ರಾಯಚೂರಿನಲ್ಲಿ ತಿಪ್ಪೆ ಸೇರಿದ ಸರ್ಕಾರಿ ಆಸ್ಪತ್ರೆ ಔಷಧಿ: ಸ್ಥಳೀಯರ ಆಕ್ರೋಶ
ರಾಯಚೂರಿನ ಎಲ್ಬಿಎಸ್ ನಗರದ ಕಸದ ಗುಂಡಿಯಲ್ಲಿ ಅವಧಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ಪತ್ರೆ ಔಷಧಿಗಳು ಪತ್ತೆಯಾಗಿವೆ. ಸಿರಿಂಜ್‌ಗಳು, ಜ್ವರ, ಕೆಮ್ಮು, ಮಲ್ಟಿವಿಟಮಿನ್ ಸಿರಪ್‌ಗಳು ಮತ್ತು ಬ್ಯಾಕ್ಟೀರಿಯಾ ನಿರೋಧಕ ಮುಲಾಮುಗಳು ಸಿಕ್ಕಿದ್ದು, ಇವು 2028ರವರೆಗೆ ಮಾನ್ಯತೆ ಹೊಂದಿವೆ. ಘಟನೆ ಕುರಿತು ಸ್ಥಳೀಯರು ಆಘಾತ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಯಚೂರು, ಫೆಬ್ರವರಿ 22: ಎಲ್ಬಿಎಸ್ ನಗರದ ಸ್ಮಶಾನದ ಬಳಿಯ ಕಸದ ಗುಂಡಿಯಲ್ಲಿ ಅವಧಿ ಇರುವ ಸರ್ಕಾರಿ ಆಸ್ಪತ್ರೆಯ ಲಕ್ಷಾಂತರ ಮೌಲ್ಯದ ಔಷಧಿಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಜ್ವರದ ಸಿರಪ್, ಡ್ರೈ ಕಫ್ ಸಿರಪ್, ಹಸಿವು ಹೆಚ್ಚಿಸುವ ಸಿರಪ್, ಮಲ್ಟಿವಿಟಮಿನ್ ಸಿರಪ್, ಸಿರಿಂಜ್‌ಗಳು ಹಾಗೂ ಬ್ಯಾಕ್ಟೀರಿಯಾ ನಿರೋಧಕ ಮುಲಾಮು ಸೇರಿದಂತೆ ವಿವಿಧ ಬಗೆಯ ಔಷಧಿಗಳನ್ನು ಸಿಬ್ಬಂದಿ ತಿಪ್ಪೆಗೆ ಬಿಸಾಡಿದ್ದಾರೆ. ಈ ಔಷಧಿಗಳು 2026, 2027 ಮತ್ತು 2028ರವರೆಗೂ ಅವಧಿ ಹೊಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇರುವಾಗ ಮತ್ತು ಬಡ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗದಿದ್ದಾಗ ಅವಧಿ ಇರುವ ಔಷಧಿಗಳನ್ನು ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಬಯಲಿಗೆಳೆದ ಯುವಕರ ತಂಡ, ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಗೌಡ ಪಾಟೀಲ್ ಅವರಿಗೆ ಮನವಿ ಮಾಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
