ಅಭಿಮಾನಿಗಳು ಹೇಳಿದಂತೆ ಕೇಳಿದ ಉಪೇಂದ್ರ; ಸೆಪ್ಟೆಂಬರ್ 18ಕ್ಕೆ ‘ಯುಐ’ ಚಿತ್ರದ ಟೀಸರ್

ಉಪೇಂದ್ರ ಅವರ ಮನೆಯ ಎದುರು ಅಭಿಮಾನಿಗಳು ನೆರೆದಿರುತ್ತಾರೆ. ಅವರು ಟೀಸರ್ ಬೇಕೆ ಬೇಕು ಎಂದು ಹಠ ಹಿಡಿದು ಕೂರುತ್ತಾರೆ. ಇದಕ್ಕೆ ಉಪ್ಪಿ ಕೂಡ ಒಪ್ಪುತ್ತಾರೆ. ಟೀಸರ್​ನ ಥಿಯೇಟರ್​ನಲ್ಲಿ ನೋಡುವ ಅವಕಾಶವನ್ನು ಉಪೇಂದ್ರ ಮಾಡಿಕೊಡುತ್ತಿದ್ದಾರೆ.

ಅಭಿಮಾನಿಗಳು ಹೇಳಿದಂತೆ ಕೇಳಿದ ಉಪೇಂದ್ರ; ಸೆಪ್ಟೆಂಬರ್ 18ಕ್ಕೆ ‘ಯುಐ’ ಚಿತ್ರದ ಟೀಸರ್
ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on:Sep 11, 2023 | 2:10 PM

ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಯುಐ’ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಬಿಟ್ಟರೆ ಮತ್ತಾವುದೇ ಅಪ್​ಡೇಟ್ ಸಿಕ್ಕಿರಲಿಲ್ಲ. ಈಗ ಉಪೇಂದ್ರ ಚಿತ್ರದ ಬಗ್ಗೆ ಬಿಗ್ ಅಪ್​ಡೇಟ್ ಒಂದನ್ನು ನೀಡಿದ್ದಾರೆ. ‘ಯುಐ’ ಚಿತ್ರದ (UI Movie) ಟೀಸರ್ ಸೆಪ್ಟೆಂಬರ್ 18ರಂದು ರಿಲೀಸ್ ಆಗಲಿದೆ. ಇದರ ಜೊತೆಗೆ ಒಂದು ಸರ್​ಪ್ರೈಸ್ ಕೂಡ ಇದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಹೊಸ ವಿಡಿಯೋ ರಿಲೀಸ್ ಮಾಡಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಈ ಮೊದಲು ‘ಯುಐ’ ಚಿತ್ರದ ಟೀಸರ್ ಬಿಡುಗಡೆ ಮಾಡಲ್ಲ ಎಂದು ಉಪೇಂದ್ರ ಹೇಳಿದ್ದರು. ಹಾಗಂತ ಅವರು ಗಂಭೀರವಾಗಿ ಇದನ್ನು ಹೇಳಿರಲಿಲ್ಲ. ನಿರ್ಮಾಪಕರು ಉಪೇಂದ್ರ ಮನೆಗೆ ಬಂದು ಟೀಸರ್ ಬಿಡುಗಡೆ ಮಾಡೋಣ ಎನ್ನುತ್ತಾರೆ. ಆದರೆ, ಇದಕ್ಕೆ ಉಪ್ಪಿ ಒಪ್ಪುವುದಿಲ್ಲ. ಈ ವಿಡಿಯೋನ ಮುಂದುವರಿದ ಭಾಗ ಇಂದು (ಸೆಪ್ಟೆಂಬರ್ 11) ರಿಲೀಸ್ ಆಗಿದೆ.

ಉಪೇಂದ್ರ ಅವರ ಮನೆಯ ಎದುರು ಅಭಿಮಾನಿಗಳು ನೆರೆದಿರುತ್ತಾರೆ. ಅವರು ಟೀಸರ್ ಬೇಕೆ ಬೇಕು ಎಂದು ಹಠ ಹಿಡಿದು ಕೂರುತ್ತಾರೆ. ಇದಕ್ಕೆ ಉಪ್ಪಿ ಕೂಡ ಒಪ್ಪುತ್ತಾರೆ. ಟೀಸರ್​ನ ಥಿಯೇಟರ್​ನಲ್ಲಿ ನೋಡುವ ಅವಕಾಶವನ್ನು ಉಪೇಂದ್ರ ಮಾಡಿಕೊಡುತ್ತಿದ್ದಾರೆ. ಅರ್ಥಾತ್ ಸೆಪ್ಟೆಂಬರ್ 18ರಂದು ಮಧ್ಯಾಹ್ನ 3 ಗಂಟೆಗೆ ಊರ್ವಶಿ ಥಿಯೇಟರ್​ನಲ್ಲಿ ಟೀಸರ್ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ ದೊಡ್ಡ ಪರದೆಯಲ್ಲಿ ಟೀಸರ್ ನೋಡುವ ಅವಕಾಶ ದೊರೆತಿದೆ. ‘ಸ್ಟಾರ್ಸ್​ ದೇವರ ಮಾತು ಕೇಳ್ತಾರೋ ಇಲ್ಲವೋ, ಅಭಿಮಾನಿ ದೇವರ ಮಾತನ್ನಂತೂ ಕೇಳುತ್ತಾರೆ’ ಎಂಬ ಕೆಪಿ ಶ್ರೀಕಾಂತ್ ಡೈಲಾಗ್ ಗಮನ ಸೆಳೆದಿದೆ.

ಇದನ್ನೂ ಓದಿ: ‘ಪಬ್ಲಿಸಿಟಿ ಏಕೆ ಮಾಡಬೇಕು? ‘ಯುಐ’ ಫಸ್ಟ್ ಲುಕ್ ರಿವೀಲ್ ಮಾಡಲು ಉಪೇಂದ್ರಗಿಲ್ಲ ಆಸಕ್ತಿ

‘ಯುಐ’ ಚಿತ್ರವನ್ನು ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಉಪೇಂದ್ರ ಅವರು ನಿರ್ದೇಶನಕ್ಕೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರು ನಟಿಸಿದ್ದಾರೆ ಕೂಡ. ಸಿನಿಮಾ ರಿಲೀಸ್ ದಿನಾಂಕ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:10 pm, Mon, 11 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ