‘ಕಾಟೇರ’ ಚಿತ್ರಕ್ಕೆ 100 ದಿನ​ ಶೂಟಿಂಗ್​; 85 ಡೇಸ್​ ಕಾಲ್​ಶೀಟ್​ ನಿಯಮದ ಬಗ್ಗೆ ಮಾತಾಡಿದ ದರ್ಶನ್​

ನಿರ್ದೇಶಕ ತರುಣ್​ ಸುಧೀರ್​ ಮತ್ತು ದರ್ಶನ್​ ಅವರು ಜೊತೆಯಾಗಿ ‘ಕಾಟೇರ’ ಸಿನಿಮಾ ಮಾಡುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. 100 ದಿನಗಳ ಕಾಲ ಶೂಟಿಂಗ್​ ಮಾಡಿರುವ ಈ ಚಿತ್ರತಂಡದವರು ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಗ ಕಾಲ್​ಶೀಟ್​ ಬಗ್ಗೆ ದರ್ಶನ್​ ಪ್ರಸ್ತಾಪಿಸಿದರು.

‘ಕಾಟೇರ’ ಚಿತ್ರಕ್ಕೆ 100 ದಿನ​ ಶೂಟಿಂಗ್​; 85 ಡೇಸ್​ ಕಾಲ್​ಶೀಟ್​ ನಿಯಮದ ಬಗ್ಗೆ ಮಾತಾಡಿದ ದರ್ಶನ್​
ದರ್ಶನ್, ರಾಕ್​ಲೈನ್​ ವೆಂಕಟೇಶ್​
Follow us
ಮದನ್​ ಕುಮಾರ್​
|

Updated on: Sep 11, 2023 | 9:40 PM

ನಟ ದರ್ಶನ್​ (Darshan) ಅವರು ಕೆಲವೊಂದು ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದಾರೆ. ಸಿನಿಮಾಗಳಿಗೆ ಕಾಲ್​ಶೀಟ್​ ನೀಡುವ ವಿಚಾರದಲ್ಲಿ ಅವರು ತಮ್ಮದೇ ನಿಯಮ ಪಾಲಿಸುತ್ತಾರೆ. ಯಾವುದೇ ಚಿತ್ರಕ್ಕೆ ಅವರು ನೀಡುವುದು 85 ದಿನಗಳ ಕಾಲ್​ಶೀಟ್​ ಮಾತ್ರ. ಈ ಬಗ್ಗೆ ‘ಕಾಟೇರ’ (Kaatera) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ತರುಣ್​ ಸುಧೀರ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಕ್​ಲೈನ್​ ವೆಂಕಟೇಶ್​ (Rockline Venkatesh) ಅವರು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ‘ಕಾಟೇರ’ ಸಿನಿಮಾಗೆ 100 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಅದರಲ್ಲಿ ದರ್ಶನ್​ ಅವರು ಎಷ್ಟು ದಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ? ಇನ್ನು ಎಷ್ಟು ದಿನ ಅವರ ಕಾಲ್​ಶೀಟ್​ ಬಾಕಿ ಇದೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

‘ರಾಬರ್ಟ್​’ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ತರುಣ್​ ಸುಧೀರ್​ ಮತ್ತು ದರ್ಶನ್​ ಅವರು ಜೊತೆಯಾಗಿ ‘ಕಾಟೇರ’ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. 100 ದಿನಗಳ ಕಾಲ ಶೂಟಿಂಗ್​ ಮಾಡಿರುವ ಈ ಚಿತ್ರತಂಡದವರು ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಗ ಕಾಲ್​ಶೀಟ್​ ಬಗ್ಗೆ ದರ್ಶನ್​ ಪ್ರಸ್ತಾಪಿಸಿದರು. ತಾವು ‘ಕಾಟೇರ’ ಚಿತ್ರಕ್ಕೆ ಈವರೆಗೆ 71 ದಿನಗಳ ಕಾಲ ಚಿತ್ರೀಕರಣ ಮಾಡಿರುವುದಾಗಿ ಅವರು ತಿಳಿಸಿದರು.

ಇದನ್ನೂ ಓದಿ: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ನಟಿ ಆರಾಧನಾ ಫೋಟೋಗಳು

‘100 ದಿನ ಆಯ್ತು ಅಂತ ಎಲ್ಲರೂ ಕೇಳಬಹುದು. ಅಂದಿನಿಂದ ಇಂದಿನ ತನಕ ನನ್ನ ರೂಲ್ಸ್​ ಬದಲಾಗಿಲ್ಲ. ನಾನು ಡೇಟ್​ ನೀಡಿರುವುದು 85 ದಿನ ಅಷ್ಟೇ. ಇವತ್ತಿಗೆ ನನ್ನದು 71 ದಿನ ಆಗಿದೆ. ಇನ್ನು 30 ದಿನ ಟೀಮ್​ನವರು ಅವರ ಕೆಲಸ ಮಾಡಿಕೊಂಡಿದ್ದಾರೆ. ನನ್ನದು ಇನ್ನು 15 ದಿನ ಇದೆ. ಒಂದೊಂದು ಹಾಡಿಗೆ ಮೂರು ದಿನ ಬೇಕು ಅಂದುಕೊಂಡರೂ ಸರಿಯಾಗಿ 85ನೇ ದಿನಕ್ಕೆ ನನ್ನ ಕೆಲಸ ಮುಗಿಯುತ್ತದೆ. ತರುಣ್​ ಅವರಿಗೆ ಅದರ ಪ್ಲ್ಯಾನ್​ ತುಂಬ ಚೆನ್ನಾಗಿ ಗೊತ್ತು’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ: Kaatera Press Meet Live: ‘ಕಾಟೇರ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ದರ್ಶನ್​ ಮಾತು; ಇಲ್ಲಿದೆ ಲೈವ್​ ವಿಡಿಯೋ

‘ಇಂದು ಕ್ಲೈಮ್ಯಾಕ್ಸ್​ ಶೂಟಿಂಗ್​ ಮಾಡಿದ್ದೇವೆ. ಇನ್ನು ಮೂರು ಸಾಂಗ್​ ಚಿತ್ರೀಕರಣ ಆಗಬೇಕು. ಡಬ್ಬಿಂಗ್​ ಕೂಡ ಆಗಿದೆ. ಶೇಕಡ 90ರಷ್ಟು ಕೆಲಸ ಮುಗಿದಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್​ ಮಾಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳುವ ಮೂಲಕ ದರ್ಶನ್​ ಅವರು ಶೂಟಿಂಗ್​ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ದರ್ಶನ್​ ಜೊತೆ ನಟಿಸುವ ಅವಕಾಶವನ್ನು ಅವರು ಪಡೆದುಕೊಂಡಿದ್ದಾರೆ. ಆ ಬಗ್ಗೆ ಮಾಲಾಶ್ರೀ ಅವರಿಗೆ ಹೆಮ್ಮೆ ಇದೆ. ಆರಾಧನಾ ಅವರ ಪ್ರತಿಭೆ ಬಗ್ಗೆ ದರ್ಶನ್​ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ