‘ಅನುಬಂಧ’ ವೇದಿಕೆ ಮೇಲೆ ‘ಮುಂಗಾರು ಮಳೆ’ ಮರು ಸೃಷ್ಟಿ; ಗಣೇಶ್ ಡೈಲಾಗ್​ಗೆ ಅಭಿಮಾನಿಗಳು ಖುಷ್

‘ಅನುಬಂಧ ಅವಾರ್ಡ್ಸ್​’ ಕಲರ್ಸ್ ಕನ್ನಡ ನಡೆಸುವ ಕಾರ್ಯಕ್ರಮ. ಕಲರ್ಸ್ ಕನ್ನಡ ವಾಹಿನಿಯ ಎಲ್ಲಾ ಧಾರಾವಾಹಿಯ ಕಲಾವಿದರು ಒಂದು ಕಡೆ ಸೇರುತ್ತಾರೆ. ಅತ್ಯುತ್ತಮ ಅತ್ತೆ, ಅತ್ಯುತ್ತಮ ಸೊಸೆ ಮತ್ತಿತ್ಯಾದಿ ವಿಭಾಗದಲ್ಲಿ ಅವಾರ್ಡ್ ನೀಡಲಾಗುತ್ತದೆ. ಅಷ್ಟೇ ಅಲ್ಲ ಮನರಂಜನೆ ಕಾರ್ಯಕ್ರಮಗಳೂ ಹೇರಳವಾಗಿ ಇರುತ್ತವೆ.

‘ಅನುಬಂಧ’ ವೇದಿಕೆ ಮೇಲೆ ‘ಮುಂಗಾರು ಮಳೆ’ ಮರು ಸೃಷ್ಟಿ; ಗಣೇಶ್ ಡೈಲಾಗ್​ಗೆ ಅಭಿಮಾನಿಗಳು ಖುಷ್
ಪದ್ಮಜಾ ರಾವ್-ಗಣೇಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Sep 13, 2023 | 12:06 PM

2006ರಲ್ಲಿ ರಿಲೀಸ್ ಆದ ಮುಂಗಾರು ಮಳೆ’ ಸಿನಿಮಾ (Mungaru Male Movie) ಸೂಪರ್ ಹಿಟ್ ಆಯಿತು. ಯೋಗರಾಜ್ ಭಟ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಈ ಸಿನಿಮಾ ಬಗ್ಗೆ ಜನರು ಈಗಲೂ ಮಾತನಾಡುತ್ತಾರೆ. ಗಣೇಶ್ (Ganesh)​ ಅವರನ್ನು ಸೂಪರ್ ಸ್ಟಾರ್ ಮಾಡಿದ್ದು ಇದೇ ಸಿನಿಮಾ. ಈ ಚಿತ್ರದ ಡೈಲಾಗ್​, ಹಾಡುಗಳು ಈಗಲೂ ಅನೇಕರ ಫೇವರಿಟ್. ಅನೇಕ ವೇದಿಕೆಗಳಲ್ಲಿ ಈ ಸಿನಿಮಾದ ಬಗ್ಗೆ ಮಾತನಾಡಲಾಗುತ್ತದೆ. ಕಲರ್ಸ್ ಕನ್ನಡದ ‘ಅನುಬಂಧ’ ಅವಾರ್ಡ್​​ಗೆ (Anubandha Awards)  ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಿದ್ದರು. ಅವರು ‘ಮುಂಗಾರು ಮಳೆ’ ಚಿತ್ರದ ಡೈಲಾಗ್ ಹೊಡೆದಿದ್ದಾರೆ. ಇದಕ್ಕೆ ಶಿಳ್ಳೆ, ಚಪ್ಪಾಳೆ ಬಿದ್ದಿದೆ.

‘ಅನುಬಂಧ ಅವಾರ್ಡ್ಸ್​’ ಕಲರ್ಸ್ ಕನ್ನಡ ನಡೆಸುವ ಕಾರ್ಯಕ್ರಮ. ಕಲರ್ಸ್ ಕನ್ನಡ ವಾಹಿನಿಯ ಎಲ್ಲಾ ಧಾರಾವಾಹಿಯ ಕಲಾವಿದರು ಒಂದು ಕಡೆ ಸೇರುತ್ತಾರೆ. ಅತ್ಯುತ್ತಮ ಅತ್ತೆ, ಅತ್ಯುತ್ತಮ ಸೊಸೆ ಮತ್ತಿತ್ಯಾದಿ ವಿಭಾಗದಲ್ಲಿ ಅವಾರ್ಡ್ ನೀಡಲಾಗುತ್ತದೆ. ಅಷ್ಟೇ ಅಲ್ಲ ಮನರಂಜನೆ ಕಾರ್ಯಕ್ರಮಗಳೂ ಹೇರಳವಾಗಿ ಇರುತ್ತವೆ. ಈ ವರ್ಷ 10ನೇ ವರ್ಷದ ‘ಅನುಬಂಧ’ ಆಗಿರುವುದರಿಂದ ಸಖತ್ ಅದ್ದೂರಿಯಾಗಿ ಮಾಡಲಾಗುತ್ತಿದೆ. ಈ ವೇದಿಕೆ ಮೇಲೆ ಗಣೇಶ್ ಹಾಗೂ ‘ಮುಂಗಾರು ಮಳೆ’ ಸಿನಿಮಾದಲ್ಲಿ ನಟಿಸಿದ್ದ ಪದ್ಮಜಾ ರಾವ್ ಅವರು ಒಟ್ಟಾಗಿ ಸೇರಿದರು.

ಪದ್ಮಜಾ ರಾವ್ ಅವರು ‘ಮುಂಗಾರು ಮಳೆ’ ಸಿನಿಮಾದಲ್ಲಿ ನಂದಿನಿ ತಾಯಿ ಪಾತ್ರ ಮಾಡಿದ್ದರು. ಅವರು ಈಗ ಕಲರ್ಸ್ ಕನ್ನಡದ ಕುಟುಂಬದಲ್ಲಿದ್ದಾರೆ. ಅರ್ಥಾತ್ ‘ಭಾಗ್ಯ ಲಕ್ಷ್ಮಿ’ ಧಾರಾವಾಹಿಯಲ್ಲಿ ಅವರು ಕುಸುಮಾ ಹೆಸರಿನ ಅತ್ತೆ ಪಾತ್ರ ಮಾಡಿದ್ದಾರೆ. ಅವರು ವೇದಿಕೆ ಮೇಲಿದ್ದರು. ಈ ವೇಳೆ ಗಣೇಶ್ ಅವರ ಎಂಟ್ರಿ ಆಗಿದೆ. ಅಲ್ಲೇ ಇದ್ದ ನಿರೂಪಕಿ ಅನುಪಮಾ ಗೌಡ ಅವರು ‘ಕುಸುಮತ್ತೆ ನಂದಿನಿ ಆಗ್ತಾರೆ, ನೀವು ಪ್ರೀತಮ್ ಆಗ್ತೀರಾ’ ಎಂದರು. ಇದಕ್ಕೆ ಗಣೇಶ್ ಹಾಗೂ ಪದ್ಮಜಾ ಒಪ್ಪಿದರು.

ಆಗ ಪದ್ಮಜಾ ರಾವ್ ಅವರು, ‘ಟೈಮ್ ಆಯ್ತು ಮನೆಗೆ ಹೋಗೋಣ ನಡಿ’ ಎಂದು ಗಣೇಶ್ ಬಳಿ ಹೇಳುತ್ತಾರೆ. ಇದಕ್ಕೆ ಉತ್ತರಿಸೋ ಗಣೇಶ್, ‘ಈ ಟೈಮ್​ ಬಗ್ಗೆ ಯಾಕ್ರೀ ಮಾತಾಡ್ತೀರಿ. ಈ ದಿಲ್​, ಹೃದಯ, ಹಾರ್ಟ್ ಅಂತಾರಲ್ಲ, ಅದನ್ನು ಕೈ ಹಾಕಿಕೊಂಡು ಪರ ಪರ ಅಂತ ಕೆರ್ಕೊಂಡುಬಿಟಿದೀನಿ ಕಣ್ರೀ’ ಎಂದಿದ್ದಾರೆ.

ಇದನ್ನೂ ಓದಿ:ಒಂದಾಗುತ್ತಿದ್ದಾರೆ ರಮೇಶ್-ಗಣೇಶ್: ಭಿನ್ನ ಪೋಸ್ಟರ್​ ಬಿಡುಗಡೆ 

ಗಣೇಶ್ ಡೈಲಾಗ್​ಗೆ ‘ಕಲರ್ಸ್’ ಕುಟುಂಬದವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ‘ಅನುಬಂಧ ಅವಾರ್ಡ್ಸ್’ ನೋಡಲು ವೀಕ್ಷಕರು ಕಾದಿದ್ದಾರೆ. ಸೆಪ್ಟೆಂಬರ್ 22, 23, 24ರಂದು ಸಂಜೆ 7 ಗಂಟೆಗೆ ಧಾರಾವಾಹಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:03 pm, Wed, 13 September 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್