‘ಅನಿಮಲ್’ ಸಿನಿಮಾ ವೈಲೆಂಟ್ ಆಗಿದೆ ಎಂಬ ಆರೋಪಕ್ಕೆ ಆರ್ಜಿವಿ ಕೊಟ್ರು ತಿರುಗೇಟು
Ranbir Kapoor: ‘ಅನಿಮಲ್’ ಸಿನಿಮಾದುದ್ದಕ್ಕೂ ರಣಬಿರ್ ಕಪೂರ್ ಅವರ ಪಾತ್ರ ಹೈಲೈಟ್ ಆಗಿದೆ. ಆರ್ಜಿವಿ ಅವರಿಗೆ ಈ ಪಾತ್ರ ಸಾಕಷ್ಟು ಇಷ್ಟ ಆಗಿದೆ. ಅವರು ರಣಬೀರ್ ಕಪೂರ್ ಅವರನ್ನು ಹಾಡಿ ಹೊಗಳಿದ್ದಾರೆ.
ರಣಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಥಿಯೇಟರ್ಗಳಲ್ಲಿ ಅಬ್ಬರಿಸುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಸಿನಿಮಾನ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೆಚ್ಚು ವೈಲೆನ್ಸ್ ತೋರಿಸಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ‘ಈ ರೀತಿಯ ಆರೋಪ ಸಖತ್ ಫನ್ನಿ ಆಗಿ ಕಾಣಿಸುತ್ತಿದೆ’ ಎಂದಿದ್ದಾರೆ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಅವರು ಚಿತ್ರವನ್ನು ಹಾಡಿಹೊಗಳಿದ್ದಾರೆ.
‘ವೈಲೆಂಟ್ ಸಿನಿಮಾದ ನೇಚರ್ ಅದು. ಸಿನಿಮಾದಲ್ಲಿ ವೈಲೆನ್ಸ್ ಹೆಚ್ಚಿದೆ ಎಂದು ನಿರ್ದೇಶಕರು ಮೊದಲಿನಿಂದಲೂ ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಟ್ರೇಲರ್ನಲ್ಲಿ ಹಾಗೂ ಸಂದರ್ಶನಗಳಲ್ಲಿ ಮೊದಲೇ ಈ ಬಗ್ಗೆ ಹೇಳಲಾಗಿದೆ. ಆದಾಗ್ಯೂ ಇದನ್ನು ವೈಲೆಂಟ್ ಸಿನಿಮಾ ಎಂದು ಕರೆಯುವುದು ನನಗೆ ಫನ್ನಿ ಎನಿಸುತ್ತದೆ. ಶಾಕ್ಗೆ ಒಳಗಾಗುವುದು ಕೂಡ ಒಂದು ಭಾವನೆ. ಈ ಭಾವನೆಯನ್ನು ಕೆರಳಿಸೋದು ಈ ಸಿನಿಮಾದ ಉದ್ದೇಶ’ ಎಂದು ರಾಮ್ ಗೋಪಾಲ್ ವರ್ಮಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
‘ಸಿನಿಮಾದಲ್ಲಿ ಅನೇಕ ಬಾರಿ ಆಶ್ಚರ್ಯವಾಗುವ ಘಟನೆ ನಡೆದಿತ್ತು. ಆದರೆ ಇದು ಕೆಲವರಿಗೆ ಅಹಿತಕರ ಆಶ್ಚರ್ಯವನ್ನು ಉಂಟುಮಾಡಿರಬಹುದು. ಹಠಾತ್ ಆಘಾತದ ದೃಶ್ಯ ಬಂದಾಗ ಅದು ಅವರನ್ನು ದಿಗ್ಭ್ರಮೆಗೊಳಿಸುತ್ತದೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
‘ಅನಿಮಲ್’ ಸಿನಿಮಾದುದ್ದಕ್ಕೂ ರಣಬಿರ್ ಕಪೂರ್ ಅವರ ಪಾತ್ರ ಹೈಲೈಟ್ ಆಗಿದೆ. ಆರ್ಜಿವಿ ಅವರಿಗೆ ಈ ಪಾತ್ರ ಸಾಕಷ್ಟು ಇಷ್ಟ ಆಗಿದೆ. ಅವರು ರಣಬೀರ್ ಕಪೂರ್ ಅವರನ್ನು ಹಾಡಿ ಹೊಗಳಿದ್ದಾರೆ. ನಿರ್ದೇಶಕರ ಶ್ರಮವನ್ನು ಕೂಡ ಮೆಚ್ಚಿದ್ದಾರೆ. ಈ ಚಿತ್ರದಲ್ಲಿ ತೃಪ್ತಿ ದಿಮ್ರಿ ನಟಿಸಿದ್ದಾರೆ. ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಆರ್ಜಿವಿ ಅವರ ಗಮನ ಸೆಳೆದಿದೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
‘ಅನಿಮಲ್’ ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಎರಡನೇ ವೀಕೆಂಡ್ನಲ್ಲೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ