AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಅರವಿಂದ್ ಜನ್ಮದಿನದಂದು ಘೋಷಣೆ ಆಯ್ತು ಹೊಸ ಸಿನಿಮಾ; ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ

‘ದೈಜಿ’ ಸಿನಿಮಾಗೆ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಬಂಡವಾಳ ಹೂಡುತ್ತಿದ್ದಾರೆ. ರಮೇಶ್ ಅರವಿಂದ್ ಹಾಗೂ ಆಕಾಶ ಶ್ರೀವತ್ಸ ಅವರ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆಯುತ್ತಿದೆ.

ರಮೇಶ್ ಅರವಿಂದ್ ಜನ್ಮದಿನದಂದು ಘೋಷಣೆ ಆಯ್ತು ಹೊಸ ಸಿನಿಮಾ; ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ
ರಮೇಶ್ ಅರವಿಂದ್
ರಾಜೇಶ್ ದುಗ್ಗುಮನೆ
|

Updated on:Sep 10, 2023 | 11:53 AM

Share

ರಮೇಶ್ ಅರವಿಂದ್ (Ramesh Aravind) ಅವರಿಗೆ ಇಂದು (ಸೆಪ್ಟೆಂಬರ್ 10) ಜನ್ಮದಿನದ ಸಂಭ್ರಮ. ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸೆಲೆಬ್ರಿಟಿಗಳ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಘೋಷಣೆ ಆಗುತ್ತವೆ. ಅದೇ ರೀತಿ ರಮೇಶ್ ಅರವಿಂದ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ‘ದೈಜಿ’ (Daiji Movie) ಎಂದು ಶೀರ್ಷಿಕೆ ಇಡಲಾಗಿದೆ. ‘ಶಿವಾಜಿ ಸುರತ್ಕಲ್ 1’ ಹಾಗೂ ‘ಶಿವಾಜಿ ಸುರತ್ಕಲ್ 2’ ಯಶಸ್ಸಿನ ಬೆನ್ನಲ್ಲೇ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ ಅನ್ನೋದು ವಿಶೇಷ.

‘ದೈಜಿ’ ಸಿನಿಮಾಗೆ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಬಂಡವಾಳ ಹೂಡುತ್ತಿದ್ದಾರೆ. ರಮೇಶ್ ಅರವಿಂದ್ ಹಾಗೂ ಆಕಾಶ ಶ್ರೀವತ್ಸ ಅವರ ಹಿಟ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಶೀರ್ಷಿಕೆಯ ಅರ್ಥವೇನು? ಆಪ್ರಶ್ನೆಗೂ ಉತ್ತರ ಇದೆ.

‘ದೈಜಿ’ ಎಂಬುದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳಿವೆ. ಕೊಂಕಣಿ ಭಾಷೆಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನ್​ನಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂಬರ್ಥವಿದೆ. ಶೀರ್ಷಿಕೆ ಒಂದೇ ಆದರೂ ಹಲವು ಅರ್ಥಗಳು ಇವೆ  ಎನ್ನುತ್ತದೆ ಚಿತ್ರತಂಡ. ಪವನ್ ಕುಮಾರ್ ಅವರ ‘ಲೂಸಿಯಾ’, ಧನಂಜಯ್ ನಟನೆಯ ‘ಬದ್ಮಾಶ್’ ಸಿನಿಮಾ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು. ಈಗ ‘ದೈಜಿ’ ಹೆಸರಿನ ಭಿನ್ನ ಶೀರ್ಷಿಕೆ ಒಂದಿಗೆ ನಿರ್ಮಾಪಕರು ಬಂದಿದ್ದಾರೆ.

ಇದನ್ನೂ ಓದಿ: ರಮೇಶ್ ಅರವಿಂದ್ ನಟನೆಯ ‘ಶಿವಾಜಿ ಸುರತ್ಕಲ್ 2’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ ಯದುವೀರ್ ಒಡೆಯರ್  

‘ದೈಜಿ ಸಿನಿಮಾ ಹಾರರ್, ಮಿಸ್ಟರಿ ಶೈಲಿಯಲ್ಲಿ ಮೂಡಿ ಬರುತ್ತಿದೆ. ರವಿ ಕಶ್ಯಪ್ ವಿವರಿಸಿದ ನೈಜ ಘಟನೆಗಳನ್ನು ಆಧರಿಸಿ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ಅವರು ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ಸಿನಿಮಾಗೆ ನಾಯಕಿಯರ ಹುಡುಕಾಟ ನಡೆಯುತ್ತಿದೆ. ಈ ವರ್ಷ ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಇದರ ಕಥೆ ಅಮೆರಿಕದಲ್ಲೇ ಸಾಗಲಿದೆ. ಇದು ರಮೇಶ್ ಅವರ 106ನೇ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:51 am, Sun, 10 September 23