಲ್, ಚಿತ್ರರಂಗದಲ್ಲಿ ಮೂಲೆಗುಂಪಾಗಿದ್ದ ಸಮಯದಲ್ಲಿ, ತಮ್ಮ ಇರುವಿಕೆ ಪ್ರದರ್ಶಿಸಲು ಸಣ್ಣ ಪುಟ್ಟ ಸಿನಿಮಾಗಳು, ಕಾಮಿಡಿ ಸಿನಿಮಾಗಳನ್ನು ಮಾಡುತ್ತಾ ಕೆಲವು ರಿಯಾಲಿಟಿ ಶೋಗಳಿಗೆ, ಸೆಲೆಬ್ರಿಟಿ ಕ್ರಿಕೆಟ್ ಲೀಗ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ ಮ್ಯಾಚ್​ ಒಂದರಲ್ಲಿ ಆಡುತ್ತಿದ್ದ ಸಮಯದಲ್ಲಿ ಪೆವಿಲಿಯನ್​ನಲ್ಲಿ ಕೂತು ಮ್ಯಾಚ್ ಅನ್ನು ಆಸಕ್ತಿಯಿಂದ ನೋಡುತ್ತಿದ್ದ ಬಾಬಿಯ ಚಿತ್ರವೊಂದನ್ನು ಯಾರೋ ಕ್ಲಿಕ್ಕಿಸಿದ್ದರು. ಬಹಳ ತುರುಸಿನ ಪಂದ್ಯವಾದ್ದರಿಂದ ಬಹಳ ಗಮನವಿಟ್ಟು ಬಾಬಿ ಪಂದ್ಯವನ್ನು ವೀಕ್ಷಿಸುತ್ತಿದ್ದರು.

ಇದನ್ನೂ ಓದಿ:‘ಅನಿಮಲ್​’ ಸಿನಿಮಾ ವೈಲೆಂಟ್ ಆಗಿದೆ ಎಂಬ ಆರೋಪಕ್ಕೆ ಆರ್​ಜಿವಿ ಕೊಟ್ರು ತಿರುಗೇಟು

‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಣ್ಣಿಗೆ ಯಾವಾಗಲೋ ಆ ಫೋಟೊ ಕಣ್ಣಿಗೆ ಬಿತ್ತು, ಆ ಚಿತ್ರದಲ್ಲಿ ಬಾಬಿಯ ಮುಖದಲ್ಲಿದ್ದ ಆ ತೀರ್ವತೆ, ಕಣ್ಣಿನಲ್ಲಿದ್ದ ಆ ತೀಕ್ಷಣತೆ ಬಹಳ ಇಷ್ಟವಾಯಿತಂತೆ. ‘ಆ ಚಿತ್ರ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನ್ನಿಸಿತು, ಆ ಚಿತ್ರ ನೋಡುತ್ತಾ ನೋಡುತ್ತಾ ನನಗೂ ಅದೇ ತೀವ್ರತೆ ಬರುವಂತೆ ಆಯಿತು ಆಗಲೇ ನಾನು ನಿಶ್ಚಯಿಸಿದೆ ಇವರೇ ನನ್ನ ಸಿನಿಮಾಕ್ಕೆ ವಿಲನ್ ಎಂದು’ ಇದು ಸಂದೀಪ್ ರೆಡ್ಡಿ ಬಾಬಿಯ ಆ ಚಿತ್ರದ ಬಗ್ಗೆ ಆಡಿದ್ದ ಮಾತು.

‘ಅನಿಮಲ್’ ಸಿನಿಮಾದಲ್ಲಿ ರಣ್​ಬೀರ್​ ಬಾಡಿಯನ್ನು ಮೀರಿಸುವಂತೆ ಬಾಬಿ ದೇಹವನ್ನು ಹುರಿಗಳಿಸಿಕೊಂಡಿದ್ದಾರೆ. ನಟನೆಯಲ್ಲಿಯೂ ಸಖತ್ ಮಿಂಚಿದ್ದಾರೆ. ಸಿನಿಮಾದಲ್ಲಿ ಬಾಬಿ ಡಿಯೋಲ್​ರ ಎಂಟ್ರಿ ಸೀನ್, ಎಂಟ್ರಿ ಸೀನ್​ಗೆ ಬಳಸಿರುವ ಹಾಡು ಸಖತ್ ಸದ್ದು ಮಾಡುತ್ತಿದೆ. ‘ಅನಿಮಲ್’ ಸಿನಿಮಾದ ಬಳಿಕ ಬಾಬಿಗೆ ಇನ್ನೂ ಹಲವು ಅವಕಾಶಗಳು ಅರಸಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?