AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mission Majnu: ‘ಮಿಷನ್​ ಮಜ್ನು’ ಟ್ರೇಲರ್​: ಸಿದ್ದಾರ್ಥ್​ ಮಲ್ಹೋತ್ರ ಪಾತ್ರ ನೋಡಿದವರಿಗೆ ನೆನಪಾಯ್ತು ‘ರಾಜಿ’ ಸಿನಿಮಾ

Mission Majnu Trailer: ‘ರಾಜಿ’ ಸಿನಿಮಾ ತುಂಬ ಕ್ಲಾಸ್​ ಆಗಿ ಮೂಡಿಬಂದಿತ್ತು. ಆದರೆ ‘ಮಿಷನ್​ ಮಜ್ನು’ ಸಖತ್​ ಮಾಸ್​ ಆಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

Mission Majnu: ‘ಮಿಷನ್​ ಮಜ್ನು’ ಟ್ರೇಲರ್​: ಸಿದ್ದಾರ್ಥ್​ ಮಲ್ಹೋತ್ರ ಪಾತ್ರ ನೋಡಿದವರಿಗೆ ನೆನಪಾಯ್ತು ‘ರಾಜಿ’ ಸಿನಿಮಾ
ಸಿದ್ದಾರ್ಥ್ ಮಲ್ಹೋತ್ರ
TV9 Web
| Updated By: ಮದನ್​ ಕುಮಾರ್​|

Updated on:Jan 09, 2023 | 6:52 PM

Share

ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಮಿಷನ್​ ಮಜ್ನು’ (Mission Majnu) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಹೀರೋ ಆಗಿ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ನಟಿಸಿದ್ದರೆ, ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಿಷನ್​ ಮಜ್ನು’ ಚಿತ್ರವು ಥಿಯೇಟರ್​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸದ್ಯಕ್ಕೆ ಬಾಲಿವುಡ್​ ಸಿನಿಮಾಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಆಗುತ್ತಿಲ್ಲವಾದ್ದರಿಂದ ಒಟಿಟಿಯಲ್ಲಿ ರಿಲೀಸ್​ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಜನವರಿ 20ರಂದು ನೆಟ್​ಫ್ಲಿಕ್ಸ್​ (Netflix) ಮೂಲಕ ‘ಮಿಷನ್​ ಮಜ್ನು’ ಸಿನಿಮಾ ರಿಲೀಸ್​ ಆಗಲಿದೆ. ಅಚ್ಚರಿ ಎಂದರೆ ಈ ಚಿತ್ರದ ಟ್ರೇಲರ್​ ನೋಡಿದವರಿಗೆ ಆಲಿಯಾ ಭಟ್​ ನಟನೆಯ ‘ರಾಜಿ’ ಸಿನಿಮಾ ನೆನಪಾಗುತ್ತಿದೆ.

‘ರಾಜಿ’ ಮತ್ತು ‘ಮಿಷನ್​ ಮಜ್ನು’ ಚಿತ್ರಗಳ ನಡುವೆ ಒಂದು ಸಾಮ್ಯತೆ ಇದೆ. ಈ ಎರಡೂ ಚಿತ್ರಗಳ ಕಥೆಯಲ್ಲಿ ಹೋಲಿಕೆ ಇದೆ. ಭಾರತದ ವಿರುದ್ಧ ಪಾಕಿಸ್ತಾನ ನಡೆಸುವ ಸಂಚನ್ನು ತಿಳಿಯಲು ಹೀರೋ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಜೆಯಂತೆ ಬದುಕುತ್ತಾನೆ. ಅಲ್ಲಿನ ಯುವತಿಯನ್ನೇ ಮದುವೆ ಆಗುತ್ತಾನೆ. ಇದು ‘ಮಿಷನ್​ ಮಜ್ನು’ ಚಿತ್ರದ ಕಥೆ. ‘ರಾಜಿ’ ಸಿನಿಮಾದ ಕಥೆ ಕೂಡ ಇದೇ ರೀತಿ ಇತ್ತು. ಭಾರತದ ಯುವತಿಯೊಬ್ಬಳು ಪಾಕಿಸ್ತಾನದ ಸೈನ್ಯಾಧಿಕಾರಿಯೊಬ್ಬನನ್ನು ಮದುವೆಯಾಗಿ ಹೋಗಿ, ಅಲ್ಲಿ ಭಾರತದ ಪರವಾಗಿ ಏಜೆಂಟ್​ ಆಗಿ ಕೆಲಸ ಮಾಡುತ್ತಾಳೆ. ಹಾಗಾಗಿ ಪ್ರೇಕ್ಷಕರಿಗೆ ‘ಮಿಷನ್​ ಮಜ್ನು’ ಟ್ರೇಲರ್​ ನೋಡಿದಾಗ ‘ರಾಜಿ’ ಚಿತ್ರ ನೆನಪಾಗಿದೆ.

ಇದನ್ನೂ ಓದಿ: ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ

ಇದನ್ನೂ ಓದಿ
Image
ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?
Image
ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​; ಸಿದ್ದಾರ್ಥ್​-ಕಿಯಾರಾ ಪ್ರೇಮ್​ ಕಹಾನಿಗೆ ಸ್ಯಾಡ್ ಎಂಡಿಂಗ್
Image
ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ
Image
Kiara Advani: ‘ಕಿಯಾರಾ ಜೊತೆ ಬಲವಂತವಾಗಿ ಕಿಸ್​ ಮಾಡಬೇಕಾಯ್ತು’: ಎಲ್ಲವನ್ನೂ ಒಪ್ಪಿಕೊಂಡ ಶೇರ್​ಷಾ ಹೀರೋ ಸಿದ್ದಾರ್ಥ್​

‘ರಾಜಿ’ ಸಿನಿಮಾ ತುಂಬ ಕ್ಲಾಸ್​ ಆಗಿ ಮೂಡಿಬಂದಿತ್ತು. ಆದರೆ ‘ಮಿಷನ್​ ಮಜ್ನು’ ಸಖತ್​ ಮಾಸ್​ ಆಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳ ಕೂಡ ಇರಲಿವೆ. ಶಾಂತನು ಭಾಗ್ಚಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಕಿಯಾರಾ ಜತೆಗಿನ ಬ್ರೇಕಪ್​ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್​ ಮಲ್ಹೋತ್ರಾ; ಫ್ಯಾನ್ಸ್​ ಊಹಿಸಿದ್ದೇನು?

ಈ ಹಿಂದೆ ಸಿದ್ದಾರ್ಥ್​ ಮಲ್ಹೋತ್ರ ನಟಿಸಿದ್ದ ‘ಶೇರ್ಷಾ’ ಸಿನಿಮಾ ಕೂಡ ನೈಜ ಘಟನೆಗಳನ್ನು ಆಧರಿಸಿ ದೇಶಭಕ್ತಿ ಚಿತ್ರವಾಗಿತ್ತು. ಅದು ಸಹ ಒಟಿಟಿಯಲ್ಲಿ ರಿಲೀಸ್​ ಆಗಿ ಜನಮೆಚ್ಚುಗೆ ಗಳಿಸಿತ್ತು. ಈಗ ಅವರು ಅದೇ ರೀತಿ ಮತ್ತೊಂದು ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆಯ ‘ಗುಡ್​ಬೈ’ ಚಿತ್ರ ಕಳೆದ ವರ್ಷ ರಿಲೀಸ್​ ಆಗಿ ಸೋಲು ಕಂಡಿತು. ಹಾಗಾಗಿ ಅವರಿಗೆ ‘ಮಿಷನ್​ ಮಜ್ನು’ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ರಶ್ಮಿಕಾ ಮಂದಣ್ಣ ಮತ್ತು ಸಿದ್ದಾರ್ಥ್​ ಮಲ್ಹೋತ್ರ ಅವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:52 pm, Mon, 9 January 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!