AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

1 ರೂಪಾಯಿಯ ನೋಟು ನೀಡಿದ್ರೆ ಬ್ರಾಂಡೆಡ್ ಶೂ: ಮಳಿಗೆ ಮುಂದೆ ಜನಜಂಗುಳಿ, ನಂತರ ಆಗಿದ್ದೇನು?

ಅಕ್ಷಯ್​ ಪಲ್ಲಮಜಲು​​
|

Updated on: Mar 08, 2026 | 3:55 PM

Share

ಕೋಯಿಕ್ಕೋಡ್‌ನ ಟ್ರೆಂಡ್ ಫ್ಯಾಕ್ಟರಿ ಮಳಿಗೆಯ 'ಒಂದು ರೂಪಾಯಿ ಶೂ' ಆಫರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾವಿರಾರು ಜನರನ್ನು ಆಕರ್ಷಿಸಿತು. ಮಲಪ್ಪುರಂ, ಕಣ್ಣೂರು, ವಯನಾಡ್ ಜಿಲ್ಲೆಗಳಿಂದಲೂ ಬಂದ ಜನರು ಬೆಳಗಿನ ಜಾವದಿಂದಲೇ ಸಾಲುಗಟ್ಟಿ ನಿಂತಿದ್ದರು. ಭಾರೀ ಜನಸಂದಣಿಯಿಂದ ಸಂಚಾರ ಅಸ್ತವ್ಯಸ್ತಗೊಂಡು, ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೋಯಿಕ್ಕೋಡ್, ಮಾ.8: ಕೇವಲ ಒಂದು ರೂಪಾಯಿಯ ನೋಟು ನೀಡಿದರೆ ಬ್ರಾಂಡೆಡ್ ಶೂಗಳನ್ನು ನೀಡುವುದಾಗಿ ಘೋಷಿಸಿದ್ದ ಮಳಿಗೆಯೊಂದರ ಮುಂದೆ ಸಾವಿರಾರು ಜನ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಕೋಯಿಕ್ಕೋಡ್‌ನ ಮಾನಂಚಿರ ಪ್ರದೇಶದಲ್ಲಿರುವ ‘ಟ್ರೆಂಡ್ ಫ್ಯಾಕ್ಟರಿ’ (Trend Factory) ಎಂಬ ಪಾದರಕ್ಷೆ ಮಳಿಗೆಯು ತನ್ನ ಪುನರಾರಂಭದ ಪ್ರಯುಕ್ತ ಈ ವಿಚಿತ್ರ ಆಫರ್ ಘೋಷಿಸಿತ್ತು. ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗರ್‌ಗಳ ಮೂಲಕ ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇದನ್ನು ನೋಡಿ ಮಲಪ್ಪುರಂ, ಕಣ್ಣೂರು ಮತ್ತು ವಯನಾಡ್‌ನಂತಹ ಜಿಲ್ಲೆಗಳಿಂದಲೂ ನೂರಾರು ಯುವಕರು ಮತ್ತು ಮಕ್ಕಳು ಆಗಮಿಸಿದ್ದರು.ಬೆಳಿಗ್ಗೆ 10 ಗಂಟೆಗೆ ಮಳಿಗೆ ತೆರೆಯುವುದಾಗಿ ಹೇಳಿದ್ದರೂ, ಜನರು ಬೆಳಗಿನ ಜಾವ 2:00 ಅಥವಾ 3:00 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಮಳಿಗೆಯ ಮುಂದೆ ಸೇರಿದ ಸಾವಿರಾರು ಜನರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮಳಿಗೆ ತೆರೆಯುತ್ತಿದ್ದಂತೆ ಜನರು ಒಳ ನಗ್ಗಲು ಪ್ರಯತ್ನಿಸಿದರು, ಇದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಕೆಲವು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More