Oscar 2023 Nomination: ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟ; ಭಾರತಕ್ಕೆ ಬಂಪರ್ ಚಾನ್ಸ್
Naatu Naatu Song | Oscar Nominations 2023: ಅಲಿಸನ್ ವಿಲಿಯಮ್ಸ್ ಮತ್ತು ರಿಝ್ ಅಹ್ಮದ್ ಅವರು ಈ ಬಾರಿಯ ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟಿಸಿದರು. ‘ನಾಟು ನಾಟು’ ಹಾಡು, ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಗಳು ಭಾರತದಿಂದ ನಾಮಿನೇಟ್ ಆಗಿವೆ.
ಭಾರಿ ಕೌತುಕ ಮೂಡಿಸಿದ್ದ ಆಸ್ಕರ್ ಪ್ರಶಸ್ತಿ (Oscar 2023) ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಮಂಗಳವಾರ (ಜ.24) ಸಂಜೆ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿರುವ ಸ್ಯಾಮ್ಯುವೆಲ್ ಗೋಲ್ಡ್ವಿನ್ ಥಿಯೇಟರ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಮಿನೇಷನ್ (Oscar Nominations 2023) ಲಿಸ್ಟ್ ಅನೌನ್ಸ್ ಮಾಡಲಾಗಿದೆ. ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್ಲಿಸ್ಟ್ ಆಗಿದ್ದರಿಂದ ನಾಮಿನೇಷನ್ ಪ್ರಕ್ರಿಯೆ ಮೇಲೆ ಸಖತ್ ನಿರೀಕ್ಷೆ ಮೂಡಿತ್ತು. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ (Naatu Naatu) ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ. ಅಲಿಸನ್ ವಿಲಿಯಮ್ಸ್ ಮತ್ತು ರಿಝ್ ಅಹ್ಮದ್ ಅವರು ಈ ಬಾರಿಯ ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟಿಸಿದರು.
This year’s Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023
ಆಸ್ಕರ್ಗೆ ‘ನಾಟು ನಾಟು..’ ನಾಮಿನೇಟ್:
‘ನಾಟು ನಾಟು..’ ಹಾಡಿಗೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ‘ಗೋಲ್ಡನ್ ಗ್ಲೋಬ್ 2023’ ಅವಾರ್ಡ್ ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದರು. ಈಗ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವುದು ಭಾರತೀಯ ಸಿನಿಪ್ರಿಯರಿಗೆ ಸಂತಸ ಮೂಡಿಸಿದೆ. ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
‘ಚೆಲ್ಲೋ ಶೋ’ ಚಿತ್ರಕ್ಕೆ ನಿರಾಸೆ:
ಆಸ್ಕರ್ನ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ಭಾರತದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿತ್ತು. ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ ವತಿಯಿಂದ ಈ ಚಿತ್ರವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಂತಿಮ ಸುತ್ತಿನಲ್ಲಿ ನಾಮಿನೇಟ್ ಆಗುವಲ್ಲಿ ‘ಚೆಲ್ಲೋ ಶೋ’ ಸಿನಿಮಾ ವಿಫಲವಾಗಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ.
ಇದನ್ನೂ ಓದಿ: Oscar 2023: ‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್ ಚರಣ್ ಬಳಿ ಶಾರುಖ್ ಖಾನ್ ಮನವಿ
‘ವಿಕ್ರಾಂತ್ ರೋಣ’, ‘ಕಾಂತಾರ’ ಚಿತ್ರಕ್ಕೆ ಆಸ್ಕರ್ ಕನಸು ಭಗ್ನ:
ವಿಶ್ವದ 300ಕ್ಕೂ ಅಧಿಕ ಸಿನಿಮಾಗಳು ಈ ಬಾರಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಹಣಾಹಣಿ ನಡೆಸುವ ಅರ್ಹತೆ ಪಡೆದಿದ್ದವು. ಆ ಪೈಕಿ ಕನ್ನಡದ ಸಿನಿಮಾಗಳಾದ ‘ಕಾಂತಾರ’, ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಈ ಚಿತ್ರಗಳು ಯಾವುದಾದರೂ ವಿಭಾಗದಲ್ಲಿ ನಾಮಿನೇಟ್ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಅದೇ ರೀತಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೂಡ ಯಾವುದೇ ವಿಭಾಗದಲ್ಲೂ ನಾಮಿನೇಟ್ ಆಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:23 pm, Tue, 24 January 23