‘ರಾಜಮೌಳಿ ನಮ್ಮಿಂದ ಕಳೆದು ಹೋಗಬಹುದು’; ಆತಂಕ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್

ರಾಜಮೌಳಿ ಅವರು ಟಾಲಿವುಡ್​​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಅವರು ಹಾಲಿವುಡ್​​ ಅಂಗಳಕ್ಕೆ ಕಾಲಿಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡಂತಿದೆ. ಈ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದರು.

‘ರಾಜಮೌಳಿ ನಮ್ಮಿಂದ ಕಳೆದು ಹೋಗಬಹುದು’; ಆತಂಕ ವ್ಯಕ್ತಪಡಿಸಿದ ಅನುರಾಗ್ ಕಶ್ಯಪ್
ರಾಜಮೌಳಿ-ಅನುರಾಗ್ ಕಶ್ಯಪ್
Follow us
|

Updated on:Jan 28, 2023 | 1:44 PM

ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದಾರೆ. ಅವರ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ (RRR Movie) ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ಗೆ ನಾಮ ನಿರ್ದೇಶನಗೊಂಡಿದೆ. ಈ ಸಿನಿಮಾದಿಂದ ರಾಜಮೌಳಿಗೆ ಹಾಲಿವುಡ್​ ಹಾದಿ ತೆರೆದುಕೊಂಡಿದೆ. ಅನೇಕ ಹಾಲಿವುಡ್​ ನಿರ್ದೇಶಕರು ರಾಜಮೌಳಿ ಜತೆ ಕೈ ಜೋಡಿಸಲು ಮುಂದೆ ಬಂದಿದ್ದಾರೆ. ರಾಜಮೌಳಿ ನಮ್ಮಿಂದ ಕಳೆದು ಹೋಗುವ ಆತಂಕವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವ್ಯಕ್ತಪಡಿಸಿದ್ದಾರೆ.

ರಾಜಮೌಳಿ ಅವರು ಟಾಲಿವುಡ್​​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಅವರು ಹಾಲಿವುಡ್​​ ಅಂಗಳಕ್ಕೆ ಕಾಲಿಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡಂತಿದೆ. ಈ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದರು. ಹಾಲಿವುಡ್​ನಲ್ಲಿ ಕೆಲಸ ಮಾಡುವುದಕ್ಕೂ ಟಾಲಿವುಡ್​ನಲ್ಲಿ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ, ರಾಜಮೌಳಿ ಅವರು ಹಾಲಿವುಡ್​ನವರ ಸಹಾಯ ಪಡೆಯುವ ಬಗ್ಗೆ ಮಾತನಾಡಿದ್ದರು. ಒಂದೊಮ್ಮೆ ರಾಜಮೌಳಿ ಹಾಲಿವುಡ್​ಗೆ ಹೋದರೆ ಮತ್ತೆ ಭಾರತಕ್ಕೆ ಮರಳುವುದಿಲ್ಲ ಎನ್ನುವ ಆತಂಕ ಅನುರಾಗ್ ಕಶ್ಯಪ್ ಅವರದ್ದು.

‘ರಾಜಮೌಳಿ ಅವರೊಂದಿಗೆ ಸಹಯೋಗ ಬೆಳೆಸಲು ಪಶ್ಚಿಮದ ಅನೇಕರು ಆಸಕ್ತಿ ತೋರಿದ್ದಾರೆ. ಆರಂಭದಲ್ಲಿ ಇದು ಸಹಯೋಗದ ರೀತಿ ಕಂಡರೂ ಮುಂದಿನ ದಿನಗಳಲ್ಲಿ ನಮ್ಮ ನಿರ್ದೇಶಕರನ್ನು ಅವರು ಕದಿಯಬಹುದು. ಭಾರತೀಯ ಚಿತ್ರರಂಗದ ರತ್ನ ಎನಿಸಿಕೊಂಡಿರುವ ರಾಜಮೌಳಿಯನ್ನು ಅವರು ಕಿತ್ತುಕೊಳ್ಳಬಹುದು ಎನ್ನುವ ಭಯ ನನ್ನದು. ಭಾರತ ಮತ್ತು ಪಶ್ಚಿಮದ ನಡುವೆ ಸಹಯೋಗ ಬೆಳೆಯಬೇಕು ಎಂಬ ಕುರಿತು ಈ ಮೊದಲಿನಿಂದಲೂ ಚರ್ಚೆ ನಡೆಯುತ್ತಿದೆ. ಆದರೆ, ಸಾಧ್ಯವಾಗಿಲ್ಲ. ಮಾರ್ವೆಲ್ ಚಿತ್ರಕ್ಕೆ ರಾಜಮೌಳಿ ಹೇಳಿ ಮಾಡಿಸಿದ ನಿರ್ದೇಶಕರಾಗಿದ್ದಾರೆ’ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಇದನ್ನೂ ಓದಿ
Image
ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ
Image
‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ
Image
‘ದಿ ಕಾಶ್ಮೀರ್​ ಫೈಲ್ಸ್​’ ಮಾತ್ರವಲ್ಲ, ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ ಇತರೆ ಚಿತ್ರಗಳ ಬಗ್ಗೆ ನಿಮಗೆ ಗೊತ್ತಾ?
Image
ವಿವೇಕ್​ ಅಗ್ನಿಹೋತ್ರಿ ಹಿನ್ನೆಲೆ ಏನು? ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ನಿರ್ದೇಶಕರ ಬಗ್ಗೆ ಇಲ್ಲಿದೆ ಮಾಹಿತಿ..

ಇದನ್ನೂ ಓದಿ: ಪಿಎಂ ಮೋದಿ ಸೂಚನೆಯನ್ನು ಟೀಕಿಸಿದ ಅನುರಾಗ್ ಕಶ್ಯಪ್​ಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ

ಇತ್ತೀಚೆಗೆ ಮಾತನಾಡಿದ್ದ ರಾಜಮೌಳಿ ಅವರು, ‘ಭಾರತದಲ್ಲಿ ಸಿನಿಮಾನ ಹೇಗೆ ಮಾಡಬೇಕು ಎಂದು ಯಾರೂ ನನಗೆ ಹೇಳಬೇಕಿಲ್ಲ. ಇಲ್ಲಿ ನಾನು ಡಿಕ್ಟೇಟರ್. ಆದರೆ, ಹಾಲಿವುಡ್​ನಲ್ಲಿ ನನಗೆ ಬೇರೆಯವರ ಸಹಕಾರ ಬೇಕಾಗುತ್ತದೆ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ಅನೇಕ ಹಾಲಿವುಡ್ ನಿರ್ದೇಶಕರು ರಾಜಮೌಳಿ ಜತೆ ಕೈ ಜೋಡಿಸಲು ಮುಂದೆ ಬರುವುದಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:35 pm, Sat, 28 January 23