AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿಎಂ, ಸಿಎಂ’ ಎಂದು ಕೂಗಿದ ಅಭಿಮಾನಿಗಳು, ಜೂ ಎನ್​​ಟಿಆರ್ ಪ್ರತಿಕ್ರಿಯೆ ಏನು?

Jr NTR fans: ಜೂ ಎನ್​​ಟಿಆರ್ ಸಹ ಕೆಲವು ವರ್ಷಗಳ ಹಿಂದಿನ ವರೆಗೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರನ್ನು ಕುಟುಂಬದಿಂದ ತುಸು ದೂರ ಇರಿಸಲಾಗಿದೆ. ಟಿಡಿಪಿಯಿಂದಲೂ ಜೂ ಎನ್​​ಟಿಆರ್ ದೂರ ಸರಿದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಸಿಎಂ ಆಗಲಿ ಮತ್ತು ಆಗಿಯೇ ಆಗುತ್ತಾರೆ ಎಂಬ ಭರವಸೆಯಲ್ಲಿದ್ದು, ಅದನ್ನು ಅಭಿವ್ಯಕ್ತಿಪಡಿಸಿದ್ದಾರೆ.

‘ಸಿಎಂ, ಸಿಎಂ’ ಎಂದು ಕೂಗಿದ ಅಭಿಮಾನಿಗಳು, ಜೂ ಎನ್​​ಟಿಆರ್ ಪ್ರತಿಕ್ರಿಯೆ ಏನು?
Jr Ntr
TV9 Web
| Edited By: |

Updated on: Mar 08, 2026 | 3:51 PM

Share

ಜೂ ಎನ್​​ಟಿಆರ್ (Jr NTR), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ ಎನ್​​ಟಿಆರ್ ಅವರ ನಂದಮೂರಿ ಕುಟುಂಬ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ. ಸ್ವತಃ ಜೂ ಎನ್​​ಟಿಆರ್ ಸಹ ಕೆಲವು ವರ್ಷಗಳ ಹಿಂದಿನ ವರೆಗೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರನ್ನು ಕುಟುಂಬದಿಂದ ತುಸು ದೂರ ಇರಿಸಲಾಗಿದೆ. ಟಿಡಿಪಿಯಿಂದಲೂ ಜೂ ಎನ್​​ಟಿಆರ್ ದೂರ ಸರಿದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಸಿಎಂ ಆಗಲಿ ಮತ್ತು ಆಗಿಯೇ ಆಗುತ್ತಾರೆ ಎಂಬ ಭರವಸೆಯಲ್ಲಿದ್ದು, ಅದನ್ನು ಅಭಿವ್ಯಕ್ತಿಪಡಿಸಿದ್ದಾರೆ.

ನಟ ಜೂ ಎನ್​​ಟಿಆರ್ ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗೆಂದು ಜೂ ಎನ್​​ಟಿಆರ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಜೂ ಎನ್​​ಟಿಆರ್ ಅವರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಧಾವಿಸಿದ್ದರು. ಬಳಿಕ ಕಿಮ್ಸ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್​​ಟಿಆರ್ ಅವರನ್ನು ‘25 ವರ್ಷಗಳ ಬಳಿಕ ನಿಮ್ಮನ್ನು ನೀವು ಎಲ್ಲಿ ನೋಡಲು ಬಯಸುತ್ತೀರಿ’ ಎಂದು ಕೇಳಿದರು. ಜೂ ಎನ್​​ಟಿಆರ್ ಸಹಜವಾಗಿಯೇ ತಮ್ಮ ಹಾಸ್ಯಮಯ ಶೈಲಿಯಲ್ಲಿ ಆಗ ನನಗೆ 67 ವರ್ಷ ವಯಸ್ಸಾಗಿರುತ್ತದೆ ಎಂದಷ್ಟೆ ಹೇಳಿದರು.

ಆದರೆ ಅಭಿಮಾನಿಗಳು ಸುಮ್ಮಿರಲಿಲ್ಲ, ‘ಸಿಎಂ ಸಿಎಂ’ ಎಂದು ಕೂಗಲು ಆರಂಭಿಸಿದರು. ಜೂ ಎನ್​​ಟಿಆರ್ ಅವರು ಅಭಿಮಾನಿಗಳ ಕೂಗಾಟ ಗಮನಿಸಿದರಾದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಭಿಮಾನಿಗಳ ಕೂಗು ಕೇಳಿದರೂ ಸಹ ಸುಮ್ಮನೇ ಇದ್ದರು ಜೂ ಎನ್​​ಟಿಆರ್. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಜೂ ಎನ್​​ಟಿಆರ್​ ಹಳೆ ಸಿನಿಮಾ ಸೀಕ್ವೆಲ್​​ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?

ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರಕ ಆಗಿದ್ದರು ಜೂ ಎನ್​​ಟಿಆರ್. ಆದರೆ ಇತ್ತೀಚೆಗೆ ಚಂದ್ರಬಾಬು ನಾಯ್ಡು ಮತ್ತು ಜೂ ಎನ್​​ಟಿಆರ್ ಅವರ ಚಿಕ್ಕಪ್ಪ ಆಗಿರುವ ನಂದಮೂರಿ ಬಾಲಕೃಷ್ಣ ಅವರು ಜೂ ಎನ್​​ಟಿಆರ್ ಅನ್ನು ಪಕ್ಷದಿಂದ ಮತ್ತು ನಂದಮೂರಿ ಕುಟುಂಬದಿಂದ ದೂರ ಇರಿಸಿದ್ದಾರೆ. ಚಂದ್ರಬಾಬು ನಾಯ್ಡುಗೆ ಪುತ್ರ, ಬಾಲಕೃಷ್ಣಗೆ ಅಳಿಯ (ಮಗಳ ಗಂಡ) ಆಗಿರುವ ನಾರಾ ಲೋಕೇಶ್ ಅನ್ನು ರಾಜಕೀಯದಲ್ಲಿ ಬೆಳೆಸಬೇಕೆಂದು ಜೂ ಎನ್​​ಟಿಆರ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ. ಜೂ ಎನ್​​ಟಿಆರ್, ಪಕ್ಷಕ್ಕೆ ಬಂದರೆ ಅವರ ಜನಪ್ರಿಯತೆ ಮುಂದೆ ನಾರಾ ಲೋಕೇಶ್ ಮಂಕಾಗುವುದು ಖಾತ್ರಿ. ಹಾಗಾಗಿ ಜೂ ಎನ್​ಟಿಆರ್ ಮಾತ್ರವಲ್ಲ ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನೂ ಸಹ ಪಕ್ಷದಿಂದ ದೂರ ಇರಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!