- Kannada News Photo gallery Kabzaa movie release date hashtag beats Pathaan movie on twitter trending
Kabzaa: ಟ್ವಿಟರ್ ಟ್ರೆಂಡಿಂಗ್ನಲ್ಲಿ ‘ಪಠಾಣ್’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್. ಚಂದ್ರು ಕಮಾಲ್
Kabzaa Release Date: ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ. ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿದೆ.
Updated on: Jan 24, 2023 | 4:36 PM

ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿದೆ. ಬಹುಭಾಷೆಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕಾಗಿ ಇಡೀ ದೇಶದ ಸಿನಿಪ್ರಿಯರು ಕಾದಿದ್ದಾರೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಸದ್ದು ಮಾಡುತ್ತಿದೆ.

‘ಕಬ್ಜ’ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಲಾಗಿದೆ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರ ಬಿಡುಗಡೆ ಆಗಲಿದೆ. ಅದ್ದೂರಿಯಾಗಿ ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ರಿಲೀಸ್ ದಿನಾಂಕ ಅನೌನ್ಸ್ ಮಾಡುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ‘ಕಬ್ಜ’ ಕ್ರೇಜ್ ಜೋರಾಗಿದೆ. ಟ್ವಿಟರ್ ಟ್ರೆಂಡಿಂಗ್ನಲ್ಲಿ ಈ ಚಿತ್ರದ ಹ್ಯಾಶ್ ಟ್ಯಾಗ್ಗಳು ರಾರಾಜಿಸಿವೆ. ಅಭಿಮಾನಿಗಳ ನಿರೀಕ್ಷೆಯ ಮಟ್ಟಕ್ಕೆ ಇದೇ ಸಾಕ್ಷಿ.

ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರವನ್ನೂ ಮೀರಿಸಿ ‘ಕಬ್ಜ’ ಚಿತ್ರದ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಕನ್ನಡದ ಸಿನಿಮಾ ಮೇಲೆ ದೇಶಾದ್ಯಂತ ಇರುವ ಪ್ರೇಕ್ಷಕರಿಗೆ ಇಷ್ಟೊಂದು ಆಸಕ್ತಿ ತೋರಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಉಪೇಂದ್ರ, ಸುದೀಪ್ ನಟನೆಯ ‘ಕಬ್ಜ’ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ ಮಾಡಿದ್ದಾರೆ. ಈ ಘಟಾನುಘಟಿಗಳ ಕಾಂಬಿನೇಷನ್ ಬಗ್ಗೆ ಸಿನಿಪ್ರಿಯರು ಸಖತ್ ಭರವಸೆ ಇಟ್ಟುಕೊಂಡಿದ್ದಾರೆ. 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ‘ಕಬ್ಜ’ ಕೂಡ ಸ್ಥಾನ ಪಡೆದುಕೊಂಡಿದೆ.




