ಗೋಡೌನ್‍ನಲ್ಲಿ ಭಾರೀ ಅಗ್ನಿ ಅವಘಡ, 20 ಕೋಟಿ ರೂ. ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಪರ್ಫ್ಯೂಮ್ ಗೋದಾಮು ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿದ್ದು, ಧಗಧಗ ಹೊತ್ತಿ ಉರಿದಿದೆ. ಬೆಂಗಳೂರಿನ (Bengaluru) ನೆಲಮಂಗಲ (Nelamangala) ರಸ್ತೆಯ ಮಾಕಳಿ ಬಳಿ ಈ ಅವಘಡ ಸಂಭವಿಸಿದೆ. ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಹಬ್ಬಿದ್ದು, ಭಯಾನಕ ಶಬ್ದ ಕೇಳಿಬರುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಬೆಂಕಿ ಬೀಳುತ್ತಿದ್ದಂತೆ ಅದರಲ್ಲಿದ್ದ, 40 ಸಿಬ್ಬಂದಿ ಅಲ್ಲಿಂದ ಓಡಿ ಪಾರಾಗಿದ್ದಾರೆ. ಬೆಂಕಿ ಪಕ್ಕದ ಎಸಿ ಗೋಡೌನ್‍ಗೆ ತಗುಲಿದೆ. ಅಲ್ಲದೇ ಗೋಡೌನ್‍ನಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ.
ನೆಲಮಂಗಲ, (ಫೆಬ್ರವರಿ 22) : ಇಲ್ಲಿನ ಪರ್ಫ್ಯೂಮ್ ಗೋದಾಮು ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿದ್ದು, ಧಗಧಗ ಹೊತ್ತಿ ಉರಿದಿದೆ. ಬೆಂಗಳೂರಿನ (Bengaluru) ನೆಲಮಂಗಲ (Nelamangala) ರಸ್ತೆಯ ಮಾಕಳಿ ಬಳಿ ಈ ಅವಘಡ ಸಂಭವಿಸಿದೆ. ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಹಬ್ಬಿದ್ದು, ಭಯಾನಕ ಶಬ್ದ ಕೇಳಿಬರುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಡುತ್ತಿದ್ದಾರೆ. ಬೆಂಕಿ ಬೀಳುತ್ತಿದ್ದಂತೆ ಅದರಲ್ಲಿದ್ದ, 40 ಸಿಬ್ಬಂದಿ ಅಲ್ಲಿಂದ ಓಡಿ ಪಾರಾಗಿದ್ದಾರೆ. ಬೆಂಕಿ ಪಕ್ಕದ ಎಸಿ ಗೋಡೌನ್‍ಗೆ ತಗುಲಿದೆ. ಅಲ್ಲದೇ ಗೋಡೌನ್‍ನಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ.
ಅಂತಿಮವಾಗಿ 10 ವಾಹನಗಳಿಂದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ. ಮಾಕಳಿ ಗ್ರಾಮದ ಲೋಕೇಶ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿದ್ದ 20 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ಭಸ್ಮವಾಗಿವೆ.ಮೂರು ಖಾಸಗಿ ಕಂಪನಿಗಳಿಗೆ ಎಸಿ, ಫ್ರಿಡ್ಜ್, ಪರ್ಫ್ಯೂಮ್, ಪೆಡಿಗ್ರಿ ಗೋದಾಮಿಗೆ ಬಾಡಿಗೆಗೆ ನೀಡಿದ್ದರು. ಮೊದಲು ಪರ್ಫ್ಯೂಮ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಗ್ಯಾಸ್ ಸ್ಫೋಟಗೊಂಡು ಪಕ್ಕದ ಗೋದಾಮಿಗೂ ಬೆಂಕಿ ತಗುಲಿತ್ತು. ಗೋದಾಮುಗಳಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವಘಡದಲ್ಲಿ ಐವರು ಗಾಯಗೊಂಡಿದ್ರು, ಮೂವರ ಸ್ಥಿತಿ ಗಂಭೀರವಾಗಿದೆ.
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

