AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಬ್ಬರ್ ಸಿಂಗ್’ ನೆನಪಿಸುತ್ತಿದೆ ‘ಉಸ್ತಾದ್ ಭಗತ್ ಸಿಂಗ್’: ಟ್ರೈಲರ್ ಬಿಡುಗಡೆ

Ustaad Bhagath Singh: ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಅದುವೇ ‘ಉಸ್ತಾದ್ ಭಗತ್ ಸಿಂಗ್’. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ದೊಡ್ಡ ಹಿಟ್ ನೀಡಿದ ‘ಗಬ್ಬರ್ ಸಿಂಗ್’ ಸಿನಿಮಾದ ಹಾಸ್ಯಮಯ ಪೊಲೀಸ್ ಪಾತ್ರಧಾರಿ ಪಾತ್ರವೇ ‘ಉಸ್ತಾದ್ ಭಗತ್ ಸಿಂಗ್’ನಲ್ಲಿಯೂ ಇರಲಿದೆ ಎಂಬುದನ್ನು ಟ್ರೈಲರ್ ಸ್ಪಷ್ಟವಾಗಿ ಹೇಳುತ್ತಿದೆ.

‘ಗಬ್ಬರ್ ಸಿಂಗ್’ ನೆನಪಿಸುತ್ತಿದೆ ‘ಉಸ್ತಾದ್ ಭಗತ್ ಸಿಂಗ್’: ಟ್ರೈಲರ್ ಬಿಡುಗಡೆ
Pawan Kalyan
ಮಂಜುನಾಥ ಸಿ.
|

Updated on: Mar 14, 2026 | 7:27 PM

Share

ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಅದುವೇ ‘ಉಸ್ತಾದ್ ಭಗತ್ ಸಿಂಗ್’. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ದೊಡ್ಡ ಹಿಟ್ ನೀಡಿದ ‘ಗಬ್ಬರ್ ಸಿಂಗ್’ ಸಿನಿಮಾದ ಹಾಸ್ಯಮಯ ಪೊಲೀಸ್ ಪಾತ್ರಧಾರಿ ಪಾತ್ರವೇ ‘ಉಸ್ತಾದ್ ಭಗತ್ ಸಿಂಗ್’ನಲ್ಲಿಯೂ ಇರಲಿದೆ ಎಂಬುದನ್ನು ಟ್ರೈಲರ್ ಸ್ಪಷ್ಟವಾಗಿ ಹೇಳುತ್ತಿದೆ.

ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ‘ಗಬ್ಬರ್ ಸಿಂಗ್’ ಅಂತಹ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ್ದ ಈ ಜೋಡಿ. ಇದೇ ಜೋಡಿ ಈಗ ‘ಉಸ್ತಾದ್ ಭಗತ್ ಸಿಂಗ್’ ಮೂಲಕ ಮತ್ತೆ ಒಂದಾಗಿದೆ, ಆದರೆ ಹಳೆಯ ಫಾರ್ಮುಲಾನಲ್ಲಿಯೇ ಹೊಸ ಸಿನಿಮಾ ಮಾಡಿದ್ದಾರೆ ಎಂಬುದು ದಟ್ಟವಾಗಿ ಟ್ರೈಲರ್​​ನಲ್ಲಿ ಕಾಣುತ್ತಿದೆ. ಆದರೆ ಇದೇ ರೀತಿಯ ಪವನ್ ಅನ್ನು ನೋಡಲು ಅಭಿಮಾನಿಗಳು ಸಹ ಕಾತರದಿಂದಿದ್ದರು, ಹಾಗಾಗಿ ಈಗ ಬಿಡುಗಡೆ ಆಗಿರುವ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಆಕಾಶಕ್ಕೆ ಏರಿಸಿದೆ.

ಟ್ರೈಲರ್​​ನಲ್ಲಿ ಪವನ್ ಕಲ್ಯಾಣ್ ಮತ್ತೊಮ್ಮೆ ಖಾಕಿ ತೊಟ್ಟು ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಅವರ ಮ್ಯಾನರಿಸಂ, ಸ್ಟೈಲ್ ಮತ್ತು ಖಡಕ್ ಡೈಲಾಗ್‌ಗಳು ಅಭಿಮಾನಿಗಳಿಗೆ ಹಳೆಯ ‘ಗಬ್ಬರ್ ಸಿಂಗ್’ ನೆನಪಿಸುತ್ತಿವೆ. ಹರೀಶ್ ಶಂಕರ್ ಅವರು ಪವನ್ ಕಲ್ಯಾಣ್​​ಗೆ ಕೆಲವು ಪವರ್​​ಫುಲ್ ಡೈಲಾಗ್​​ಗಳನ್ನು ನೀಡಿದ್ದಾರೆ. ‘ಈ ಸಲ ಕೇವಲ ಮನರಂಜನೆ ಮಾತ್ರವಲ್ಲ, ಯುದ್ಧವೂ ಇರುತ್ತದೆ’ ಎಂಬ ಡೈಲಾಗ್‌ ವೈರಲ್ ಆಗುವುದು ಪಕ್ಕಾ. ಮಾತ್ರವಲ್ಲದೆ ಪವನ್ ಅವರು ಸಖತ್ ಕಾಮಿಡಿ ಸಹ ಮಾಡಿದಂತಿದ್ದಾರೆ. ಅದರಲ್ಲೂ ‘ಗಬ್ಬರ್ ಸಿಂಗ್’ ಶೈಲಿಯ ಕಾಮಿಡಿ ಪ್ರೇಕ್ಷಕರಿಗೆ ಪಕ್ಕಾ ಹಿಡಿಸಲಿದೆ.

ಇದನ್ನೂ ಓದಿ:ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಹಾಡುಗಳಿಗೆ ಸಂಗೀತ ನೀಡಿದ್ದರೆ ಹಿನ್ನೆಲೆ ಸಂಗೀತವನ್ನು ಎಸ್ ತಮನ್ ನೀಡಿದ್ದಾರೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ಪವನ್ ಕಲ್ಯಾಣ್ ಹಾಡೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ಅಸಲಿಗೆ ಪವನ್ ಕಲ್ಯಾಣ್​​ಗೆ ಡ್ಯಾನ್ಸ್ ಎಂದರೆ ಆಗುವುದಿಲ್ಲ ಆದರೆ ಈ ಸಿನಿಮಾನಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾದ ಟ್ರೈಲರ್​​ನಲ್ಲಿ ಪವನ್ ಕಲ್ಯಾಣ್ ಹೊರತಾಗಿ ಶ್ರೀಲೀಲಾ ಬಹಳ ಗಮನ ಸೆಳೆಯುತ್ತಿದ್ದಾರೆ. ಮುದ್ದು-ಮುದ್ದಿ ಯುವತಿಯಾಗಿ ಅವರು ಸಖತ್ ಆಗಿ ಕಾಣುತ್ತಿದ್ದಾರೆ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರ ‘ತೆರಿ’ಯ ರೀಮೇಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಖಾತ್ರಿ ಇಲ್ಲ. ಸಿನಿಮಾದ ಟ್ರೈಲರ್, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಒಳ್ಳೆಯ ಪ್ರಚಾರ ದೊರಕಿಸಿಕೊಡುವ ಸಂಭವ ಇದೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
SIR ಬಗ್ಗೆ ಭಯ ಬೇಡ: ಧೈರ್ಯ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಹೆಚ್.ಕೆ ಸುರೇಶ್ ಪ್ರಮಾಣ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಎಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರು ಇರುವಂತೆ ನೋಡಿಕೊಳ್ಳಿ ಎಂದ ಡಿಕೆಶಿ!
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಬೆಂಗಳೂರಿನಲ್ಲಿ ಫುಟ್​ಪಾತ್ ಅತಿಕ್ರಮಣ ತೆರವಿಗೆ ಇಂದೇ ಗಡುವು
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ ಮನೆಯಿಂದಲೇ ಎಸ್​ಐಆರ್​ಗೆ ಚಾಲನೆ!
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸ: ಕಮಿಷನರ್​​ ಏನಂದ್ರು?
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ನೋಡಿ, ಎಂಥಾ ಅದ್ಭುತ ದೃಶ್ಯ! ಒಂದೇ ಮರದ ಮೇಲೆ ಕುಳಿತ ಎರಡು ಚಿರತೆಗಳು
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಅಡ್ಡಮತದಾನ ಮಾಡಿಲ್ಲ: ಬೇಲೂರು ಬಿಜೆಪಿ ಶಾಸಕ ಸುರೇಶ್ ಆಣೆ-ಪ್ರಮಾಣ
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!
ಕಾರವಾರದಲ್ಲಿ ಅಬ್ಬರಿಸಿದ ಮಳೆರಾಯ; ಹಲವೆಡೆ ರಸ್ತೆಗಳು ಜಲಾವೃತ!