ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​

ಹಾವು ಕಚ್ಚಿದ ಬಳಿಕ ಆಸ್ಪತ್ರೆಯಲ್ಲಿ ಸಲ್ಮಾನ್​ ಖಾನ್​ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​
ಸಲ್ಮಾನ್ ಖಾನ್ ವೈರಲ್ ಫೋಟೋ

ಸಲ್ಮಾನ್​ ಖಾನ್​ ಅವರಿಗೆ ಕಚ್ಚಿದ ಹಾವು ವಿಷಪೂರಿತ ಆಗಿರಲಿಲ್ಲ ಎಂದು ಅವರ ತಂದೆ ಸಲೀಮ್​ ಖಾನ್​ ತಿಳಿಸಿದ್ದಾರೆ. ಈ ವಿಷಯ ಕೇಳಿದ ಬಳಿಕ ಅವರ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

TV9kannada Web Team

| Edited By: Madan Kumar

Dec 27, 2021 | 7:51 AM

ಸಲ್ಮಾನ್​ ಖಾನ್​ (Salman Khan) ಅಭಿಮಾನಿಗಳು ಭಾನುವಾರ (ಡಿ.26) ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದರು. ತಮ್ಮ ನೆಚ್ಚಿನ ನಟನಿಗೆ ಹಾವು ಕಚ್ಚಿದೆ (Snake Bite) ಎಂಬ ಸುದ್ದಿ ತಿಳಿದು ಫ್ಯಾನ್ಸ್​ ಚಿಂತೆಗೀಡಾಗಿದ್ದರು. ಶನಿವಾರ (ಡಿ.25) ರಾತ್ರಿ ಫಾರ್ಮ್​ಹೌಸ್​ನಲ್ಲಿ ಇರುವಾಗ ಸಲ್ಮಾನ್​ ಖಾನ್​ಗೆ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿ ಸಲ್ಲು ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್​ ಆಗಿದೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅಂದಹಾಗೆ, ಅವರ ಆರೋಗ್ಯ ಈಗ ಹೇಗಿದೆ ಎಂಬ ಅಪ್​​ಡೇಟ್​ ಕೂಡ ಸಿಕ್ಕಿದೆ. ಸಲ್ಮಾನ್​ ಖಾನ್​ ತಂದೆ ಸಲೀಮ್​ ಖಾನ್​ (Salim Khan) ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಶನಿವಾರವೇ ಸಲ್ಮಾನ್​ ಖಾನ್​ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಪುನಃ ಅವರು ಫಾರ್ಮ್​ಹೌಸ್​ಗೆ ತೆರಳಿದ್ದಾರೆ. ಸಲ್ಲುಗೆ ಕಚ್ಚಿದ ಹಾವು ವಿಷಪೂರಿತ ಆಗಿರಲಿಲ್ಲ ಎಂದು ಅವರ ತಂದೆ ಸಲೀಮ್​ ಖಾನ್​ ತಿಳಿಸಿದ್ದಾರೆ. ಈ ವಿಷಯ ಕೇಳಿದ ಬಳಿಕ ಅವರ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ. ‘ಸಲ್ಮಾನ್​ ಖಾನ್​ಗೆ ಬೆಡ್​ ರೂಮ್​ನಲ್ಲಿಯೇ ಹಾವು ಕಚ್ಚಿತ್ತು. ಚಿತ್ರೀಕರಣ ಮುಗಿಸಿಕೊಂಡ ಬಂದು ಬೆಡ್​ ರೂಮ್​ಗೆ ತೆರಳಿದಾಗ ಈ ಘಟನೆ ನಡೆಯಿತು. ಈಗ ಸಲ್ಮಾನ್​ ಆರೋಗ್ಯ ಚೆನ್ನಾಗಿದೆ. ಫ್ಯಾನ್ಸ್​ ಆತಂಕ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇಂಥ ಕಡೆಗಳಲ್ಲಿ ಈ ರೀತಿಯ ಹಾವುಗಳು ಕಾಣಿಸಿಕೊಳ್ಳುವುದು ಸಹಜ’ ಎಂದು ಸಲೀಮ್​ ಖಾನ್​ ಹೇಳಿದ್ದಾರೆ.

ಮಹಾರಾಷ್ಟ್ರದ ರಾಯಘಡ್​ ಜಿಲ್ಲೆಯಲ್ಲಿರುವ ಪನ್ವೇಲ್​ನಲ್ಲಿ ಸಲ್ಮಾನ್​ ಖಾನ್​ ಅವರು ಫಾರ್ಮ್​ಹೌಸ್​ ಹೊಂದಿದ್ದಾರೆ. ಶೂಟಿಂಗ್​ ಇಲ್ಲದಿರುವಾಗ ಅವರು ಹೆಚ್ಚಾಗಿ ತಮ್ಮ ಫಾರ್ಮ್​ಹೌಸ್​ನಲ್ಲಿಯೇ ಕಾಲ ಕಳೆಯುತ್ತಾರೆ. ಮೊದಲ ಬಾರಿ ಲಾಕ್​ಡೌನ್​ ಆದಾಗಲೂ ಅವರು ಈ ಫಾರ್ಮ್​ಹೌಸ್​ನಲ್ಲಿ ವಾಸವಾಗಿದ್ದರು. ಶನಿವಾರ (ಡಿ.25) ಕೂಡ ಸಲ್ಲು ಅಲ್ಲಿದ್ದರು.

ಇಂದು (ಡಿ.27) ಸಲ್ಮಾನ್​ ಖಾನ್​ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಆ ಪ್ರಯುಕ್ತ ಶನಿವಾರ ಸಂಜೆಯೇ ಅವರ ಫಾರ್ಮ್​ಹೌಸ್​ಗೆ ಅತಿಥಿಗಳು ತೆರಳಿದ್ದಾರೆ. ಅದರ ಕೆಲವು ಫೋಟೋಗಳು ಕೂಡ ವೈರಲ್​ ಆಗಿವೆ. ಬರ್ತ್​ಡೇ ಸಂಭ್ರಮಕ್ಕಾಗಿ ಇಡೀ ಫಾರ್ಮ್​ಹೌಸ್​ ಅನ್ನು ಸಿಂಗರಿಸಲಾಗಿದೆ. ಸಲ್ಲು ಆಪ್ತರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ:

‘ನಾನು ದೊಡ್ಡವನಾದ್ಮೇಲೆ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ರೀತಿ ಡ್ಯಾನ್ಸ್​ ಮಾಡ್ತೀನಿ’: ಸಲ್ಮಾನ್​ ಖಾನ್​

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada