ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ

ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ
ಕಿಯಾರಾ-ಸಿದ್ದಾರ್ಥ್​

ಕಿಯಾರಾ ಹಾಗೂ ಸಿದ್ಧಾರ್ಥ್​ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅವರು ಸಿದ್ದಾರ್ಥ್​ ಪಾಲಕರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.

TV9kannada Web Team

| Edited By: Rajesh Duggumane

Dec 28, 2021 | 3:23 PM

ಕಿಯಾರಾ ಅಡ್ವಾಣಿ (Kiara Advani) ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ (Sidharth Malhotra) ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್​ ಅಂಗಳದಲ್ಲಿ ಹರಿದಾಡಿತ್ತು. ಈ ವದಂತಿಯನ್ನು ನಂಬುವ ರೀತಿಯಲ್ಲಿ ಸಾಕಷ್ಟು ಘಟನೆಗಳು ನಡೆದವು. ಆದರೆ, ಇದನ್ನು ಕಿಯಾರಾ ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ‘ನಾವಿಬ್ಬರೂ ಉತ್ತಮ ಗೆಳೆಯರಷ್ಟೇ’ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಕಿಯಾರಾ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಈಗ ಕಿಯಾರಾ ಹಾಗೂ ಸಿದ್ದಾರ್ಥ್​ ಪ್ರೀತಿಯಲ್ಲಿರುವ ವಿಚಾರಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ.

ಕಿಯಾರಾ ಹಾಗೂ ಸಿದ್ಧಾರ್ಥ್​ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಅವರು ಸಿದ್ದಾರ್ಥ್​ ಪಾಲಕರನ್ನು ಭೇಟಿ ಮಾಡಿದ್ದರು. ಈ ಭೇಟಿ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ಘಟನೆ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹುಟ್ಟಿಕೊಳ್ಳಲು ಆರಂಭಿಸಿದವು. ಈ ಬಗ್ಗೆ ಕಿಯಾರಾ ಸಾಕಷ್ಟು ಬಾರಿ ಉತ್ತರಿಸುವ ಪ್ರಯತ್ನ ಮಾಡಿದ್ದರು. ಆದರೆ, ಇದನ್ನು ನಂಬೋಕೆ ಅಭಿಮಾನಿಗಳು ರೆಡಿ ಇಲ್ಲ.

ಕಿಯಾರಾ ಹಾಗೂ ಸಿದ್ದಾರ್ಥ್​ ಹೊಸ ವರ್ಷ ವೆಲ್​ಕಮ್​ ಮಾಡಲು ಮಾಲ್ಡೀವ್ಸ್​ಗೆ ತೆರಳಿದ್ದಾರೆ. ಇಬ್ಬರೂ ಇಂದು (ಡಿಸೆಂಬರ್​ 28) ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಪಾಪರಾಜಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ, ಈ ಫೋಟೋ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖರು. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಎಂ.ಎಸ್​. ಧೋನಿ: ಅನ್​ಟೋಲ್ಡ್​ ಸ್ಟೋರಿ’, ‘ಕಬೀರ್​ ಸಿಂಗ್’, ‘ಗುಡ್​ ನ್ಯೂಸ್’ ಮುಂತಾದ ಚಿತ್ರಗಳಿಂದ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಲಸ್ಟ್​ ಸ್ಟೋರೀಸ್​ ವೆಬ್​ ಸರಣಿ ಮೂಲಕವೂ ಅವರ ಜನಪ್ರಿಯತೆ ಹೆಚ್ಚಿತು. ಈ ಬಾಲಿವುಡ್​ ಬೆಡಗಿಗೆ ದಕ್ಷಿಣ ಭಾರತದಲ್ಲೂ ಸಖತ್​ ಡಿಮ್ಯಾಂಡ್​ ಇದೆ. ತೆಲುಗಿನ ಸ್ಟಾರ್​ ನಟರ ಜೊತೆ ಅಭಿನಯಿಸಿರುವ ಅವರಿಗೆ ಇತ್ತೀಚೆಗೆ ಬಂಪರ್​ ಆಫರ್​ ಸಿಕ್ಕಿತ್ತು. ನಟ ರಾಮ್​ ಚರಣ್​ ಮತ್ತು ನಿರ್ದೇಶಕ ಶಂಕರ್​ ಕಾಂಬಿನೇಷನ್​ನ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ಶೇರ್​​ಷಾ’ ಸಿನಿಮಾದಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್​ ಒಟ್ಟಾಗಿ ನಟಿಸಿದ್ದರು.

ಇದನ್ನೂ ಓದಿ: ‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

ಸಿದ್ದಾರ್ಥ್​ ಶುಕ್ಲಾ ಪ್ರಿಯತಮೆ ಶೆಹನಾಜ್ ಗಿಲ್​ ತಂದೆ ಮೇಲೆ ಗುಂಡಿನ ದಾಳಿ; ನಟಿಗೆ ಮತ್ತೊಂದು ಆಘಾತ

Follow us on

Related Stories

Most Read Stories

Click on your DTH Provider to Add TV9 Kannada