SS Rajamouli: ‘ಹುಚ್ಚು ಅಭಿಮಾನಿಗಳಿಗೆ ನನ್ನ ದೊಡ್ಡ ಅಪ್ಪುಗೆ’; ಆಸ್ಕರ್ ನಾಮಿನೇಷನ್ ಬಳಿಕ ರಾಜಮೌಳಿ ಬಹಿರಂಗ ಪತ್ರ

ತಾರಕ್ ಹಾಗೂ ಚರಣ್​ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ ಎಂದಿರುವ ರಾಜಮೌಳಿ ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

SS Rajamouli: ‘ಹುಚ್ಚು ಅಭಿಮಾನಿಗಳಿಗೆ ನನ್ನ ದೊಡ್ಡ ಅಪ್ಪುಗೆ’; ಆಸ್ಕರ್ ನಾಮಿನೇಷನ್ ಬಳಿಕ ರಾಜಮೌಳಿ ಬಹಿರಂಗ ಪತ್ರ
‘ಆರ್​ಆರ್​ಆರ್​’ ಚಿತ್ರದಲ್ಲಿ ಜೂ.ಎನ್​ಟಿಆರ್​​, ರಾಮ್​ ಚರಣ್​
Follow us
ರಾಜೇಶ್ ದುಗ್ಗುಮನೆ
|

Updated on: Jan 25, 2023 | 7:17 AM

‘ಆರ್​ಆರ್​ಆರ್​’ ಚಿತ್ರದ (RRR Movie)  ‘ನಾಟು ನಾಟು..’ ಹಾಡು ಹೊಸ ದಾಖಲೆ ಸೃಷ್ಟಿಸಿದೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ ನಾಮಿನೇಷನ್​ಗೆ ಆಯ್ಕೆ ಆಗಿದೆ. ಈ ಹಾಡಿನ ಜತೆಗೆ ಭಾರತದ ಎರಡು ಕಿರುಚಿತ್ರಗಳು ನಾಮನಿರ್ದೇಶನಗೊಂಡಿವೆ. 95ನೇ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಈಗ ‘ನಾಟು ನಾಟು..’ ಆಸ್ಕರ್​​ಗೆ ನಾಮನಿರ್ದೇಶನಗೊಂಡಿರುವ ಬಗ್ಗೆ ರಾಜಮೌಳಿ (SS Rajamouli) ಅವರು ಪ್ರತಿಕ್ರಿಯಿಸಿದ್ದಾರೆ.

‘ನನ್ನ ದೊಡ್ಡಣ್ಣ (ಎಂಎಂ ಕೀರವಾಣಿ) ಅವರು ನನ್ನ ಚಿತ್ರದಲ್ಲಿನ ಹಾಡಿಗೆ ಆಸ್ಕರ್ ನಾಮನಿರ್ದೇಶನ ಪಡೆದಿದ್ದಾರೆ. ನಾನು ಹೆಚ್ಚಿನದನ್ನು ಕೇಳಲಾರೆ. ಚರಣ್ ಹಾಗೂ ತಾರಕ್​​ಗಿಂತ ಹೆಚ್ಚಿನ ಹುರುಪಿನೊಂದಿಗೆ ನಾಟು ನಾಟು ಹಾಡಿಗೆ ನಾನು ಡಾನ್ಸ್ ಮಾಡುತ್ತಿದ್ದೇನೆ. ಚಂದ್ರ ಬೋಸ್​ ಅವರೇ ಅಭಿನಂದನೆಗಳು. ಆಸ್ಕರ್ ವೇದಿಕೆ ಮೇಲೆ ನಮ್ಮ ಹಾಡು’ ಎಂದು ರಾಜಮೌಳಿ ಪತ್ರ ಆರಂಭಿಸಿದ್ದಾರೆ.

ಇದನ್ನೂ ಓದಿ
Image
Oscars 2023: ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕಿಲ್ಲ ಆಸ್ಕರ್​ ನಾಮಿನೇಷನ್​; ಪ್ರತಿಷ್ಠಿತ ಪ್ರಶಸ್ತಿಗೆ ನೆಟ್ಟಿಗರ ಬಹಿಷ್ಕಾರ
Image
Oscar 2023 Nomination: ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟ; ಭಾರತಕ್ಕೆ ಬಂಪರ್​ ಚಾನ್ಸ್​
Image
Oscar nominations 2023: ಆಸ್ಕರ್ ನಾಮಿನೇಷನ್ ಪಟ್ಟಿ ಬಿಡುಗಡೆಗೆ ಕ್ಷಣಗಣನೆ; ಭಾರತೀಯರಲ್ಲಿ ಕುತೂಹಲ

‘ಪ್ರೇಮ್ ಮಾಸ್ಟರ್​ ನಿಮಗೆ ನನ್ನ ಧನ್ಯವಾದ. ಹಾಡಿಗೆ ನಿಮ್ಮ ಕೊಡುಗೆ ಬೆಲೆ ಕಟ್ಟಲಾಗದ್ದು. ನನ್ನ ವೈಯಕ್ತಿಕ ಆಸ್ಕರ್ ನಿಮಗೆ ಸಲ್ಲುತ್ತದೆ. ತಾರಕ್ ಹಾಗೂ ಚರಣ್​ ನಿಮಗೂ ಧನ್ಯವಾದ. ನಾನು ನಿಮಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಅದಕ್ಕೆ ಕ್ಷಮೆ ಇರಲಿ’ ಎಂದಿರುವ ರಾಜಮೌಳಿ ಈ ಹಾಡಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

‘ನಾನು ಆಸ್ಕರ್​ಗಾಗಿ ಎಂದಿಗೂ ಕನಸು ಕಂಡವನಲ್ಲ. ನಾಟು ನಾಟು ಹಾಗೂ ಆರ್​ಆರ್​​ಆರ್​ ಚಿತ್ರದ ಅಭಿಮಾನಿಗಳು ಇದರಲ್ಲಿ ನಂಬಿಕೆ ಇಟ್ಟಿದ್ದರು. ಅವರು ನಮ್ಮ ಮನಸ್ಸಿನಲ್ಲಿ ಕಲ್ಪನೆಯನ್ನು ಹುಟ್ಟುಹಾಕಿದರು ಮತ್ತು ನಮ್ಮನ್ನು ಮುಂದಕ್ಕೆ ಹೋಗುವಂತೆ ಬೆಂಬಲಿಸಿದರು. ಹುಚ್ಚು ಅಭಿಮಾನಿಗಳಿಗೆ ನನ್ನ ದೊಡ್ಡ ಅಪ್ಪುಗೆ’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ: Oscar 2023 Nomination: ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟ; ಭಾರತಕ್ಕೆ ಬಂಪರ್​ ಚಾನ್ಸ್​

ಇತ್ತೀಚೆಗೆ ‘ನಾಟು ನಾಟು..’ ಹಾಡಿಗೆ ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​ ಸಿಕ್ಕಿತ್ತು. ಈಗ ಆಸ್ಕರ್​ ಪ್ರಶಸ್ತಿಗೆ ಈ ಹಾಡು ನಾಮಿನೇಟ್​ ಆಗಿದೆ. ಈ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸೆಲೆಬ್ರಿಟಿಗಳ ಕಡೆಯಿಂದ, ಅಭಿಮಾನಿಗಳ ಕಡೆಯಿಂದ ಶುಭಾಶಯ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್