AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರಿ ಶಿಷ್ಯನ ಮೊದಲ ಸಿನಿಮಾ ‘ಸೋಮು ಸೌಂಡ್ ಇಂಜಿನಿಯರ್’: ಹಾಡು ಬಿಡುಗಡೆ

Somu Sound Engineer: ಜನಪ್ರಿಯ ನಿರ್ದೇಶಕ ಸುಕ್ಕ ಸೂರಿಯ ಶಿಷ್ಯ ಅಭಿ, ಇದೇ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕನಾಗಿ ನಿರ್ದೇಶನ ಮಾಡಿರುವ 'ಸೋಮು ಸೌಂಡ್ ಇಂಜಿನಿಯರ್' ಸಿನಿಮಾದ ಹಾಡೊಂದು ಇಂದು ಬಿಡುಗಡೆ ಆಗಿದೆ. ಈ ಸಿನಿಮಾ ಹಲವು ಕಾರಣಗಳಿಗೆ ಗಮನ ಸೆಳೆದಿದೆ.

ಸೂರಿ ಶಿಷ್ಯನ ಮೊದಲ ಸಿನಿಮಾ 'ಸೋಮು ಸೌಂಡ್ ಇಂಜಿನಿಯರ್': ಹಾಡು ಬಿಡುಗಡೆ
ಸೋಮು ಸೌಂಡ್ ಇಂಜಿನಿಯರ್
Follow us
ಮಂಜುನಾಥ ಸಿ.
|

Updated on: Sep 09, 2023 | 8:12 PM

ನಿರ್ದೇಶಕ ಸುಕ್ಕ ಸೂರಿ (Soori) ಗರಡಿಯಲ್ಲಿ ಪಳಗಿರುವ ಅಭಿ ಹೊಸದೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಹೆಸರು ಸೋಮು ಸೌಂಡ್ ಎಂಜಿನಿಯರ್. ವಿಭಿನ್ನ ಶೀರ್ಷಿಕೆ ಜೊತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಮೊದಲ ಹಾಡು ಬಿಡುಗಡೆ. ಹಾಡು ಹಳ್ಳಿ ಸೊಗಡು ಒಳಗೊಂಡಿರುವ ಜೊತೆಗೆ ಸೋಮುವಿನ ವ್ಯಕ್ತಿತ್ವದ ಪರಿಚಯ ಸಹ ಮಾಡಿಕೊಡುತ್ತಿದೆ.

ಎ2 ಮ್ಯೂಸಿಕ್ ಯೂಟ್ಯೂಬ್​ನಲ್ಲಿ ‘ಸೋಮು ಸೌಂಡ್ ಇಂಜಿನಿಯರ್’ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಧನಂಜಯ್ ರಂಜನ್ ಹಾಡಿನ ಸಾಹಿತ್ಯ ಬರೆದಿದ್ದಾರೆ. ಸ್ವರೂಪ್ ಖಾನ್ ಹಾಡಿಗೆ ದನಿಯಾಗಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಾಯಕ ಸೋಮುವಿನ ಹಾವ-ಭಾವ, ವರ್ತನೆಯನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್​ನಲ್ಲಿ ಮೂಡಿಬಂದಿರುವ ಹಾಡಿಗೆ ಚರಣ್ ಅದ್ಭುತವಾದ ಮ್ಯೂಸಿಕ್ ಟಚ್ ಕೊಟ್ಟಿದ್ದಾರೆ.

ಸಲಗ ಸಿನಿಮಾದಲ್ಲಿ ‘ಕೆಂಡ’ ಪಾತ್ರದಲ್ಲಿ ಮಿಂಚಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿದ್ದಾನೆ. ಬೆಳಗಾವಿ ಚೆಲುವೆ ಶೃತಿ ಪಾಟೀಲ್ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪಾಪಾ ಪಾಂಡು ಖ್ಯಾತಿಯ ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮ ಸೌಂಡ್ ಇಂಜಿನಿಯರ್ ಗೆ ಬಂಡವಾಳ ಹೂಡಿದ್ದಾರೆ. ಮಾಸ್ತಿ, ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಚರಣ್ ಸಂಗೀತದ ಪುಳಕ ಚಿತ್ರದ ಪ್ಲಸ್ ಪಾಯಿಂಟ್. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಇದನ್ನೂ ಓದಿ:ವಿಶಾಲ್ ನಟನೆಯ ಮಾರ್ಕ್ ಆಂಟೊನಿ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ

‘ಕಡ್ಡಿಪುಡಿ’, ‘ಕೆಂಡಸಂಪಿಗೆ’, ‘ದೊಡ್ಡಮನೆ ಹುಡುಗ’, ‘ಟಗರು’ ಚಿತ್ರಗಳಿಗೂ ಡೈರೆಕ್ಟರ್ ಅಭಿ ಸಹ ನಿರ್ದೇಶಕರಾಗಿ ದುಡಿದಿ ಅನುಭವ ಹೊಂದಿದ್ದಾರೆ. ಅಭಿ ಈ ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕ ಆಗುತ್ತಿದ್ದಾರೆ. ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಸದ್ಯಕ್ಕೆ ರೀ ರೆಕಾರ್ಡಿಂಗ್ ಕೆಲಸ ಚಾಲ್ತಿಯಲ್ಲಿದೆ.

‘ಸೋಮು ಸೌಂಡ್‌ ಇಂಜಿನಿಯರ್‌’ ಪಕ್ಕಾ ಹಳ್ಳಿ ಕಥೆ. ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ಇಳಕಲ್‌, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಈ ಹಿಂದೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು ಟೀಸರ್‌ನಲ್ಲಿ ಇವೆಲ್ಲದರ ಒಂದು ಝಲಕ್‌ ಇದೆ. ರಗಡ್ ಹುಡುಗನ ಕತೆಯನ್ನು ಭಾವನಾತ್ಮಕ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ