AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಬರ್ತ್​​​​ಡೇ ಪಾರ್ಟಿಯಲ್ಲಿ ಸಲ್ಮಾನ್- ಜೆನಿಲಿಯಾ ಭರ್ಜರಿ ಡಾನ್ಸ್; ವೈರಲ್ ವಿಡಿಯೋ ಇಲ್ಲಿದೆ

Genelia Deshmukh: ನಟ ಸಲ್ಮಾನ್ ನಿನ್ನೆ ಅಂದರೆ ಸೋಮವಾರ 56ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಸಲ್ಮಾನ್ ಹಾಗೂ ಜೆನಿಲಿಯಾ ಒಟ್ಟಾಗಿ ಹೆಜ್ಜೆ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.

Salman Khan: ಬರ್ತ್​​​​ಡೇ ಪಾರ್ಟಿಯಲ್ಲಿ ಸಲ್ಮಾನ್- ಜೆನಿಲಿಯಾ ಭರ್ಜರಿ ಡಾನ್ಸ್; ವೈರಲ್ ವಿಡಿಯೋ ಇಲ್ಲಿದೆ
ಜೆನಿಲಿಯಾ- ಸಲ್ಮಾನ್ ಡಾನ್ಸ್
TV9 Web
| Edited By: |

Updated on: Dec 28, 2021 | 9:14 AM

Share

ಸಲ್ಮಾನ್ ಖಾನ್ (Salman Khan) ನಿನ್ನೆ (ಡಿಸೆಂಬರ್ 27) ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಾಲಿವುಡ್​ನ ಭಾಯಿಜಾನ್ ಎಂದು ಕರೆಯಲ್ಪಡುವ ಸಲ್ಲು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟನಿಗೆ ನಿನ್ನೆ ಭಾರತೀಯ ಚಿತ್ರರಂಗ, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬಂದಿತ್ತು. ಕತ್ರಿನಾ ಕೈಫ್, ಸೋನಮ್ ಕಪೂರ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಖ್ಯಾತ ತಾರೆಯರು ಸಲ್ಲುಗೆ ಶುಭಾಶಯ ಕೋರಿದ್ದರು. ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಕೂಡ ಸಲ್ಮಾನ್​ಗೆ ವಿಶ್ ಮಾಡಿ ಶುಭ ಹಾರೈಸಿದ್ದರು. ಹುಟ್ಟುಹಬ್ಬದ ಸಂಭ್ರಮಕ್ಕೆ ಸಲ್ಮಾನ್ ನಿನ್ನೆ ರಾತ್ರಿ ಅವರ ಪನ್ವೆಲ್ ಫಾರ್ಮ್​ಹೌಸ್​ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್ ತಾರೆಯರು ಸೇರಿದಂತೆ ಹಲವರು ಆಗಮಿಸಿ ಸಲ್ಮಾನ್ ಆತಿಥ್ಯ ಸ್ವೀಕರಿಸಿದರು. ಈ ಪಾರ್ಟಿಯ ಮಸ್ತ್ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.

ಬಾಲಿವುಡ್ ನಟ ರಿತೇಶ್ ದೇಶ್​ಮುಖ್ (Riteish Deshmukh) ತಮ್ಮ ಪತ್ನಿ ಜೆನಿಲಿಯಾ (Genelia Deshmukh) ಜತೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಹಾಗೂ ಜೆನಿಲಿಯಾ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ರಿತೇಶ್ ಸೆರೆಹಿಡಿದು, ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ರಿತೇಶ್ ಸಲ್ಮಾನ್​ಗೆ ಶುಭಾಶಯ ಕೋರಿದ್ದಾರೆ.

‘‘ಅತ್ಯುತ್ತಮ ಮನಸ್ಸನ್ನು ಹೊಂದಿರುವ ಸಲ್ಮಾನ್​ಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸಂತೋಷ, ಪ್ರೀತಿ ಮತ್ತು ಉತ್ತಮ ಆರೋಗ್ಯ ನೀಡಲಿ’’ ಎಂದು ಬರೆದಿರುವ ರಿತೇಶ್, ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಜೆನಿಲಿಯಾ ಹಾಗೂ ಸಲ್ಮಾನ್ ಸ್ಟೆಪ್ಸ್​​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಿತೇಶ್ ಹಂಚಿಕೊಂಡ ವಿಡಿಯೋ ಇಲ್ಲಿದೆ:

View this post on Instagram

A post shared by Genelia Deshmukh (@geneliad)

ಜೆನಿಲಿಯಾ ಹಾಗೂ ಸಲ್ಮಾನ್ 2014ರಲ್ಲಿ ತೆರೆಗೆ ಬಂದ ‘ಜೈ ಹೋ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಸಲ್ಮಾನ್ ಪ್ರಸ್ತುತ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಯಶಸ್ವಿ ಚಿತ್ರ ‘ಬಜರಂಗಿ ಭಾಯಿಜಾನ್’ನ ಸೀಕ್ವೆಲ್​ ಘೋಷಣೆಯಾಗಿದ್ದು, ಅದಕ್ಕೆ ‘ಪವನ ಪುತ್ರ ಭಾಯಿಜಾನ್’ ಎಂದು ಹೆಸರಿಡಲಾಗಿದೆ. ಇದಲ್ಲದೇ ಸಲ್ಮಾನ್ ಬತ್ತಳಿಕೆಯಲ್ಲಿ ‘ನೋ ಎಂಟ್ರಿ’ ಚಿತ್ರದ ಸೀಕ್ವೆಲ್​ ಕೂಡ ಇದ್ದು, ಟೈಗರ್ 3 ಮುಗಿದ ಬಳಿಕ ಅದನ್ನು ಆರಂಭಿಸಲಿದ್ದಾರೆ.

ಇದನ್ನೂ ಓದಿ:

Salman Khan: ‘ಪವನ ಪುತ್ರ ಭಾಯಿಜಾನ್​’; ಸಲ್ಮಾನ್​ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ

Atrangi Re: ಮಗಳ ಚಿತ್ರ ನೋಡಿ ಕಣ್ಣೀರು ಹಾಕಿದ ಸೈಫ್- ಅಮೃತಾ; ಇದೊಂದು ರೀತಿಯ ಸಾಧನೆ ಎಂದ ಸಾರಾ ಅಲಿ ಖಾನ್

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ