AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಲಸು ರಾಜಕೀಯ, ದುರಹಂಕಾರ ತೃಣಮೂಲ ಕಾಂಗ್ರೆಸ್​ ಅನ್ನು ನಾಶಪಡಿಸುತ್ತೆ: ಪ್ರಧಾನಿ ಮೋದಿ

ಹೊಲಸು ರಾಜಕೀಯ, ದುರಹಂಕಾರ ತೃಣಮೂಲ ಕಾಂಗ್ರೆಸ್​ ಅನ್ನು ನಾಶಪಡಿಸುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಡಾರ್ಜಿಲಿಂಗ್​ ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾದ ಅವಮಾನದ ಬಗ್ಗೆ ಅವರು ಮಾತನಾಡಿದ್ದಾರೆ. ದ್ರೌಪದಿ ಮುರ್ಮು ಭಾಗವಹಿಸಿದ್ದ 9 ನೇ ಅಂತರರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ನಡೆದ ದುರಾಡಳಿತವನ್ನು ಉಲ್ಲೇಖಿಸಿದ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ದುರಹಂಕಾರಿ ಎಂದು ಕರೆದರು.

ಹೊಲಸು ರಾಜಕೀಯ, ದುರಹಂಕಾರ ತೃಣಮೂಲ ಕಾಂಗ್ರೆಸ್​ ಅನ್ನು ನಾಶಪಡಿಸುತ್ತೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Mar 08, 2026 | 3:33 PM

Share

ನವದೆಹಲಿ, ಮಾರ್ಚ್​ 08: ಹೊಲಸು ರಾಜಕೀಯ, ದುರಹಂಕಾರ ತೃಣಮೂಲ ಕಾಂಗ್ರೆಸ್​ ಅನ್ನು ನಾಶಪಡಿಸುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಿಡಿಕಾರಿದ್ದಾರೆ. ಡಾರ್ಜಿಲಿಂಗ್​ ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗಾದ ಅವಮಾನದ ಬಗ್ಗೆ ಅವರು ಮಾತನಾಡಿದ್ದಾರೆ. ದ್ರೌಪದಿ ಮುರ್ಮು ಭಾಗವಹಿಸಿದ್ದ 9 ನೇ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ನಡೆದ ದುರಾಡಳಿತವನ್ನು ಉಲ್ಲೇಖಿಸಿದ ಮೋದಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ದುರಹಂಕಾರಿ ಎಂದು ಕರೆದರು.

ಪಕ್ಷದ ಅಹಂಕಾರ ಮತ್ತು ಕೊಳಕು ರಾಜಕೀಯವನ್ನು ಬಂಗಾಳದ ಜನರು ಶೀಘ್ರದಲ್ಲೇ ಛಿದ್ರಗೊಳಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವನು ಅಂತಿಮವಾಗಿ ಅಹಂಕಾರದಿಂದ ನಾಶವಾಗುತ್ತಾನೆ ಎಂದು ಹೇಳಲಾಗುತ್ತದೆ. ಇಂದು, ದ್ರೌಪದಿ ಮುರ್ಮು ಅವರ ಘನತೆಗೆ ಅವಮಾನ ಮಾಡಿದ ಟಿಎಂಸಿಯ ಕೊಳಕು ರಾಜಕೀಯ ಮತ್ತು ಅಧಿಕಾರದ ದುರಹಂಕಾರವು ಶೀಘ್ರದಲ್ಲೇ ಛಿದ್ರವಾಗಲಿದೆ ಎಂದರು.

ಪಶ್ಚಿಮ ಬಂಗಾಳದ ಪ್ರಬುದ್ಧ ಜನರು ಒಬ್ಬ ಮಹಿಳೆ, ಬುಡಕಟ್ಟು ಜನಾಂಗದವರು, ದೇಶದ ರಾಷ್ಟ್ರಪತಿಯನ್ನು ಅವಮಾನಿಸಿದ್ದಕ್ಕಾಗಿ ಟಿಎಂಸಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ದೆಹಲಿ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುವಾಗ ಇದನ್ನು ಉಲ್ಲೇಖಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್​ಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ಯಾವ ಕಡೆಯಿಂದಲೂ ಅನಿಸುತ್ತಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ರಾಷ್ಟ್ರಪತಿ ಆಕ್ರೋಶ ವ್ಯಕ್ತಪಡಿಸಿದ್ದರು.

ನಾನು ಕೂಡ ಬಂಗಾಳದ ಮಹಿಳೆ, ಮಮತಾ ನೀವು ನನ್ನ ಸಹೋದರಿ ಇದ್ದಂತೆ, ನಾನು ಕೂಡ ಬಂಗಾಳದ ಮಗಳು, ಇಲ್ಲಿಗೆ ಬರಲು ನನಗೇಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಮಮತಾ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
‘ಧುರಂಧರ್ 2’, ‘ಕೇರಳ ಸ್ಟೋರಿ’ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ರಹಾನೆ ಅಬ್ಬರಕ್ಕೆ ಹೌಹಾರಿದ ಮುಂಬೈ ಬೌಲರ್ಸ್
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಜಿಎಂ ಸಿದ್ದೇಶ್ವರ್, ರೇಣುಕಾಚಾರ್ಯರನ್ನು ಒಗ್ಗೂಡಿಸಿದ ವಿಜಯೇಂದ್ರ
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿರುವ B-52 ಬಾಂಬರ್!
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?
ತಾಯಿ, ಅಕ್ಕನ ಕತ್ತು ಸೀಳಿ ಯುವಕ ಆತ್ಮಹತ್ಯೆಗೆ ಯತ್ನ: ಅಸಲಿಗೆ ಆಗಿದ್ದೇನು?