Radhika Pandit: ಸಮುದ್ರ ತೀರ ಹಾಗೂ ಕುಟುಂಬ; ಯಶ್-ರಾಧಿಕಾ ಫ್ಯಾಮಿಲಿ ಟೈಮ್ ಹೇಗಿತ್ತು ನೋಡಿ

ರಾಧಿಕಾ ಪಂಡಿತ್ ಅವರು ಪ್ರತಿ ಭಾನುವಾರ ಅಭಿಮಾನಿಗಳಿಗಾಗಿ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈ ವಾರವೂ ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ರಾಧಿಕಾ ಪಂಡಿತ್ ಅವರು ಸಮುದ್ರ ತೀರದಲ್ಲಿ ಕುಳಿತಿದ್ದಾರೆ. ಯಶ್ ಕೂಡ ಅವರ ಜೊತೆ ಇದ್ದಾರೆ. ಯಶ್ ಹೆಗಲ ಮೇಲೆ ಆಯ್ರಾ ಯಶ್ ಕೂಡ ಕುಳಿತಿದ್ದಾರೆ.

Radhika Pandit: ಸಮುದ್ರ ತೀರ ಹಾಗೂ ಕುಟುಂಬ; ಯಶ್-ರಾಧಿಕಾ ಫ್ಯಾಮಿಲಿ ಟೈಮ್ ಹೇಗಿತ್ತು ನೋಡಿ
ರಾಧಿಕಾ, ಯಶ್, ಆಯ್ರಾ
Follow us
ರಾಜೇಶ್ ದುಗ್ಗುಮನೆ
|

Updated on:Sep 10, 2023 | 11:01 AM

ಯಶ್ ಅವರು ‘ಕೆಜಿಎಫ್ 2’ ಸಿನಿಮಾ (KGF Chapter 2 Movie) ಬಳಿಕ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಅವರು ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಬ್ಬ-ಹರಿದಿನಗಳನ್ನು ಅವರು ಕುಟುಂಬದ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ರಾಧಿಕಾ ಪಂಡಿತ್ (Radhika Pandit) ಅವರು ಆಗಾಗ ಹಂಚಿಕೊಳ್ಳುತ್ತಾರೆ. ಈಗ ರಾಧಿಕಾ ಪಂಡಿತ್ ಅವರು ಹಂಚಿಕೊಂಡ ಹೊಸ ಫೋಟೋ ಗಮನ ಸೆಳೆಯುತ್ತಿದೆ. ಈ ಫೋಟೋದಲ್ಲಿ ಯಶ್-ಆಯ್ರಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ರಾಧಿಕಾ ಪಂಡಿತ್ ಅವರು ಪ್ರತಿ ಭಾನುವಾರ ಅಭಿಮಾನಿಗಳಿಗಾಗಿ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈ ವಾರವೂ ಅದನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ರಾಧಿಕಾ ಪಂಡಿತ್ ಅವರು ಸಮುದ್ರ ತೀರದಲ್ಲಿ ಕುಳಿತಿದ್ದಾರೆ. ಯಶ್ ಕೂಡ ಅವರ ಜೊತೆ ಇದ್ದಾರೆ. ಯಶ್ ಹೆಗಲ ಮೇಲೆ ಆಯ್ರಾ ಯಶ್ ಕೂಡ ಕುಳಿತಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ರಾಧಿಕಾ ಹಾಗೂ ಯಶ್ ಅವರ ಅಭಿಮಾನಿಗಳು ಈ ಫೋಟೋನ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ನೀವು ಯಾವಾಗಲೂ ಸ್ಯಾಂಡಲ್​ವುಡ್​ನ ರಾಜಕುಮಾರಿ’; ರಾಧಿಕಾ ಪಂಡಿತ್ ಫೋಟೋಗೆ ಫ್ಯಾನ್ಸ್ ಕಮೆಂಟ್

ಯಶ್​ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಕಾರಣದಿಂದಲೇ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳ ಬಗ್ಗೆ ಯಾವುವಾದರೂ ಅಪ್​​ಡೇಟ್ ಇದ್ದರೆ ಅದು ಲೀಕ್ ಆಗಿ ಬಿಡುತ್ತದೆ. ಆದರೆ, ಯಶ್ ಈ ವಿಚಾರದಲ್ಲಿ ಸಾಕಷ್ಟು ರಹಸ್ಯ ಕಾಯ್ದುಕೊಂಡಿದ್ದಾರೆ. ಬಾಲಿವುಡ್​ ಚಿತ್ರದಿಂದ ಅವರಿಗೆ ಆಫರ್ ಬಂದರೂ ಯಶ್ ಇದನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಹೇಗಿತ್ತು ನೋಡಿ ಆಯ್ರಾ-ಯಥರ್ವ ರಕ್ಷಾ ಬಂಧನ ಆಚರಣೆ; ಫೋಟೋಗಳಲ್ಲಿ ವಿವರಿಸಿದ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಆದರೆ, ಅವರು ನಟನೆಗೆ ಮರಳಿಲ್ಲ. ಮಕ್ಕಳ ಆರೈಕೆಯಲ್ಲಿ ರಾಧಿಕಾ ಪಂಡಿತ್ ಅವರು ಬ್ಯುಸಿ ಆಗಿದ್ದಾರೆ. ಈ ಕಾರಣದಿಂದಲೇ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:00 am, Sun, 10 September 23

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ