‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
Animal: ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ಬಳಸಲಾಗಿರುವ ವಾರ್ ಮಷಿನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದಹಾಗೆ ಈ ವಾರ್ ಮಷಿನ್ ಡಿಸೈನ್ ಮಾಡಿರುವುದು ಕನ್ನಡಿಗ ಮಂಜುನಾಥ್. ಟಿವಿ9 ಜೊತೆ ಮಂಜುನಾಥ್ ಮಾತನಾಡಿದ್ದಾರೆ.
ಅನಿಮಲ್ ಸಿನಿಮಾಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್, ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ (Box Office) 500 ಕೋಟಿ ಗಳಿಕೆ , ಸಿನಿಮಾದಲ್ಲಿ ಬಳಸಲಾಗಿರುವ ವಾರ್ ಗನ್ ಮೆಷಿನ್ ಅನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದಾರೆ. ಅಂದಹಾಗೆ ಈ ವಾರ್ ಮನಿಷ್ ಗನ್ನ ಕಾನ್ಸೆಪ್ಟ್ ಡಿಸೈನ್ ಮಾಡಿರುವುದು ಕನ್ನಡಿಗ. ಮಂಜುನಾಥ್ ಗೋಟುರು ಎಂಬುವರು ಈ ಮೆಷಿನ್ ಕಾನ್ಸೆಪ್ಟ್ ಡಿಸೈನ್ ಮಾಡಿದ್ದರು. ಅವರ ಡಿಸೈನ್ಗೆ ಸ್ಪೂರ್ತಿಯಾಗಿದ್ದ ‘ಕೆಜಿಎಫ್ 2’ ಸಿನಿಮಾದಲ್ಲಿ ತೋರಿಸಲಾಗಿದ್ದ ದೊಡ್ಡಮ್ಮ. ಸುಮಾರು ದಿನಗಳ ಕಾಲ ರಿಸರ್ಚ್ ಮಾಡಿ ಈ ಮೆಷಿನ್ ಗನ್ ಡಿಸೈನ್ ಮಾಡಿದ್ದೀನಿ , 15 ರಿಂದ 20 ಡಿಸೈನ್ ಮಾಡಿದ್ದೆ 3 ಫೈನಲ್ ಆಯ್ತು, ಅದ್ರಲ್ಲಿ ಇದನ್ನ ನಿರ್ದೇಶಕರು ಆಯ್ಕೆ ಮಾಡಿದರು. ಮುಂಬೈನಲ್ಲಿ ರೆಡಿ ಮಾಡಲಾಯ್ತು ಸ್ಟೀಲ್ ಯೂಸ್ ಮಾಡಿದ್ದಾರೆ. ಸುಮಾರು 450 ರಿಂದ 500 ಕೆಜಿ ಮೆಷಿನ್ ಇದು ತುಂಬಾ ಜನ ಕೆಲಸ ಮಾಡಿದ್ದಾರೆ , ಯಶ್ ಸ್ಟೀಲ್ ಆ್ಯಡ್ ಗೂ ಡಿಸೈನ್ ಮಾಡಿದ್ದೆ ಅವಕಾಶ ಬಂದ್ರೆ ಕನ್ನಡ ಸಿನಿಮಾಗಳಿಗೂ ಕಾನ್ಸೆಪ್ಟ್ ಡಿಸೈನ್ ಮಾಡ್ತಿನಿ ಎಂದಿದ್ದಾರೆ ಮಂಜುನಾಥ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 07, 2023 10:39 PM
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

