Salman Khan: ‘ಪವನ ಪುತ್ರ ಭಾಯಿಜಾನ್​’; ಸಲ್ಮಾನ್​ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ

Pawan Putra Bhaijaan: ಸಲ್ಮಾನ್ ಖಾನ್​ ನಟನೆಯ ‘ಬಜರಂಗಿ ಭಾಯಿಜಾನ್​’ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಈಗ ಅದರ ಸೀಕ್ವೆಲ್​ ‘ಪವನ ಪುತ್ರ ಭಾಯಿಜಾನ್​​’ ಚಿತ್ರಕ್ಕೂ ಅವರೇ ಕಥೆ ಬರೆಯುತ್ತಿದ್ದಾರೆ.

Salman Khan: ‘ಪವನ ಪುತ್ರ ಭಾಯಿಜಾನ್​’; ಸಲ್ಮಾನ್​ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ
ಸಲ್ಮಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 27, 2021 | 12:35 PM

ನಟ ಸಲ್ಮಾನ್​ ಖಾನ್ (Salman Khan)​ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಮುಂಬರುವ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಇಂದು (ಡಿ.27) ಸಲ್ಮಾನ್​ ಖಾನ್​ ಜನ್ಮದಿನ (Salman Khan Birthday). ಆ ಪ್ರಯುಕ್ತ ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಸಲ್ಲು ಬಹಿರಂಗ ಪಡಿಸಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಪವನ ಪುತ್ರ ಭಾಯಿಜಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ಇದನ್ನು ಕೇಳಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಈ ಹಿಂದೆ ಸಲ್ಮಾನ್​ ಖಾನ್​ ನಟಿಸಿದ್ದ ‘ಬಜರಂಗಿ ಭಾಯಿಜಾನ್​’ (Bajrangi Bhaijaan) ಸಿನಿಮಾ ಸೂಪರ್ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಪವನ ಪುತ್ರ ಭಾಯಿಜಾನ್​’ (Pawan Putra Bhaijaan) ಮೂಡಿಬರಲಿದೆ.

‘ಬಜರಂಗಿ ಭಾಯಿಜಾನ್​’ ಸಿನಿಮಾಗೆ ಸೀಕ್ವೆಲ್​ ಮಾಡುವ ಬಗ್ಗೆ ಕೆಲವೇ ದಿನಗಳ ಹಿಂದೆ ಸಲ್ಮಾನ್​ ಖಾನ್​ ಘೋಷಣೆ ಮಾಡಿದ್ದರು. ‘ಆರ್​ಆರ್​​ಆರ್​’ ಸಿನಿಮಾದ ಪ್ರಚಾರದ ಕಾರ್ಯದ ವೇಳೆ ಅವರು ಆ ಬಗ್ಗೆ ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಈಗ ಟೈಟಲ್​ ಫಿಕ್ಸ್​ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ​ ಅವರ ತಂದೆ, ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಈ ಶೀರ್ಷಿಕೆ ಇಟ್ಟಿದ್ದಾರೆ ಎಂದು ಸಲ್ಮಾನ್​ ಖಾನ್​ ತಿಳಿಸಿದ್ದಾರೆ.

‘ಬಜರಂಗಿ ಭಾಯಿಜಾನ್​’ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದರು. ಈಗ ಅದರ ಸೀಕ್ವೆಲ್​ ‘ಪವನ ಪುತ್ರ ಭಾಯಿಜಾನ್​​’ ಚಿತ್ರಕ್ಕೂ ಅವರೇ ಕಥೆ ಬರೆಯುತ್ತಿದ್ದಾರೆ. ಸ್ಕ್ರಿಪ್ಟ್​ ಫೈನಲ್​ ಆಗಬೇಕಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜಮೌಳಿ ಅವರು ‘ಬಜರಂಗಿ ಭಾಯಿಜಾನ್​’ ಚಿತ್ರಕ್ಕೆ ನಿರ್ದೇಶನ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ನಂತರ ಆ ಅವಕಾಶ ಕಬೀರ್​ ಖಾನ್​ ಅವರಿಗೆ ಸಿಕ್ಕಿತ್ತು. ಈಗ ‘ಪವನ ಪುತ್ರ ಭಾಯಿಜಾನ್​’ಗೆ ಯಾರು ಆ್ಯಕ್ಷನ್​-ಕಟ್​ ಹೇಳುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.

ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಟೈಗರ್​ 3’ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ‘ನೋ ಎಂಟ್ರಿ’ ಸೀಕ್ವೆಲ್​ ಆರಂಭ ಆಗಲಿದೆ ಎಂದು ಸಲ್ಮಾನ್​ ಖಾನ್​ ಮಾಹಿತಿ ನೀಡಿದ್ದಾರೆ. ಪನ್ವೇಲ್​ ಫಾರ್ಮ್​ಹೌಸ್​ನಲ್ಲಿ ಸಲ್ಲು 56ನೇ ವರ್ಷದ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ