Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಬ್ಲಿಸಿಟಿ ಏಕೆ ಮಾಡಬೇಕು? ‘ಯುಐ’ ಫಸ್ಟ್ ಲುಕ್ ರಿವೀಲ್ ಮಾಡಲು ಉಪೇಂದ್ರಗಿಲ್ಲ ಆಸಕ್ತಿ

ಉಪೇಂದ್ರ ನಟನೆಯ ‘ಯುಐ’ ಚಿತ್ರದ ಪೋಸ್ಟರ್ ಈ ಮೊದಲು ರಿಲೀಸ್ ಆಗಿತ್ತು. ಅದನ್ನು ಹೊರತುಪಡಿಸಿ ಸಿನಿಮಾ ತಂಡದಿಂದ ಯಾವುದೇ ಅಪ್​ಡೇಟ್ ಸಿಕ್ಕಿರಲಿಲ್ಲ. ಇಂದು (ಆಗಸ್ಟ್ 28) ‘ಯುಐ’ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದರು. ಆದರೆ, ಫ್ಯಾನ್ಸ್​ಗೆ ನಿರಾಸೆ ಆಗಿದೆ.

‘ಪಬ್ಲಿಸಿಟಿ ಏಕೆ ಮಾಡಬೇಕು? ‘ಯುಐ’ ಫಸ್ಟ್ ಲುಕ್ ರಿವೀಲ್ ಮಾಡಲು ಉಪೇಂದ್ರಗಿಲ್ಲ ಆಸಕ್ತಿ
ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on: Aug 28, 2023 | 10:45 AM

ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಅವರು ನಿರ್ದೇಶಿಸಿ ನಟಿಸುತ್ತಿರುವ ‘ಯುಐ’ ಸಿನಿಮಾ (UI Movie) ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಸೆಟ್ಟೇರಿ ಒಂದೂವರೆ ವರ್ಷ ಕಳೆದಿದೆ. ಆರಂಭದಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಹೊರತುಪಡಿಸಿದರೆ ಮತ್ತಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈಗ ಪ್ರಮೋಷನಲ್ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡೋಕೆ ಉಪೇಂದ್ರ ಆಸಕ್ತಿ ತೋರಿಸಿಲ್ಲ. ಇದು ಕೂಡ ಪ್ರಮೋಷನಲ್ ಗಿಮಿಕ್ ಎನ್ನಲಾಗುತ್ತಿದೆ.

ಉಪೇಂದ್ರ ನಟನೆಯ ‘ಯುಐ’ ಚಿತ್ರದ ಪೋಸ್ಟರ್ ಈ ಮೊದಲು ರಿಲೀಸ್ ಆಗಿತ್ತು. ಅದನ್ನು ಹೊರತುಪಡಿಸಿ ಸಿನಿಮಾ ತಂಡದಿಂದ ಯಾವುದೇ ಅಪ್​ಡೇಟ್ ಸಿಕ್ಕಿರಲಿಲ್ಲ. ಇಂದು (ಆಗಸ್ಟ್ 28) ‘ಯುಐ’ ಫಸ್ಟ್ ಲುಕ್ ರಿಲೀಸ್ ಆಗಲಿದೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದರು. ಆದರೆ, ಫ್ಯಾನ್ಸ್​ಗೆ ನಿರಾಸೆ ಆಗಿದೆ. ಫಸ್ಟ್ ಲುಕ್ ಏಕೆ ರಿಲೀಸ್ ಮಾಡಬೇಕು ಎಂದು ಉಪ್ಪಿ ಪ್ರಶ್ನೆ ಮಾಡಿದ್ದಾರೆ.

‘ಯುಐ’ ಸಿನಿಮಾಗೆ ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಅವರು ಬಂಡವಾಳ ಹೂಡಿದ್ದಾರೆ. ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ನಿರ್ಮಾಪಕರಿಬ್ಬರು ಉಪ್ಪಿ ಮನೆಗೆ ಬರುತ್ತಾರೆ. ‘ಸಿನಿಮಾ ಸೆಟ್ಟೇರಿ ಒಂದೂವರೆ ವರ್ಷ ಕಳೆದಿದೆ. ಸಿನಿಮಾ ಬಗ್ಗೆ ಯಾವುದೇ ಅಪ್​ಡೇಟ್ ಬಿಟ್ಟಿಲ್ಲ. ಜನರು ಬೈಯುತ್ತಿದ್ದಾರೆ’ ಎನ್ನುತ್ತಾರೆ ಶ್ರೀಕಾಂತ್. ಇದಕ್ಕೆ ಪ್ರತಿಕ್ರಿಯಿಸೋ ಉಪ್ಪಿ, ‘ಫಸ್ಟ್ ಲುಕ್ ಅಥವಾ ಟೀಸರ್ ಬಿಡೋ ಅವಶ್ಯಕತೆ ಇದೆಯೇ? ಒಂದು ನಿಮಿಷದ ಟೀಸರ್ ನೋಡಿ ಜನರು ನನ್ನ ಸಿನಿಮಾ ಹೇಗಿದೆ ಎಂದು ಹೇಳುತ್ತಾರಾ? ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗೇ ಹೈಪ್ ಬರುತ್ತದೆ’ ಎನ್ನುತ್ತಾರೆ ಉಪೇಂದ್ರ. ವಿಡಿಯೋ ಕೊನೆಯಲ್ಲಿ ‘ಮುಂದುವರಿಯಲಿದೆ’ ಎಂದು ತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್​ ಬಗ್ಗೆ ನೆಟ್ಟಿಗರ ಟೀಕೆ

ಸದ್ಯ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಉಪ್ಪಿ ಮಾರ್ಕೆಟಿಂಗ್ ತಂತ್ರವನ್ನು ಮೆಚ್ಚಿಕೊಂಡಿದ್ದಾರೆ. ‘ಏನೇ ಬದಲಾದರೂ ಉಪೇಂದ್ರ ಮಾತ್ರ ಬದಲಾಗಿಲ್ಲ’ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಅಪ್​ಡೇಟ್ ನೀಡಿ ಎಂದು ಕೇಳಿದ್ದಾರೆ. ‘ಜನರು ಅಪ್​ಡೇಟ್ ಆಗಿದ್ದಾರೆ. ಈ ರೀತಿಯ ತಂತ್ರಗಳು ಜನರಿಗೆ ಇಷ್ಟವಾಗುವುದಿಲ್ಲ. ಜನರು ಅಪ್​ಡೇಟ್ ಕೇಳ್ತಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!