ಈ ವಾರ ಒಟಿಟಿಗೆ ಬರಲಿವೆ ಕೆಲ ಹಿಟ್ ಸಿನಿಮಾಗಳು
OTT Release this week: ಕಳೆದ ಶುಕ್ರವಾರ ದೊಡ್ಡ ಸಿನಿಮಾಗಳು ಯಾವುವೂ ಸಹ ಬಿಡುಗಡೆ ಆಗಲಿಲ್ಲ. ಬಾಕ್ಸ್ ಆಫೀಸ್ ಪಾಲಿಗೆ ಈ ವಾರ ತುಸು ಡಲ್ ಆದ ವಾರ ಆದರೆ ಒಟಿಟಿಗೆ ಕೆಲ ಒಳ್ಳೆಯ ಸಿನಿಮಾಗಳು ಬಂದಿವೆ, ಮತ್ತು ಈ ಮುಂದಿನ ಕೆಲ ದಿನಗಳಲ್ಲಿ ಒಳ್ಳೆಯ ಕೆಲ ಸಿನಿಮಾಗಳು ಬಿಡುಗಡೆ ಆಗಲಿವೆ. ಅಂಥಹಾ ಕೆಲವು ಆಯ್ದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ....
Updated on:Mar 08, 2026 | 3:47 PM

ವಿಜಯ್ ಸೇತುಪತಿ, ಅರವಿಂದ ಸ್ವಾಮಿ, ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಪ್ರತಿಭಾವಂತ ನಟ, ನಟಿಯರು ನಟಿಸಿರುವ ಮೂಕಿ ಸಿನಿಮಾ ‘ಗಾಂಧಿ ಟಾಕ್ಸ್’ ಇದೇ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ.

‘ಲಾಲೊ: ಕೃಷ್ಣ ಸದಾ ಸಹಾಯತೆ’ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಇದು ಗುಜರಾತಿ ಸಿನಿಮಾ ಆಗಿದ್ದು, ಅತ್ಯಂತ ಕಡಿಮೆ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿದೆ. ಈ ಸಿನಿಮಾ ಇದೀಗ ಸೋನಿ ಲಿವ್ನಲ್ಲಿ ಬಿಡುಗಡೆ ಆಗಿದೆ.

ಬಾಲಿವುಡ್ನ ಹಿರಿಯ ನಟ ಅನಿಲ್ ಕಪೂರ್ ನಟಿಸಿರುವ ಆಕ್ಷನ್-ಡ್ರಾಮಾ ಕತೆಯುಳ್ಳ ‘ಸುಬೇಧಾರ್’ ಸಿನಿಮಾ ಈ ವಾರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ನಿವೃತ್ತ ಸೈನಿಕನೊಬ್ಬ ತನ್ನ ಕುಟುಂಬಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಿ ತನ್ನ ಮಿಲಿಟರಿ ತಂತ್ರಗಳನ್ನು ಬಳಸಿ ಶತ್ರುಗಳನ್ನು ಸೆದೆಬಡಿಯುವ ಕತೆ ಇದರಲ್ಲಿದೆ. ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ತಾಜ್ ಮಹಲ್ ಮೂಲದ ಬಗ್ಗೆ ಅನುಮಾನ, ಪ್ರಶ್ನೆ ಎತ್ತುವ ಸಿನಿಮಾ ಆಗಿರುವ ‘ದಿ ತಾಜ್ ಸ್ಟೋರಿ’ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ‘ದಿ ತಾಜ್ ಸ್ಟೋರಿ’ ಸಿನಿಮಾ ಲಯನ್ಸ್ ಗೇಟ್ ಒಟಿಟಿಯಲ್ಲಿ ಮಾರ್ಚ್ 13ಕ್ಕೆ ಬಿಡುಗಡೆ ಆಗಲಿದೆ.

‘ಜಾಕ್ ರೀಚರ್’ ವೆಬ್ ಸರಣಿ (ಸಿನಿಮಾ ಅಲ್ಲ)ಯಿಂದ ಜನಪ್ರಿಯವಾದ ಅಲೆನ್ ರಿಟ್ಷನ್ ನಟನೆಯ ‘ವಾರ್ ಮಷಿನ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ಇದೊಂದು ಸೈ-ಫೈ ಆಕ್ಷನ್ ಸಿನಿಮಾ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ನೋಡಬಹುದು.

ಜನಪ್ರಿಯ ಹಾಲಿವುಡ್ ಕಾರ್ಟೂನ್ ಸಿನಿಮಾ ‘ಜುಟೋಫಿಯಾ’ದ ಎರಡನೇ ಭಾಗ ‘ಜುಟೋಫಿಯಾ 2’ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ 10 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಿತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ಮಾರ್ಚ್ 13 ರಂದು ಈ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ನೋಡಬಹುದು.
Published On - 3:30 pm, Sun, 8 March 26




