ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಲ್ಲ ಅನುರಾಗ್ ಕಶ್ಯಪ್; ಕಾರಣ ತಿಳಿಸಿದ ನಿರ್ದೇಶಕ

ಅನುರಾಗ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆರಂಭದಲ್ಲಿ ಅವರು ಚಿತ್ರಕಥೆ ಬರೆಯುತ್ತಿದ್ದರು. ಆ ಬಳಿಕ 2003ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟರು. ‘ಗ್ಯಾಂಗ್ ಆಫ್ ವಸ್ಸೇಪುರ್’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಜನಪ್ರಿಯತೆ ಪಡೆದರು.

ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಲ್ಲ ಅನುರಾಗ್ ಕಶ್ಯಪ್; ಕಾರಣ ತಿಳಿಸಿದ ನಿರ್ದೇಶಕ
ಸಲ್ಮಾನ್-ಅನುರಾಗ್-ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on:Sep 13, 2023 | 11:13 AM

ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ಕೆಟ್ಟ ಬೈಗುಳಗಳು ಹೇರಳವಾಗಿರುತ್ತವೆ. ಒಂದು ವರ್ಗದ ಜನರಿಗೆ ಅವರ ಸಿನಿಮಾ ಇಷ್ಟವಾಗುತ್ತದೆ. ಅನುರಾಗ್ ಕಶ್ಯಪ್ ಅವರು ಬಹುತೇಕ ಹೊಸಬರ ಜೊತೆ ಸಿನಿಮಾ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅನುರಾಗ್ ಕಶ್ಯಪ್ ಅವರು ವಿವರಿಸಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಅನುರಾಗ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆರಂಭದಲ್ಲಿ ಅವರು ಚಿತ್ರಕಥೆ ಬರೆಯುತ್ತಿದ್ದರು. ಆ ಬಳಿಕ 2003ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟರು. ‘ಗ್ಯಾಂಗ್ ಆಫ್ ವಸ್ಸೇಪುರ್’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಅವರು ಜನಪ್ರಿಯತೆ ಪಡೆದರು. ನಿರ್ಮಾಪಕನಾಗಿ, ನಟನಾಗಿಯೂ ಚಿತ್ರರಂಗದಲ್ಲಿ ಅನುರಾಗ್ ಕಶ್ಯಪ್ ಗುರುತಿಸಿಕೊಂಡಿದ್ದಾರೆ. ಈಗ ಅವರು ಸ್ಟಾರ್ಸ್ ಜೊತೆ ಕೆಲಸ ಮಾಡುವ ವಿಚಾರದ ಕುರಿತು ಮಾತನಾಡಿದ್ದಾರೆ.

‘ನಾನು ಇಲ್ಲಿಗೆ ಬಂದಿದ್ದು ಸಿನಿಮಾ ಮಾಡಲು. ಆರಂಭದಲ್ಲಿ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆಗೆ ಬಲಿಯಾಗಿದ್ದೆ. ಸ್ಟಾರ್ಸ್​ ಇಲ್ಲದೆ ನೀವು ಈ ಚಿತ್ರವನ್ನು ಹೇಗೆ ಮಾಡುತ್ತೀರಿ ಎಂದು ಎಲ್ಲರೂ ನನಗೆ ಕೇಳುತ್ತಿದ್ದರು. ನೀವು ಸ್ಟಾರ್ ಜೊತೆ ಕೆಲಸ ಮಾಡುವಾಗ ಅವರ ಅಭಿಮಾನಿಗಳನ್ನು ಸಂತೋಷ ಪಡಿಸದೇ ಇದ್ದರೆ ಅವರು ನಿಮ್ಮನ್ನು ದೂರ ಇಡುತ್ತಾರೆ. ನನ್ನ ಸಿನಿಮಾ ಕೂಡ ಇದೇ ರೀತಿ ಕ್ಯಾನ್ಸಲ್ ಆಗಿತ್ತು. ನಾನು ಯಾರನ್ನೂ ಖುಷಿಪಡಿಸಲು ಸಿನಿಮಾ ಮಾಡುತ್ತಿರಲಿಲ್ಲ’ ಎಂದಿದ್ದಾರೆ ಅನುರಾಗ್.

ಇದನ್ನೂ ಓದಿ: ‘ರಾಜಮೌಳಿ ನಮ್ಮಿಂದ ಕಳೆದು ಹೋಗಬಹುದು’; ಆತಂಕ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್ ಮಾಡಿರುವ ಬಹುತೇಕ ಸಿನಿಮಾಗಳು ಪ್ರಯೋಗಾತ್ಮಕವಾಗಿವೆ. ಈ ರೀತಿಯ ಸಿನಿಮಾಗಳನ್ನು ಸ್ಟಾರ್ಸ್ ಜೊತೆ ಮಾಡೋಕೆ ಸಾಧ್ಯವಿಲ್ಲ. ಒಂದೊಮ್ಮೆ ಮಾಡಿದರೂ ಅದನ್ನು ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇಲ್ಲ. ಈ ಕಾರಣದಿಂದಲೇ ಅನುರಾಗ್ ಕಶ್ಯಪ್ ಸ್ಟಾರ್ಸ್ ಸಹವಾಸಕ್ಕೆ ತೆರಳುತ್ತಿಲ್ಲ. ಅವರಿಷ್ಟದವರ ಜೊತೆ ಚಿತ್ರಗಳನ್ನು ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:13 am, Wed, 13 September 23

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ