‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?
ಸಮಂತಾ

Oo Antava OoOo Antava Mava: ಸಮಂತಾ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್​ ಸಿಕ್ಕಿದೆ. ‘ಪುಷ್ಪ’ ಸಿನಿಮಾದಲ್ಲಿ ಅವರು ಡ್ಯಾನ್ಸ್​ ಮಾಡಿದ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಗೀತೆಯ ಕ್ರೇಜ್​ ಎಷ್ಟಿದೆ ಎಂಬುದಕ್ಕೆ ಈಗ ಇನ್ನೊಂದು ಉದಾಹರಣೆ ಸಿಕ್ಕಿದೆ.

TV9kannada Web Team

| Edited By: shivaprasad.hs

Dec 28, 2021 | 7:38 AM

ದಿನದಿಂದ ದಿನಕ್ಕೆ ನಟಿ ಸಮಂತಾ (Samantha) ಅವರ ಚಾರ್ಮ್​ ಹೆಚ್ಚುತ್ತಿದೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಇತ್ತೀಚೆಗೆ ಅವರು ‘ಪುಷ್ಪ’ (Pushpa Movie) ಸಿನಿಮಾದಲ್ಲಿ ಡ್ಯಾನ್ಸ್​ ಮಾಡಿದ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ..’ (Oo Antava OoOo Antava Mava) ಹಾಡು ಸೂಪರ್​ ಹಿಟ್​ ಆಗಿದೆ. ಯೂಟ್ಯೂಬ್​ನಲ್ಲಿ (YouTube) ಈ ಗೀತೆ ಹೊಸ ದಾಖಲೆ ಬರೆದಿದೆ. ‘ಪುಷ್ಪ’ ಸಿನಿಮಾದ ಗೆಲುವಿನಲ್ಲಿ ಈ ಹಾಡಿನ ಕೊಡುಗೆ ದೊಡ್ಡದು. ಈ ಚಿತ್ರದ ಮುಖ್ಯ ಪಾತ್ರಧಾರಿಗಳಾದ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರಿಗಿಂತಲೂ ಸಮಂತಾ ಅವರೇ ಹೆಚ್ಚು ಮಿಂಚುತ್ತಿದ್ದಾರೆ. ಈ ಹಾಡಿನ ಕಾರಣದಿಂದ ಈಗ ಅವರು ವಿಶ್ವದಲ್ಲೇ ನಂ.1 ಆಗಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಖುಷ್​ ಆಗಿದ್ದಾರೆ.

2021ರಲ್ಲಿ ಹೆಚ್ಚು ಸದ್ದು ಮಾಡಿದ ಟಾಪ್​ 100 ಹಾಡುಗಳ ಪಟ್ಟಿಯಲ್ಲಿ ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ನಂ.1 ಪಟ್ಟ ಪಡೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಈ ಗೀತೆಯನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಅತಿವೇಗವಾಗಿ ಹೆಚ್ಚು ವೀವ್ಸ್​ ಪಡೆಯುವಲ್ಲಿಯೂ ಈ ಹಾಡು ದಾಖಲೆ ಬರೆಯಿತು. ಈವರೆಗೂ ಈ ಗೀತೆಯ ತೆಲುಗು ವರ್ಷನ್​ 9.3 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ ಟ್ರೆಂಡ್​ ಮತ್ತು ಜನರ ಆಯ್ಕೆಯನ್ನು ಆಧರಿಸಿ ಈ ಹಾಡು ನಂ.1 ಸ್ಥಾನಕ್ಕೇರಿದೆ.

ಈ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಮಂತಾ ಖುಷಿಪಟ್ಟಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ಕುರಿತಾದ ಸುದ್ದಿಯನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ ಜತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿ ವಿಚ್ಛೇದನ ನೀಡಿದ ಬಳಿಕ ಸಮಂತಾ ಅವರ ಲಕ್​ ಖುದುರಿದೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ನಟಿಸಿದ ನಂತರ ಸಮಂತಾಗೆ ಜಾಗತಿಕ ಮಟ್ಟದಲ್ಲಿ ಡಿಮ್ಯಾಂಡ್​ ಹೆಚ್ಚಿದೆ. ಇಂಗ್ಲಿಷ್​ ಸಿನಿಮಾ ನಿರ್ದೇಶಕ ಫಿಲಿಪ್​ ಜಾನ್​ ಆ್ಯಕ್ಷನ್​-ಕಟ್​ ಹೇಳಲಿರುವ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾಕ್ಕೆ ಸಮಂತಾ ಆಯ್ಕೆ ಆಗಿದ್ದಾರೆ.

2021ರ ವರ್ಷ ಮುಗಿಯುತ್ತಿದೆ. ಈಗ ಸಮಂತಾ ಜಾಲಿ ಮೂಡ್​ನಲ್ಲಿ ಇದ್ದಾರೆ. ಫ್ರೆಂಡ್ಸ್​ ಜತೆ ಕಾಲ ಕಳೆಯುತ್ತ ಎಂಜಾಯ್​ ಮಾಡುತ್ತಿದ್ದಾರೆ. ಆ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್​ ಉತ್ತರವೇನು?

‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada