AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathan Trailer: ವನವಾಸ ಮುಗಿಸಿ ಬಂದ ‘ಪಠಾಣ್’; ಶಾರುಖ್ ಚಿತ್ರದ ಟ್ರೇಲರ್​ನಲ್ಲಿ ಭರಪೂರ ಆ್ಯಕ್ಷನ್

ಜಾನ್ ಅಬ್ರಾಹಂ ‘ಪಠಾಣ್​’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ರಾ ಏಜೆಂಟ್​ ಆಗಿ ಮಿಂಚಿದ್ದಾರೆ. ಟ್ರೇಲರ್​ನ ಉದ್ದಕ್ಕೂ ಸಾಕಷ್ಟು ಆ್ಯಕ್ಷನ್​ಗಳಿವೆ.

Pathan Trailer: ವನವಾಸ ಮುಗಿಸಿ ಬಂದ ‘ಪಠಾಣ್’; ಶಾರುಖ್ ಚಿತ್ರದ ಟ್ರೇಲರ್​ನಲ್ಲಿ ಭರಪೂರ ಆ್ಯಕ್ಷನ್
‘ಪಠಾಣ್​’ ಚಿತ್ರದಲ್ಲಿ ಶಾರುಖ್ ಖಾನ್
TV9 Web
| Edited By: |

Updated on:Jan 10, 2023 | 11:57 AM

Share

ಶಾರುಖ್ ಖಾನ್ (Shah Rukh Khan) ನಟನೆಯ ಸಿನಿಮಾ ಎಂದರೆ ಒಂದಷ್ಟು ಆ್ಯಕ್ಷನ್ ಇರಲೇಬೇಕು. ‘ಡಾನ್​’, ‘ಡಾನ್​ 2’ ಸೇರಿ ಶಾರುಖ್ ನಟನೆಯ ಹಲವು ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇತ್ತು. ಈಗ ‘ಪಠಾಣ್​’ (Pathan Movie) ಚಿತ್ರದ ಮೂಲಕ ಶಾರುಖ್ ಖಾನ್ ಮತ್ತೆ ಆ್ಯಕ್ಷನ್ ಅವತಾರದೊಂದಿಗೆ ಮರಳುತ್ತಿದ್ದಾರೆ. ಇಂದು (ಜನವರಿ 10) ಬೆಳಗ್ಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಶಾರುಖ್ ಖಾನ್ ಅವರು 2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಬ್ರೇಕ್ ಪಡೆದುಕೊಂಡಿದ್ದರು. ನಾಲ್ಕು ವರ್ಷದ ಬಳಿಕ ಅವರು ‘ಪಠಾಣ್​’ ಮೂಲಕ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಆರಂಭದಲ್ಲಿ ‘ಪಠಾಣ್​ ವನವಾಸ ಮುಗಿಸಿ ಬರುವ ಟೈಮ್ ಆಯಿತು’ ಎಂಬ ಡೈಲಾಗ್ ಬರುತ್ತದೆ. ಈ ಸಾಲು ಶಾರುಖ್​​ಗೆ ಹೊಂದುತ್ತದೆ ಎಂದು ಫ್ಯಾನ್ಸ್ ಹೇಳಿದ್ದಾರೆ.

ಜಾನ್ ಅಬ್ರಾಹಂ ‘ಪಠಾಣ್​’ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ರಾ ಏಜೆಂಟ್​ ಆಗಿ ಮಿಂಚಿದ್ದಾರೆ. ಟ್ರೇಲರ್​ನ ಉದ್ದಕ್ಕೂ ಸಾಕಷ್ಟು ಆ್ಯಕ್ಷನ್​ಗಳಿವೆ. ಶಾರುಖ್ ಹಾಗೂ ಜಾನ್ ಅಬ್ರಾಹಂ ಮುಖಾಮುಖಿ ಆಗಿ ಫೈಟ್ ಮಾಡಿದ್ದಾರೆ. ಕಾರ್ ಚೇಸಿಂಗ್ ದೃಶ್ಯಗಳು ಮೈನವೇರೇಳಿಸಿದೆ. ಸಿದ್ದಾರ್ಥ್ ಆನಂದ್ ಅವರು ‘ವಾರ್​’ ಅಂತಹ ಆ್ಯಕ್ಷನ್ ಸಿನಿಮಾ ಮಾಡಿ ಫೇಮಸ್ ಆದವರು. ಅವರು ‘ಪಠಾಣ್​’ ಚಿತ್ರ ಮಾಡಿದ್ದಾರೆ. ಇಲ್ಲಿಯೂ ಭರಪೂರ ಆ್ಯಕ್ಷನ್ ದೃಶ್ಯ ಇಟ್ಟಿದ್ದಾರೆ.

ಜಾನ್ ಅಬ್ರಾಹಂ ಔಟ್​ಪುಟ್ ಎಕ್ಸ್ ಹೆಸರಿನ ಉಗ್ರ ಸಂಘಟನೆ ನಡೆಸುತ್ತಿರುತ್ತಾರೆ. ಕಾಂಟ್ರ್ಯಾಕ್ಟ್ ತೆಗೆದುಕೊಂಡು ಈ ಸಂಘಟನೆ ದಾಳಿ ಮಾಡುತ್ತಿರುತ್ತದೆ. ಈ ಸಂಘಟನೆ ಭಾರತವನ್ನು ಟಾರ್ಗೆಟ್ ಮಾಡುತ್ತದೆ. ಈ ದಾಳಿಯನ್ನು ತಪ್ಪಿಸಲು ಶಾರುಖ್ ಹೋರಾಡುತ್ತಾರೆ. ಇದು ಸಿನಿಮಾದ ಕಥೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

ಜನವರಿ 25ರಂದು ‘ಪಠಾಣ್​’ ರಿಲೀಸ್ ಆಗಲಿದೆ. ರಿಲೀಸ್ ಆದ ಕೆಲವೇ ನಿಮಿಷಕ್ಕೆ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದು ಚಿತ್ರದ ಮೇಲಿರುವ ನಿರೀಕ್ಷೆ ಎಷ್ಟು ಎಂಬುದನ್ನು ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:37 am, Tue, 10 January 23

ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
ಜಿದ್ದಿಗೆ ಬಿದ್ದ ಸಿದ್ದರಾಮಯ್ಯ-ಡಿಕೆಶಿ:ಅಪೆಕ್ಸ್ ಬ್ಯಾಂಕ್ ಚುನಾವಣೆ ರದ್ದು!
4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?
4 ಲಕ್ಷ ರೂ. ತಲುಪಿದ 1 ಕೆಜಿ ಬೆಳ್ಳಿ ಬೆಲೆ! ಈಗ ಹೂಡಿಕೆ ಮಾಡಿದ್ರೆ ಹೇಗೆ?