Droupadi Murmu
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು 2022 ರ ಜುಲೈ 25ರಂದು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಅವರು 2015 ರಿಂದ 2021 ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿದ್ದರು. 1958 ರ ಜೂನ್ 20 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಸಂತಾಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮುರ್ಮು ಅವರ ಆರಂಭಿಕ ಜೀವನ ಕಷ್ಟಗಳು ಮತ್ತು ಹೋರಾಟಗಳಿಂದ ಕೂಡಿತ್ತು. ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಅವರು ಸ್ವ ಪ್ರಯತ್ನದಿಂದ ತನ್ನ ಹೆಚ್ಚಿನ ಅಧ್ಯಯನಕ್ಕಾಗಿ ಭುವನೇಶ್ವರಕ್ಕೆ ತೆರಳಿದರು. ಭುವನೇಶ್ವರದ ರಮಾದೇವಿ ಮಹಿಳಾ ಮಹಾವಿದ್ಯಾಲಯದಿಂದ ಕಲಾ ಪದವಿಯನ್ನು ಪಡೆದರು. ತಮ್ಮ ಹಳ್ಳಿಯಿಂದ ಕಾಲೇಜಿಗೆ ಹೋದ ಮೊದಲ ಹುಡುಗಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
1979 ರಿಂದ 1983 ರವರೆಗೆ ಒಡಿಶಾ ಸರ್ಕಾರದ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದರು. ನಂತರ, 1994 ರಿಂದ 1997 ರವರೆಗೆ, ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮುರ್ಮು 2000 ರಲ್ಲಿ ರಾಯರಂಗ್‌ಪುರ ಕ್ಷೇತ್ರದಿಂದ ಒಡಿಶಾ ವಿಧಾನಸಭೆಗೆ ಆಯ್ಕೆಯಾದರು ಮತ್ತು 2009 ರವರೆಗೆ ಎರಡು ಅವಧಿಗೆ ಶಾಸಕರಾಗಿದ್ದರು. ಈ ಅವಧಿಯಲ್ಲಿ, ಅವರು 2000 ಮಾರ್ಚ್ 6 ರಿಂದ 2002 ರ ಆಗಸ್ಟ್ 6 ರವರೆಗೆ ಒಡಿಶಾ ಸರ್ಕಾರದ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾಗಿ ಮತ್ತು 2002 ಆಗಸ್ಟ್ 6 ರಿಂದ 2004 ರ ಮೇ 16 ವರೆಗೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲಗಳ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು
ತಿರುಪತಿ ದೇವಸ್ಥಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಇಲ್ಲಿಗೆ ಸಮೀಪದ ತಿರುಮಲ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರಪತಿಗಳು ಗುರುವಾರ ತಿರುಪತಿ ತಲುಪಿದ್ದರು. ತಿರುಚನೂರಿನ ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನದಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಅವರು ಇಂದು ಬೆಳಿಗ್ಗೆ ಪದ್ಮಾವತಿ ಅತಿಥಿ ಗೃಹದಿಂದ ಹೊರಟು ಶ್ರೀ ಭೂ ವರಾಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಂದ ಅವರು ತಿರುಮಲ ತಿರುಪತಿ ದೇವಸ್ಥಾನವನ್ನು ತಲುಪಿದರು. ಅಲ್ಲಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು, ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಮತ್ತು ಇತರ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ತಿರುಪತಿಯ ದೇವಾಲಯದಲ್ಲಿರುವ 'ಧ್ವಜಸ್ಥಂಭ'ದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ರಾಷ್ಟ್ರಪತಿ ದ್ರೌಪದಿ ಮುರ್ಮು ದೇವರ ದರ್ಶನ ಪಡೆದರು.
- Sushma Chakre
- Updated on: Nov 21, 2025
- 8:49 pm
ವಿವಿಧ ವಲಯಗಳಲ್ಲಿ ಬೋಟ್ಸ್ವಾನದ ಜೊತೆಗಿನ ಸಂಬಂಧ ಗಟ್ಟಿಗೊಳಿಸಲು ಭಾರತ ಬದ್ಧ; ರಾಷ್ಟ್ರಪತಿ ದ್ರೌಪದಿ ಮುರ್ಮು
ವಿಶ್ವದ ಅತಿದೊಡ್ಡ ವಜ್ರ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾದ ಬೋಟ್ಸ್ವಾನ ರಾಷ್ಟ್ರೀಯ ಅಸೆಂಬ್ಲಿಯ ಸಂಸದರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತವು ತನ್ನ ಅಭಿವೃದ್ಧಿ ಅನುಭವವನ್ನು ಹಂಚಿಕೊಳ್ಳುವ ಮತ್ತು ಎರಡೂ ರಾಷ್ಟ್ರಗಳಿಗೆ ಪ್ರಯೋಜನಕಾರಿಯಾದ ಪಾಲುದಾರಿಕೆಯನ್ನು ನಿರ್ಮಿಸುವ ಬಯಕೆಯನ್ನು ಹೊಂದಿದೆ ಎಂದರು. ನವೀಕರಿಸಬಹುದಾದ ಇಂಧನ, ಡಿಜಿಟಲ್ ನಾವೀನ್ಯತೆ, ಔಷಧೀಯ ಮತ್ತು ಗಣಿಗಾರಿಕೆಯಲ್ಲಿ ಸಹಯೋಗದ ಅವಕಾಶಗಳನ್ನು ಎತ್ತಿ ತೋರಿಸುವ ಮೂಲಕ ವಿವಿಧ ವಲಯಗಳಲ್ಲಿ ಬೋಟ್ಸ್ವಾನದೊಂದಿಗಿನ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತವು ಬದ್ಧವಾಗಿದೆ ಎಂದು ಹೇಳಿದ್ದಾರೆ.
- Sushma Chakre
- Updated on: Nov 12, 2025
- 10:01 pm
ಭಾರತದ ಹೆಣ್ಣುಮಕ್ಕಳು ಯುದ್ಧವಿಮಾನವನ್ನೂ ಹಾರಿಸುತ್ತಿದ್ದಾರೆ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸಂದೇಶ
ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿ ಪಾಕಿಸ್ತಾನಕ್ಕೆ ನೀಡಿದ ಸಂದೇಶದಲ್ಲಿ ಶಿವಾಂಗಿ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. 2 ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಆಗ ಅವರೊಂದಿಗೆ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಕೂಡ ಇದ್ದರು. ಇದೇ ಶಿವಾಂಗಿ ಸಿಂಗ್ ಅವರನ್ನು ಸೆರೆಹಿಡಿದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪಾಕ್ಗೆ ಸಂದೇಶ ರವಾನಿಸಿರುವ ಪ್ರಧಾನಿ ಮೋದಿ "ಇಂದು, ನಮ್ಮ ಹೆಣ್ಣುಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
- Sushma Chakre
- Updated on: Oct 31, 2025
- 8:10 pm
Video: ಫೈಟರ್ ಪ್ಲೇಟ್ ಸೂಟ್ ಧರಿಸಿ ರಫೇಲ್ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಂಬಾಲಾ ವಾಯುನೆಲೆಯಿಂದ ಫ್ರೆಂಚ್ ನಿರ್ಮಿತ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ವಾಯುಪಡೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಕೂಡ ಉಪಸ್ಥಿತರಿದ್ದರು. 2023 ರಲ್ಲಿ, ರಾಷ್ಟ್ರಪತಿ ಮುರ್ಮು ಅವರು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಸುಖೋಯ್-30MKI ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು.
- Nayana Rajeev
- Updated on: Oct 29, 2025
- 11:37 am
Video: ಕೇರಳ: ಲ್ಯಾಂಡಿಂಗ್ ಪ್ಯಾಡ್ನಲ್ಲಿ ಸಿಲುಕಿದ ರಾಷ್ಟ್ರಪತಿ ಮುರ್ಮು ಇದ್ದ ಹೆಲಿಕಾಪ್ಟರ್
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದ ಹೆಲಿಕಾಪ್ಟರ್ ಕೇರಳದಲ್ಲಿ ಲ್ಯಾಂಡಿಂಗ್ ಪ್ಯಾಡ್ನಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಅವರು ಶಬರಿಮಲೆಗೆ ಭೇಟಿ ನೀಡುವ ವೇಳೆ ಹೆಲಿಕಾಪ್ಟರ್ ಹೊಸದಾಗಿ ಕಾಂಕ್ರೀಟ್ ಮಾಡಲಾಗಿದ್ದ ಲ್ಯಾಂಡಿಂಗ್ ಪ್ಯಾಡ್ ಮೇಲೆ ಇಳಿಯಿತು. ಬಳಿಕ ಹೆಲಿಕಾಪ್ಟರ್‌ನ ಒಂದು ಭಾಗ ಡಾಂಬರಿನಲ್ಲಿ ಸಿಲುಕಿಕೊಂಡಿತ್ತು. ರಾಷ್ಟ್ರಪತಿ ಮುರ್ಮು ರಸ್ತೆ ಮೂಲಕ ಶಬರಿಮಲೆಯ ತಪ್ಪಲಿನಲ್ಲಿರುವ ಪಂಪಾಗೆ ತೆರಳಿದ ನಂತರ, ಹಲವಾರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ವಾಯುಪಡೆಯ ಎಂಐ -17 ಹೆಲಿಕಾಪ್ಟರ್‌ನ ಚಕ್ರಗಳನ್ನು ತಳ್ಳುತ್ತಿರುವುದು ಕಂಡುಬಂದಿತ್ತು.
- Nayana Rajeev
- Updated on: Oct 22, 2025
- 11:34 am
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೀಪಾವಳಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ
ರಾಷ್ಟ್ರಪತಿ ಭವನದಲ್ಲಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಭಾರತೀಯರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಹಬ್ಬದ ಸಮಯದಲ್ಲಿ ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಅವರು ಒತ್ತಿ ಹೇಳಿದ್ದಾರೆ.
- Sushma Chakre
- Updated on: Oct 20, 2025
- 9:14 pm
ಕನ್ನಡ ಗೊತ್ತಾ ಎಂದ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ನಗುತ್ತಲೇ ಕೌಂಟರ್ ಕೊಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು!
ನಿಮಗೆ ಕನ್ನಡ ಗೊತ್ತೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನಯವಾಗಿಯೇ ತಿರುಗೇಟು ನೀಡಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕನ್ನಡ ನನ್ನ ಮಾತೃಭಾಷೆ ಅಲ್ಲವಾದರೂ ಭಾರತದ ಎಲ್ಲ ಭಾಷೆಗಳು, ಸಂಸ್ಕೃತಿಗಳು ಹಾಗೂ ಪರಂಪರೆಗಳನ್ನು ಗೌರವಿಸುತ್ತೇನೆ ಎಂದು ಮುರ್ಮು ಹೇಳಿದರು. ಮುರ್ಮು ಹೇಳಿಕೆ ಎಲ್ಲರ ಹೃದಯ ಗೆದ್ದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
- Ganapathi Sharma
- Updated on: Sep 2, 2025
- 1:01 pm
ಮೈಸೂರು: ರಾಷ್ಟ್ರಪತಿ ಸ್ವಾಗತಕ್ಕೆ ಸ್ವಚ್ಛತೆ; 50ಕ್ಕೂ ಹೆಚ್ಚು ಅಂಗಡಿಗಳು ತೆರವು, ವ್ಯಾಪಾರಿಗಳು ಆಕ್ರೋಶ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಮುನ್ನ ಮೈಸೂರು ಮಹಾನಗರ ಪಾಲಿಕೆ 50ಕ್ಕೂ ಹೆಚ್ಚು ಫಾಸ್ಟ್‌ಫುಡ್ ಅಂಗಡಿಗಳನ್ನು ತೆರವುಗೊಳಿಸಿದೆ. ಇದರಿಂದ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದವರಿಗೆ ಇದು ದೊಡ್ಡ ಹೊಡೆತ ಎಂದು ಹೇಳಿದ್ದಾರೆ. ಪಾಲಿಕೆಯ ಕ್ರಮಕ್ಕೆ ಜನರು ಕಿಡಿಕಾರಿದ್ದಾರೆ.
- Ram
- Updated on: Aug 31, 2025
- 1:26 pm
ಮೈಸೂರಿನ ಕೆ.ಎಸ್ ಮಧುಸೂದನ್ಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರಕಟ; ಸೆ. 5ರಂದು ರಾಷ್ಟ್ರಪತಿಯಿಂದ ಪ್ರದಾನ
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ 45 ಶಿಕ್ಷಕರಿಗೆ ಕೇಂದ್ರ ಶಿಕ್ಷಣ ಇಲಾಖೆಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಘೋಷಿಸಲಾಗಿದೆ. ಈ 45 ಶಿಕ್ಷಕರಲ್ಲಿ ಕರ್ನಾಟಕದ ಓರ್ವ ಶಿಕ್ಷಕರು ಕೂಡ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಮೈಸೂರಿನ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಸ್. ಮಧುಸೂದನ್ ಅವರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.
- Sushma Chakre
- Updated on: Aug 25, 2025
- 6:41 pm
ಪ್ರವಾಸಿಗರ ಗಮನಕ್ಕೆ: ಈ ಎರಡು ದಿನ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧ
ಸೆಪ್ಟೆಂಬರ್ 1 ಹಾಗೂ 2ರಂದು ಮೈಸೂರು ಅರಮನೆ ವೀಕ್ಷಣೆ ಮಾಡುವ ಪ್ಲ್ಯಾನ್ ಇದ್ದರೆ ಕ್ಯಾನ್ಸಲ್ ಮಾಡಿಕೊಂಡು ಬಿಡಿ. ಯಾಕಂದ್ರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಅರಮನೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ಆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ.
- Ramesh B Jawalagera
- Updated on: Aug 25, 2025
- 4:42 pm