AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಾಗುತ್ತಿದ್ದಾರೆ ರಮೇಶ್-ಗಣೇಶ್: ಭಿನ್ನ ಪೋಸ್ಟರ್​ ಬಿಡುಗಡೆ

Ramesh Arvind: ನಟ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಒಂದಕ್ಕಾಗಿ ಒಂದಾಗುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಪೋಸ್ಟರ್ ಬಹಳ ಭಿನ್ನವಾಗಿದೆ.

ಒಂದಾಗುತ್ತಿದ್ದಾರೆ ರಮೇಶ್-ಗಣೇಶ್: ಭಿನ್ನ ಪೋಸ್ಟರ್​ ಬಿಡುಗಡೆ
ರಮೇಶ್-ಗಣೇಶ್
ಮಂಜುನಾಥ ಸಿ.
|

Updated on: Sep 10, 2023 | 7:40 PM

Share

ನಟ ರಮೇಶ್ ಅರವಿಂದ್ (Ramesh Aravind) ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ಕೆಲವು ಸಿನಿಮಾಗಳ ಪೋಸ್ಟರ್​ಗಳು ಬಿಡುಗಡೆ ಆಗಿವೆ. ಅವುಗಳಲ್ಲಿ ಬಹುವಾಗಿ ಗಮನ ಸೆಳೆಯುತ್ತಿರುವುದು ನಟ ರಮೇಶ್, ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಿಗೆ ಸೇರಿ ನಟಿಸುತ್ತಿರುವ ಹೊಸ ಸಿನಿಮಾ. ರಮೇಶ್-ಗಣೇಶ್ (Ganesh) ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಭಿನ್ನವಾಗಿರುವ ಈ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ.

ಪೋಸ್ಟರ್​ನಲ್ಲಿ ವಿದೇಶಿ ಸೈನಿಕರು ಸಾಲಾಗಿ ಕೂತು ಗ್ರೂಪ್​ ಫೋಟೊಕ್ಕೆ ಫೋಸು ನೀಡಿದ್ದಾರೆ. ಆ ವಿದೇಶಿ ಸೈನಿಕರ ನಡುವೆ ರಮೇಶ್ ಹಾಗೂ ನಟ ಗಣೇಶ್ ಜೋಕರ್ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೂಲಕ ನಿರ್ದೇಶಕ ಏನ ಹೇಳ ಹೊರಟಿದ್ದಾನೆ. ಸಿನಿಮಾದ ಕತೆ ಯಾವ ವಿಷಯವನ್ನು ಆಧರಿಸಿದೆ ಎಂಬುದು ಕುತೂಹಲ ಕೆರಳಿಸಿದೆ.

ರಮೇಶ್ ಅರವಿಂದ್ ಇನ್​ಸ್ಟಾಗ್ರಾಂ ಪೋಸ್ಟ್

ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, ನನ್ನ 107ನೇ ಸಿನಿಮಾದ ಮಾಹಿತಿ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಕೊಲಾಬರೇಟ್ ಆಗುತ್ತಿರುವುದು ಇನ್ನಷ್ಟು ಖುಷಿ ತಂದಿದೆ ಎಂದಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಸದ್ಯಕ್ಕೆ ಪ್ರೊಡಕ್ಷನ್ ನಂಬರ್ 6 ಎಂದಷ್ಟೆ ಕರೆಯಲಾಗಿದೆ. ಸಿನಿಮಾದ ಪೋಸ್ಟರ್ ಮೇಲೆ ‘ಗ್ರೇಟೆಸ್ಟ್ ಶೋ ಸೀನ್ ಎವರ್’ ಎಂದು ಬರೆಯಲಾಗಿದೆ. ಸಿನಿಮಾವನ್ನು ವಿಖ್ಯಾತ್ ಎಆರ್ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:ರಮೇಶ್ ಅರವಿಂದ್ ಜನ್ಮದಿನದಂದು ಘೋಷಣೆ ಆಯ್ತು ಹೊಸ ಸಿನಿಮಾ; ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ

ರಮೇಶ್ ಅರವಿಂದ್ ಹುಟ್ಟುಹಬ್ಬದಂದು ಈ ಸಿನಿಮಾದ ಜೊತೆಗೆ ‘ಡೈಜಿ’ ಹೆಸರಿನ ಸಿನಿಮಾ ಸಹ ಘೋಷಣೆ ಆಗಿದೆ. ರಮೇಶ್ ಅರವಿಂದ್ ಅವರ ‘ಶಿವಾಜಿ ಸೂರತ್ಕಲ್’ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಆಕಾಶ್ ಶ್ರೀವತ್ಸ ಅವರೇ ಈ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಬಹಳ ಭಿನ್ನವಾಗಿದೆ. ವಿಚಿತ್ರವಾಗಿ ಮೇಕಪ್ ಮೆತ್ತಿಕೊಂಡ ವ್ಯಕ್ತಿಯೊಬ್ಬನ ಅರ್ಧ ಚಿತ್ರವನ್ನು ಪೋಸ್ಟರ್​ನಲ್ಲಿ ನೀಡಲಾಗಿದೆ. ಈ ಸಿನಿಮಾದಲ್ಲಿ ಸಖತ್ ಭಿನ್ನ ಲುಕ್​ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ಳಲಿದ್ದಾರೆ.

ರಮೇಶ್ ಅರವಿಂದ್ ಇಂದು (ಸೆಪ್ಟೆಂಬರ್ 10) ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆಯಷ್ಟೆ ‘ನೀನಾದೆ ನಾ’ ಧಾರಾವಾಹಿ ಸೆಟ್​ಗೆ ಭೇಟಿ ನೀಡಿದ್ದ ನಟ ರಮೇಶ್, ಧಾರಾವಾಹಿಯು 100 ಎಪಿಸೋಡ್ ಪೂರ್ಣಗೊಳಿಸಿದ ಖುಷಿಯನ್ನು ಧಾರಾವಾಹಿ ನಟರೊಟ್ಟಿಗೆ ಹಂಚಿಕೊಂಡಿದ್ದರು. ಅಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು ನಟ ರಮೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ