AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಯಾವುದೇ ಶುಭ ಕಾರ್ಯಕ್ಕೂ ದೀಪ ಬೆಳಗೋದು ಯಾಕೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯ, ಉದ್ಘಾಟನೆ ಅಥವಾ ಪೂಜೆಗೂ ಮುನ್ನ ದೀಪ ಬೆಳಗುವುದು ಸಾಂಪ್ರದಾಯಿಕ. ಇದು ಬೆಳಕು, ಜ್ಞಾನ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೀಪವು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕ ಚಿಂತನೆಗಳನ್ನು ಪ್ರೇರೇಪಿಸುತ್ತದೆ ಮತ್ತು ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ನೀಡುತ್ತದೆ. ಇದು ಭಗವಂತನ ಸ್ವರೂಪವೂ ಹೌದು ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Daily Devotional: ಯಾವುದೇ ಶುಭ ಕಾರ್ಯಕ್ಕೂ ದೀಪ ಬೆಳಗೋದು ಯಾಕೆ ಗೊತ್ತಾ?
ದೀಪ ಬೆಳಗುವ ಆಚರಣೆ
ಅಕ್ಷತಾ ವರ್ಕಾಡಿ
|

Updated on: Mar 12, 2026 | 10:11 AM

Share

ಸಾಮಾನ್ಯವಾಗಿ, ಹೊಸ ಕಚೇರಿ ಅಥವಾ ಅಂಗಡಿಯ ಉದ್ಘಾಟನೆಗಳಲ್ಲಿ ಟೇಪ್ ಕತ್ತರಿಸುವ ಪದ್ಧತಿಯೂ ಇದೆ. ಆದರೆ, ದೀಪ ಬೆಳಗುವ ಆಚರಣೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಇದರ ಹಿಂದಿನ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

“ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನಃ ದೀಪೋ ಹರತು ಮೇ ಪಾಪಾನಿ ಸಂಧ್ಯಾ ದೀಪ ನಮೋಸ್ತುತೇ” ಎಂಬ ಶ್ಲೋಕ ದೀಪದ ಅಂತರಾರ್ಥವನ್ನು ಗುರೂಜಿ ವಿವರಿಸಿದ್ದಾರೆ. ದೀಪವು ಪರಬ್ರಹ್ಮನ ಸ್ವರೂಪವಾಗಿದೆ, ಜನಾರ್ದನನ ಜ್ಯೋತಿಯಾಗಿದೆ ಮತ್ತು ಪಾಪಗಳನ್ನು ಹರಣ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಇದರ ಅರ್ಥ. ಭಗವಂತನಿಗೆ ಯಾವುದೇ ಆಹಾರವನ್ನು ಅರ್ಪಿಸಬೇಕಿದ್ದರೂ ಅಗ್ನಿಯ ಮುಖಾಂತರವೇ ಅರ್ಪಿಸಲಾಗುತ್ತದೆ. ಅಂತೆಯೇ, ದೀಪದ ಮೂಲಕ ಭಗವಂತನನ್ನು ಪ್ರಾರ್ಥಿಸಲಾಗುತ್ತದೆ. ದೀಪವು ಭಗವಂತನ ಸ್ವರೂಪವೆಂದು ಪರಿಗಣಿಸಲಾಗುತ್ತದೆ.

ದೀಪದ ಜ್ವಾಲೆಯು ಯಾವಾಗಲೂ ಊರ್ಧ್ವಮುಖವಾಗಿ, ಅಂದರೆ ಮೇಲ್ಮುಖವಾಗಿ ಉರಿಯುತ್ತದೆ. ಈ ಮೇಲ್ಮುಖ ಚಲನೆಯು ಅಭಿವೃದ್ಧಿ, ಪ್ರಗತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅನಾದಿ ಕಾಲದಿಂದಲೂ ನಮ್ಮ ಎಲ್ಲಾ ಕಾರ್ಯಕ್ರಮಗಳು ದೀಪ ಬೆಳಗುವುದರ ಮೂಲಕವೇ ಆರಂಭವಾಗುತ್ತವೆ. ಮನೆಯಲ್ಲಿ ಬೆಳಗಿನ ಜಾವ ಪೂಜೆ ಪ್ರಾರಂಭಿಸುವ ಮೊದಲು ದೀಪವನ್ನು ಬೆಳಗಿ ನಂತರವೇ ಪೂಜೆ ಮಾಡುವುದು ರೂಢಿಯಲ್ಲಿದೆ. ದೀಪಾವಳಿ ಹಬ್ಬದಲ್ಲಿ ಮನೆಯೆಲ್ಲಾ ದೀಪಗಳಿಂದ ಪ್ರಕಾಶಮಾನವಾಗುತ್ತದೆ, ಇದು ಶುಭವನ್ನು ಸೂಚಿಸುತ್ತದೆ.

ದೀಪವು ನಮಗೆ ಶಕ್ತಿ ತುಂಬುತ್ತದೆ ಮತ್ತು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ. ದೀಪವು ಗುರುವಿನ ಸಂಕೇತವೂ ಹೌದು. ದೀಪದಿಂದ ಹೊರಹೊಮ್ಮುವ ಬೆಳಕು ನಮ್ಮ ಅಜ್ಞಾನವನ್ನು ತೊಲಗಿಸಿ, ಜ್ಞಾನದ ಬೆಳಕನ್ನು ನೀಡುತ್ತದೆ. ಸಭೆ-ಸಮಾರಂಭಗಳಲ್ಲಿ ದೀಪ ಬೆಳಗುವ ಮೂಲಕ ಅಗ್ನಿದೇವರಿಗೆ “ನಾನು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ, ನಿಮ್ಮ ಅನುಗ್ರಹ ಬೇಕು” ಎಂದು ಪ್ರಾರ್ಥಿಸಲಾಗುತ್ತದೆ. ಅಗ್ನಿದೇವರು ಪಂಚಭೂತಗಳಲ್ಲಿ ಒಂದಾಗಿದೆ (ಆಕಾಶ, ಭೂಮಿ, ಅಗ್ನಿ, ನೀರು, ವಾಯು). ಅಗ್ನಿಯು ಸೂರ್ಯನ ಸಂಕೇತವಾಗಿದ್ದು, ಈ ಪಂಚಭೂತಗಳನ್ನು ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದೆ.

ಸಣ್ಣ ವ್ಯಾಪಾರವಿರಲಿ, ದೊಡ್ಡ ವ್ಯಾಪಾರವಿರಲಿ ಅಥವಾ ಬೀದಿ ವ್ಯಾಪಾರವಿರಲಿ, ಪ್ರತಿದಿನ ದೀಪ ಹಚ್ಚಿ ಅಂಗಡಿ ವ್ಯಾಪಾರ ಮಾಡುವುದು ಅನಿವಾರ್ಯವಲ್ಲ. ಆದರೆ, ಪ್ರಾರಂಭಿಕವಾಗಿ ದೀಪ ಬೆಳಗಿದಾಗ, ಆ ಜಾಗದಲ್ಲಿ ಮತ್ತು ಸುತ್ತಲೂ ಇರುವ ಅಷ್ಟ ದಿಕ್ಕುಗಳಲ್ಲಿನ ಋಣಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ರೈತರೂ ಸಹ ಬಿತ್ತನೆ ಬೀಜಗಳನ್ನು ಬಿತ್ತುವ ಮೊದಲು ಭೂಮಿಯಲ್ಲಿ ಎರಡು ದೀಪಗಳನ್ನು ಹಚ್ಚಿ ಪ್ರಾರ್ಥಿಸಿದಾಗ ಉತ್ತಮ ಫಸಲು ದೊರೆಯುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!