ಬಾಕ್ಸ್ ಆಫೀಸ್​ನಲ್ಲಿ ನಕಲಿ ಲೆಕ್ಕ ನೀಡಿದ ಸಿನಿಮಾಗಳಿವು? ಕೇಳಿಬಂದಿತ್ತು ಗಂಭೀರ ಆರೋಪ

ಇತ್ತೀಚೆಗೆ ರಿಲೀಸ್ ಆದ ಅನೇಕ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಾಚಿಕೊಂಡಿವೆ. ಅನೇಕ ಸಿನಿಮಾಗಳು ನಕಲಿ ಲೆಕ್ಕ ನೀಡಿವೆ ಎಂಬುದು ಅನೇಕರ ಆರೋಪ. ಈ ರೀತಿ ಆರೋಪ ಹೊತ್ತ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬಾಕ್ಸ್ ಆಫೀಸ್​ನಲ್ಲಿ ನಕಲಿ ಲೆಕ್ಕ ನೀಡಿದ ಸಿನಿಮಾಗಳಿವು? ಕೇಳಿಬಂದಿತ್ತು ಗಂಭೀರ ಆರೋಪ
ಬಾಕ್ಸ್ ಆಫೀಸ್​ನಲ್ಲಿ ನಕಲಿ ಲೆಕ್ಕ ನೀಡಿದ ಸಿನಿಮಾಗಳಿವು?
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 17, 2023 | 9:00 AM

ಇತ್ತೀಚೆಗೆ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ಆದಾಗ್ಯೂ ಜನರು ಹೋಗಿ ಸಿನಿಮಾ ನೋಡುತ್ತಿದ್ದಾರೆ. ಬಿಗ್ ಬಜೆಟ್ ಚಿತ್ರಗಳಿಗೆ ಇದು ಸಹಕಾರಿ ಆಗುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ (Box Office) ಸಿನಿಮಾ ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. ಮೊದಲೆಲ್ಲ ಸಿನಿಮಾಗಳು ನೂರು ಕೋಟಿ ರೂಪಾಯಿ ಬಾಚಿಕೊಂಡರೆ ಅದು ದೊಡ್ಡ ಸಾಧನೆ ಆಗಿತ್ತು. ಆದರೆ, ಈಗ ಅನೇಕ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುತ್ತಿವೆ. ಹೀಗಾಗಿ, ಮೈಲಿಗಲ್ಲನ್ನು ಬದಲಾಯಿಸಲಾಗಿದೆ. ಇತ್ತೀಚೆಗೆ ರಿಲೀಸ್ ಆದ ಅನೇಕ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಾಚಿಕೊಂಡಿವೆ. ಅನೇಕ ಸಿನಿಮಾಗಳು ನಕಲಿ ಲೆಕ್ಕ ನೀಡಿವೆ ಎಂಬುದು ಅನೇಕರ ಆರೋಪ. ಈ ರೀತಿ ಆರೋಪ ಹೊತ್ತ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

‘ಟೈಗರ್ 3’

ಸಾಲು ಸಾಲು ಸೋಲು ಕಂಡವರು ಸಲ್ಮಾನ್ ಖಾನ್. ‘ಟೈಗರ್ 3’ ಚಿತ್ರದ ಮೂಲಕ ಅವರು ಗೆದ್ದು ಬೀಗಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 200 ಕೋಟಿ ರೂಪಾಯಿ ಗಳಿಕೆ ಮಾಡುವ ಸನಿಹದಲ್ಲಿದೆ. ಈ ಚಿತ್ರದ ನಿರ್ಮಾಪಕರು ನಕಲಿ ಲೆಕ್ಕ ನೀಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ, ನಿರ್ಮಾಪಕರು ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸಲ್ಮಾನ್ ಖಾನ್ ಅಭಿಮಾನಿಗಳಂತೂ ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಪಠಾಣ್

ಶಾರುಖ್ ಖಾನ್ ಅವರು 2018ರಲ್ಲಿ ‘ಜೀರೋ’ ಸಿನಿಮಾ ಮೂಲಕ ದೊಡ್ಡ ಸೋಲು ಕಂಡರು. ಇದಾದ ಬಳಿಕ ಅವರು ಒಂದು ದೊಡ್ಡ ಬ್ರೇಕ್ ಪಡೆದರು. ‘ಪಠಾಣ್’ ಚಿತ್ರದ ಮೂಲಕ ಅವರು ಕಂಬ್ಯಾಕ್ ಮಾಡಿದರು. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ನಕಲಿ ಲೆಕ್ಕ ಎಂದು ಶಾರುಖ್ ಹೇಟರ್ಸ್ ಹೇಳಿದ್ದಾರೆ.

ಜವಾನ್

‘ಜವಾನ್’ ಸಿನಿಮಾ ರಿಲೀಸ್ ಆಗಿ ಹಿಂದಿ ವಿಭಾಗದಲ್ಲಿ ಭರ್ಜರಿ ಗಳಿಕೆ ಮಾಡಿತು. ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಿನಿಮಾದ ಗಳಿಕೆ ಲೆಕ್ಕದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬುದು ಕೆಲವರ ಆರೋಪ. ಆದರೆ, ಇದನ್ನು ಶಾರುಖ್ ಖಾನ್ ಅಭಿಮಾನಿಗಳು ಒಪ್ಪಿಲ್ಲ. ಈ ಚಿತ್ರದಿಂದ ಶಾರುಖ್ ಖಾನ್ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ.

 ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

ಈ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ನಟಿಸಿದ್ದರು. ಈ ಸಿನಿಮಾ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಗಳಿಕೆ ಬಗ್ಗೆ ನಟಿ ಕಂಗನಾ ರಣಾವತ್ ಅವರು ಅನುಮಾನ ವ್ಯಕ್ತಪಡಿಸಿದ್ದರು. ಟ್ರೇಡ್ ಅನಲಿಸ್ಟ್ ಕೋಮಲ್ ಕೂಡ ಇದೇ ರೀತಿಯ ಆರೋಪ ಮಾಡಿದ್ದರು.

ಲಿಯೋ

ದಳಪತಿ ವಿಜಯ್ ಅವರ ನಟನೆಯ, ಲೋಕೇಶ್ ಕನಗರಾಜ್ ನಿರ್ದೇಶನದ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಆದಾಗ್ಯೂ ಚಿತ್ರ ಭರ್ಜರಿ ಗಳಿಕೆ ಮಾಡಿತು. ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾಸ್ತ್ರ

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ವಿಎಫ್​ಎಕ್ಸ್ ಕಾರಣಕ್ಕೆ ಟ್ರೋಲ್ ಆಗಿತ್ತು. ಆದಾಗ್ಯೂ ಸಿನಿಮಾ ಭರ್ಜರಿ ಗಳಿಕೆ ಮಾಡಿತು. ಈ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಕಂಗನಾ ರಣಾವತ್ ಅವರು ಈ ಬಗ್ಗೆ ಟೀಕೆ ಮಾಡಿದ್ದರು.

ಇದನ್ನೂ ಓದಿ: SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

‘ಕಿಸಿ ಕ ಭಾಯ್ ಕಿಸಿ ಕಿ ಜಾನ್

ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ವಿಮರ್ಶೆಯಲ್ಲಿ ಸೋಲು ಕಂಡಿತ್ತು. ಈ ಚಿತ್ರದ ಬಗ್ಗೆ ನಕಲಿ ಮಾಹಿತಿ ನೀಡಲಾಯಿತು ಎಂದು ಅನೇಕರು ಆರೋಪಿಸಿದರು. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Fri, 17 November 23