Updated on: Jan 24, 2023 | 3:19 PM
ನಟಿ ಅಮೂಲ್ಯ ಅವರು ಈಗ ಸಂಪೂರ್ಣ ಸಮಯವನ್ನು ಕುಟುಂಬಕ್ಕೆ ಕೊಡುತ್ತಿದ್ದಾರೆ. ಮಕ್ಕಳು ಹಾಗೂ ಪತಿ ಜಗದೀಶ್ ಜತೆ ಸಮಯ ಕಳೆಯುತ್ತಿದ್ದಾರೆ.
ಅಮೂಲ್ಯ ಅವರು ಕುಟುಂಬದ ಜತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಘಾಟಿ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಟಿ ಹಾಗೂ ಕುಟುಂಬಸ್ಥರು ಕೆಲ ಕಾಲ ದೇವಾಲಯದ ಆವರಣದಲ್ಲಿ ಕುಳಿತುಕೊಂಡಿದ್ದರು. ನಂತರ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಅಮೂಲ್ಯ ಅವರನ್ನು ನೋಡಿದ ನಂತರದಲ್ಲಿ ಫ್ಯಾನ್ಸ್ ಅವರನ್ನು ಭೇಟಿ ಮಾಡಲು ಮುಗಿ ಬಿದ್ದಿದ್ದಾರೆ. ಅನೇಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಅಮೂಲ್ಯ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.