AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಸಹಿ ಹಾಕಿದ ನಟಿ ತ್ರಿಶಾ; ಹೀರೋ ಯಾರು?

ತ್ರಿಶಾ ಅವರು ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಕಾಶ್ಮೀರ ಮೊದಲಾದ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇಷ್ಟೇ ಅಲ್ಲ, ಅಜಿತ್ ನಟನೆಯ ಸಿನಿಮಾಗೂ ಅವರು ನಾಯಕಿ. ಈ ಚಿತ್ರದ ಶೂಟಿಂಗ್ ಸದ್ಯ ದುಬೈನಲ್ಲಿ ನಡೆಯುತ್ತಿದೆ. ಈಗ ಕಮಲ್ ಹಾಸನ್ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ.

ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಸಹಿ ಹಾಕಿದ ನಟಿ ತ್ರಿಶಾ; ಹೀರೋ ಯಾರು?
ತ್ರಿಶಾ ಕೃಷ್ಣನ್
ರಾಜೇಶ್ ದುಗ್ಗುಮನೆ
|

Updated on:Sep 13, 2023 | 10:41 AM

Share

ನಟಿ ತ್ರಿಶಾ (Trisha Krishnan) ಅವರು ಚಿತ್ರರಂಗಕ್ಕೆ ಬಂದು ಹಲವು ವರ್ಷ ಕಳೆದಿದೆ. ಹತ್ತು ಹಲವು ಬಗೆಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ತ್ರಿಶಾಗೆ ಈಗಲೂ ಚಿತ್ರರಂಗದಲ್ಲಿ ಬೇಡಿಕೆ ಇದೆ. ತಮಗೆ ಒಪ್ಪುವಂಥ ಸಿನಿಮಾ ಮಾಡಿ ಅವರು ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ಅವರ ನಟನೆ ನೋಡಿ ಜನರು ಮರುಳಾದರು. ಈಗ ಅವರು ದೊಡ್ಡ ಬಜೆಟ್ ಚಿತ್ರ ಒಂದಕ್ಕೆ ಸಹಿ ಹಾಕಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ತ್ರಿಶಾ ಅವರು ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದೆ. ಕಾಶ್ಮೀರ ಮೊದಲಾದ ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇಷ್ಟೇ ಅಲ್ಲ, ಅಜಿತ್ ನಟನೆಯ ‘ವಿದಮುಯರ್ಚಿ’ ಸಿನಿಮಾಗೂ ಅವರು ನಾಯಕಿ. ಈ ಚಿತ್ರದ ಶೂಟಿಂಗ್ ಸದ್ಯ ದುಬೈನಲ್ಲಿ ನಡೆಯುತ್ತಿದೆ. ಈಗ ಕಮಲ್ ಹಾಸನ್ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಕಮಲ್ ಹಾಸನ್ ಹಾಗೂ ನಿರ್ದೇಶಕ ಮಣಿರತ್ನಂ ಅವರು ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ ಎನ್ನಲಾಗಿದೆ. ಇದು ಕಮಲ್ ಹಾಸನ್ ಅವರ 234ನೇ ಚಿತ್ರ ಆಗಿರಲಿದೆ. ಈ ಸಿನಿಮಾಗೆ ತ್ರಿಶಾ ನಾಯಕಿ ಎನ್ನುವ ವಿಚಾರ ಗೊತ್ತಾಗಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಅವರೇ ಬಂಡವಾಳ ಹೂಡುತ್ತಿದ್ದಾರೆ.

ಇತ್ತೀಚೆಗೆ ಕಮಲ್ ಹಾಸನ್ ಅವರು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ಶೂಟಿಂಗ್ ತರಬೇತಿ ಪಡೆಯುತ್ತಿರುವಿದು ಕಂಡುಬಂದಿತ್ತು. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ. ತ್ರಿಶಾ ನಟನೆಯ ‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೂ ಮಣಿರತ್ನಂ ಅವರ ನಿರ್ದೇಶನ ಇತ್ತು.

ಇದನ್ನೂ ಓದಿ: ಸೀರೆಯುಟ್ಟು ಮಿಂಚಿದ ‘ಪವರ್​ ಸ್ಟಾರ್​’ ಸಿನಿಮಾದ ಬೆಡಗಿ ತ್ರಿಶಾ ಕೃಷ್ಣನ್​​

2014ರಲ್ಲಿ ರಿಲೀಸ್ ಆದ ‘ಪವರ್’ ಚಿತ್ರಕ್ಕೆ ತ್ರಿಶಾ ನಾಯಕಿ ಆಗಿದ್ದರು. ಪುನೀತ್ ರಾಜ್​ಕುಮಾರ್ ನಟನೆಯ ಈ ಸಿನಿಮಾದಲ್ಲಿ ಅವರು ಮಿಂಚಿದರು. ‘ದ್ವಿತ್ವ’ ಚಿತ್ರದಲ್ಲಿ ಪುನೀತ್ ಜೊತೆ ಅವರು ತೆರೆ ಹಂಚಿಕೊಳ್ಳಬೇಕಿತ್ತು. ಆದರೆ, ಪುನೀತ್ ನಿಧನದ ಬಳಿಕ ಸಿನಿಮಾ ನಿಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:24 am, Wed, 13 September 23

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ