Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​

TV9kannada Web Team

TV9kannada Web Team | Edited By: Madan Kumar

Updated on: Jan 10, 2023 | 10:31 PM

Shah Rukh Khan | Pathaan Movie: ‘ಇಡೀ ಪಠಾಣ್​ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ’ ಎಂದು ರಾಮ್​ ಚರಣ್​ ಶುಭ ಹಾರೈಸಿದ್ದಾರೆ. ಅವರ ಹಾರೈಕೆಗೆ ಶಾರುಖ್​ ಖಾನ್​ ಆತ್ಮೀಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​
ರಾಮ್ ಚರಣ್, ಶಾರುಖ್ ಖಾನ್

ಬಾಲಿವುಡ್​ ಮತ್ತು ಸೌತ್​ ಸಿನಿಮಾ ಎಂಬ ಪೈಪೋಟಿ ಏನೇ ಇರಬಹುದು. ಆದರೆ ಹಿಂದಿ ಚಿತ್ರರಂಗದ ಸ್ಟಾರ್​ ನಟರು ದಕ್ಷಿಣದ ಹೀರೋಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ರಾಮ್​ ಚರಣ್​ ಮತ್ತು ಶಾರುಖ್​ ಖಾನ್​ (Shah Rukh Khan) ನಡುವಿನ ಸ್ನೇಹ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಬಿಡುಗಡೆಗೆ ಸಿ​ದ್ಧವಾಗಿದೆ. ಈ ಚಿತ್ರದ ಟ್ರೇಲರ್​ ಅನ್ನು ರಾಮ್​ ಚರಣ್ (Ram Charan)​ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಶಾರುಖ್​ ಖಾನ್​ ಅವರು ಆತ್ಮೀಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಈ ಮಾತಿನ ಮಧ್ಯೆ ಆಸ್ಕರ್​ ಪ್ರಶಸ್ತಿ (Oscar 2023) ವಿಚಾರ ಪ್ರಸ್ತಾಪ ಆಗಿದೆ!

ರಾಮ್​ ಚರಣ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್​ ಪ್ರಶಸ್ತಿ ಪಡೆಯಲು ಹಣಾಹಣಿ ನಡೆಸುತ್ತಿದೆ. ಖಂಡಿತವಾಗಿಯೂ ಈ ಚಿತ್ರಕ್ಕೆ ಆಸ್ಕರ್​ ಒಲಿಯಲಿದೆ ಎಂಬ ಭರವಸೆ ಶಾರುಖ್​ ಖಾನ್​ ಅವರಿಗೆ ಇದೆ. ಅದೇ ನಂಬಿಕೆ ಮೇಲೆ ಅವರು ಟ್ವೀಟ್​ ಮಾಡಿದ್ದಾರೆ. ‘ಆಸ್ಕರ್​ ಪ್ರಶಸ್ತಿಯನ್ನು ಆರ್​ಆರ್​ಆರ್​ ಚಿತ್ರತಂಡ ಭಾರತಕ್ಕೆ ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್​’ ಎಂದು ಶಾರುಖ್​ ಖಾನ್​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Oscar 2023: ಆಸ್ಕರ್​ ಪ್ರಶಸ್ತಿ ಕಣದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ; ಖುಷಿ ಸುದ್ದಿ ಹಂಚಿಕೊಂಡ ವಿವೇಕ್​ ಅಗ್ನಿಹೋತ್ರಿ

ಶಾರುಖ್​ ಖಾನ್​ ಅವರು ಈ ಮಾತಿಗೆ ಪ್ರತಿಕ್ರಿಯಿಸಿರುವ ರಾಮ್​ ಚರಣ್​ ಅವರು, ‘ಖಂಡಿತವಾಗಿಯೂ ಶಾರುಖ್​ ಸರ್​. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು’ ಎಂದು ಟ್ವೀಟ್​ ಮಾಡಿದ್ದಾರೆ. ಈ ನಟರಿಬ್ಬರ ನಡುವಿನ ಈ ಟ್ವಿಟರ್​ ಮಾತುಕಥೆ ವೈರಲ್​ ಆಗಿದೆ. ಅಭಿಮಾನಿಗಳು ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಸ್ನೇಹವನ್ನು ಫ್ಯಾನ್ಸ್​ ಕೊಂಡಾಡುತ್ತಿದ್ದಾರೆ.

‘ಪಠಾಣ್​’ ಟ್ರೇಲರ್​ಗೆ ರಾಮ್​ ಚರಣ್​ ಮೆಚ್ಚುಗೆ:

‘ಇಡೀ ಪಠಾಣ್​ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ. ಹಿಂದೆಂದೂ ಕಾಣದ ರೀತಿಯಲ್ಲಿ ಶಾರುಖ್​ ಖಾನ್​ ಅವರನ್ನು ಸಾಹಸ ದೃಶ್ಯಗಳಲ್ಲಿ ನೋಡಲು ಕಾದಿದ್ದೇನೆ’ ಎಂದು ಟ್ವೀಟ್​ ಮಾಡಿರುವ ರಾಮ್​ ಚರಣ್​ ಅವರು ‘ಪಠಾಣ್​’ ಟ್ರೇಲರ್​ ಹಂಚಿಕೊಂಡಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.

ಇದನ್ನೂ ಓದಿ: RRR: ಆಸ್ಕರ್​ ಪ್ರಶಸ್ತಿ ಪಡೆಯುತ್ತಾ ‘ಆರ್​ಆರ್​​ಆರ್​’ ಸಿನಿಮಾ? ಜಾಗತಿಕ ಮಟ್ಟದಲ್ಲಿ ರಾಜಮೌಳಿ ಚಿತ್ರದ ಬಗ್ಗೆ ಚರ್ಚೆ

ಸಿದ್ದಾರ್ಥ್​ ಆನಂದ್​ ನಿರ್ದೇಶನದ ‘ಪಠಾಣ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ್ದಾರೆ. ವಿಲನ್​ ಪಾತ್ರದಲ್ಲಿ ಜಾನ್​ ಅಬ್ರಾಹಂ ಅವರು ಅಬ್ಬರಿಸಲಿದ್ದಾರೆ. ವಿವಿಧ ದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಅದ್ದೂರಿ ಬಜೆಟ್​ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada