Alia Bhatt: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್​ ಬಗ್ಗೆ ನೆಟ್ಟಿಗರ ಟೀಕೆ

ಆಲಿಯಾ ಭಟ್​ ಅವರು ಪಾಪರಾಜಿಯ ಚಪ್ಪಲಿ ಮುಟ್ಟಿದ ವಿಡಿಯೋ ವೈರಲ್​ ಆಗಿದೆ. ಇದೆಲ್ಲವೂ ಪ್ರಚಾರಕ್ಕಾಗಿಯೇ ಮಾಡಿದ್ದು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ.

Alia Bhatt: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್​ ಬಗ್ಗೆ ನೆಟ್ಟಿಗರ ಟೀಕೆ
ಫ್ಯಾಮಿಲಿ ಜೊತೆ ರೆಸ್ಟೋರೆಂಟ್​ಗೆ ಬಂದ ಆಲಿಯಾ ಭಟ್​
Follow us
ಮದನ್​ ಕುಮಾರ್​
|

Updated on: Jul 14, 2023 | 12:02 PM

ನಟಿ ಆಲಿಯಾ ಭಟ್​ (Alia Bhatt) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಕಲಾವಿದೆಯಾಗಿ ಮಿಂಚುತ್ತಿದ್ದಾರೆ. ಹಲವು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಈಗ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahaani) ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಅದಕ್ಕೂ ಮುನ್ನವೇ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ಆಲಿಯಾ ಭಟ್​ ಅವರ ವರ್ತನೆ. ಮುಂಬೈನ ಬೀದಿಯಲ್ಲಿ ಅವರು ಕಂಡವರ ಚಪ್ಪಲಿಯನ್ನು ಮುಟ್ಟಿದ್ದಾರೆ. ಕೆಲವರು ನಟಿಯ ಸರಳತೆಗೆ ಭೇಷ್​ ಎಂದಿದ್ದಾರೆ. ಆದರೆ ಇನ್ನೂ ಕೆಲವರು ಇದನ್ನು ಪ್ರಚಾರದ (Publicity) ಗಿಮಿಕ್​ ಎಂದು ಟೀಕೆ ಮಾಡಿದ್ದಾರೆ. ಅಲ್ಲಿ ನಡೆದಿದ್ದು ಏನು? ಇಲ್ಲಿದೆ ಮಾಹಿತಿ..

ಆಲಿಯಾ ಭಟ್​ ಅವರು ತಾಯಿ ಸೋನಿ ರಾಜಧಾನ್​ ಜೊತೆ ಮುಂಬೈನ ರೆಸ್ಟೋರೆಂಟ್​ವೊಂದಕ್ಕೆ ತೆರಳಿದ್ದರು. ಈ ವೇಳೆ ಅವರ ಫೋಟೋ ಕ್ಲಿಕ್ಕಿಸಲು ಅನೇಕ ಪಾಪರಾಜಿಗಳು ಮುತ್ತಿಕೊಂಡರು. ಆಲಿಯಾ ಭಟ್​ ನಡೆದು ಬರುತ್ತಿದ್ದ ಬೀದಿಯಲ್ಲಿ ಯಾರದ್ದೋ ಒಂದು ಚಪ್ಪಲಿ ಬಿದ್ದುಕೊಂಡಿತ್ತು. ಅದನ್ನು ಗಮನಿಸಿದ ಆಲಿಯಾ ಅವರು, ‘ಇದು ಯಾರದ್ದು’ ಅಂತ ಕೇಳಿದರು. ಅಲ್ಲಿದ್ದ ಪಾಪರಾಜಿಗಳಲ್ಲಿ ಒಬ್ಬರು ಚಪ್ಪಲಿ ಬೀಳಿಸಿಕೊಂಡಿದ್ದಾರೆ ಎಂಬುದು ಆಲಿಯಾಗೆ ಗೊತ್ತಾಯಿತು. ತಾವೇ ಬಗ್ಗಿ, ಕೈಯಾರೆ ಆ ಚಪ್ಪಲಿಯನ್ನು ಅವರು ಎತ್ತಿಕೊಟ್ಟರು.

Alia Bhatt: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?

ಆಲಿಯಾ ಅವರು ಚಪ್ಪಲಿ ಮುಟ್ಟಿದ ವಿಡಿಯೋ ವೈರಲ್​ ಆಗಿದೆ. ಇದೆಲ್ಲವೂ ಪ್ರಚಾರಕ್ಕಾಗಿಯೇ ಮಾಡಿದ್ದು ಎಂದು ಜನರು ಕಮೆಂಟ್​ ಮಾಡುತ್ತಿದ್ದಾರೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ. ರಿಲೀಸ್​ಗೆ ಇನ್ನು ಕೆಲವೇ ದಿನಗಳು ಇರುವಾಗ ಸುದ್ದಿ ಆಗಬೇಕು ಎಂಬ ಕಾರಣಕ್ಕೆ ಸೆಲೆಬ್ರಿಟಿಗಳು ಇಂಥ ಗಿಮಿಕ್​ ಮಾಡುತ್ತಾರೆ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಈ ಟೀಕೆಗಳಿಗೆ ಆಲಿಯಾ ಭಟ್​ ತಲೆ ಕೆಡಿಸಿಕೊಂಡಿಲ್ಲ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ಗೆ ಜೋಡಿಯಾಗಿ ರಣವೀರ್​ ಸಿಂಗ್​ ನಟಿಸಿದ್ದಾರೆ. ಕರಣ್​ ಜೋಹರ್​ ಅವರು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ತುಂಬ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಲವ್​ಸ್ಟೋರಿ ಮತ್ತು ಫ್ಯಾಮಿಲಿ ಡ್ರಾಮಾ ಇದರಲ್ಲಿ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ