‘ನಾನು ದೊಡ್ಡವನಾದ್ಮೇಲೆ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ರೀತಿ ಡ್ಯಾನ್ಸ್​ ಮಾಡ್ತೀನಿ’: ಸಲ್ಮಾನ್​ ಖಾನ್​

RRR Movie: ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಸಖತ್​ ಫೇಮಸ್​ ಆಗಿದೆ. ಆ ಹಾಡಿಗೆ ಡ್ಯಾನ್ಸ್​ ಮಾಡಲು ಹೋಗಿ ಸಲ್ಮಾನ್​ ಖಾನ್​ ಸುಸ್ತಾದರು!

‘ನಾನು ದೊಡ್ಡವನಾದ್ಮೇಲೆ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ರೀತಿ ಡ್ಯಾನ್ಸ್​ ಮಾಡ್ತೀನಿ’: ಸಲ್ಮಾನ್​ ಖಾನ್​
ಜ್ಯೂ. ಎನ್​ಟಿಆರ್​, ಸಲ್ಮಾನ್​ ಖಾನ್​, ರಾಮ್​ ಚರಣ್​
Follow us
TV9 Web
| Updated By: ಮದನ್​ ಕುಮಾರ್​

Updated on: Dec 26, 2021 | 8:38 AM

ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ದಕ್ಷಿಣ ಭಾರತದಲ್ಲೂ ಸೂಪರ್​ ಹಿಟ್​ ಆಗುತ್ತವೆ. ಅದೇ ರೀತಿ ದಕ್ಷಿಣ ಭಾರತ ಚಿತ್ರರಂಗದ ಅನೇಕರು ಸಲ್ಲು ಜತೆ ಸ್ನೇಹ ಹೊಂದಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ‘ಆರ್​ಆರ್​ಆರ್​’ ಸಿನಿಮಾ (RRR Movie) ತಂಡದವರು ಈಗ ಪ್ರಚಾರಕ್ಕಾಗಿ ಸಲ್ಮಾನ್​ ಖಾನ್ ನೆರವು ಪಡೆದಿದ್ದಾರೆ. ಸಲ್ಲು ನಡೆಸಿಕೊಡುವ ‘ಹಿಂದಿ ಬಿಗ್​ ಬಾಸ್​’ (Bigg Boss) ಕಾರ್ಯಕ್ರಮಕ್ಕೆ ‘ಆರ್​ಆರ್​ಆರ್​’ ತಂಡ ಹೋಗಿದೆ. ವೇದಿಕೆ ಮೇಲೆ ರಾಮ್​ ಚರಣ್​ (Ram Charan) ಮತ್ತು ಜ್ಯೂ. ಎನ್​ಟಿಆರ್​ (Jr NTR) ಅವರ ಡ್ಯಾನ್ಸ್​ ವೈಖರಿ ಕಂಡು ಸಲ್ಮಾನ್​ ಖಾನ್​ ಬೆರಗಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ ಮತ್ತು ನಟಿ ಆಲಿಯಾ ಭಟ್​ ಕೂಡ ಇದ್ದರು.

ಸಲ್ಮಾನ್​ ಖಾನ್​ ಇದ್ದಲ್ಲಿ ತಮಾಷೆ, ಮೋಜು-ಮಸ್ತಿ ಇದ್ದೇ ಇರುತ್ತದೆ. ಯಾವುದೇ ವೇದಿಕೆಯಲ್ಲೂ ಅವರು ಲವಲವಿಕೆಯಿಂದ ಇರುತ್ತಾರೆ. ‘ಆರ್​ಆರ್​ಆರ್​’ ಚಿತ್ರದ ಪ್ರಚಾರಕ್ಕಾಗಿ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್​ ನಟರ ಜೊತೆ ಸಲ್ಲು ಆತ್ಮೀಯವಾಗಿ ನಡೆದುಕೊಂಡರು. ಈ ಚಿತ್ರದ ‘ನಾಟು ನಾಟು..’ ಹಾಡು ಸಖತ್​ ಫೇಮಸ್​ ಆಗಿದೆ. ಆ ಹಾಡಿಗೆ ಡ್ಯಾನ್ಸ್​ ಮಾಡಲು ಹೋಗಿ ಸಲ್ಲು ಸುಸ್ತಾದರು!

ಈ ಹಾಡಿನಲ್ಲಿ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅವರು ಸಖತ್ತಾಗಿ ಡ್ಯಾನ್ಸ್​ ಮಾಡಿದ್ದಾರೆ. ಅದೇ ರೀತಿ ಕುಣಿಯುವಂತೆ ಸಲ್ಲುಗೆ ಹೇಳಲಾಯಿತು. ಆದರೆ ಆ ಸ್ಟೆಪ್​ ಹಾಕಲು ಅವರು ತುಂಬ ಕಷ್ಟಪಟ್ಟರು. ‘ನಾನು ದೊಡ್ಡವನಾದ ಮೇಲೆ ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್​ ರೀತಿ ಡ್ಯಾನ್ಸ್​ ಮಾಡುತ್ತೇನೆ’ ಎಂದು ಅವರು ತಮಾಷೆ ಮಾಡಿದರು. ಇಂಥ ಅನೇಕ ಫನ್ನಿ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿ ಆಗಿತ್ತು.

ಜ.7ರಂದು ‘ಆರ್​ಆರ್​ಆರ್​’ ಸಿನಿಮಾ ಅದ್ದೂರಿಯಾಗಿ ವಿಶ್ವಾದ್ಯಾಂತ ಬಿಡುಗಡೆ ಆಗುತ್ತಿದೆ. ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳು ಜನಮೆಚ್ಚುಗೆ ಗಳಿಸಿವೆ. ಎಲ್ಲಿ ಸಾಧ್ಯವೋ ಆ ಎಲ್ಲ ಕಡೆಗಳಲ್ಲಿ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈಗ ಹಿಂದಿ ಬಿಗ್​ ಬಾಸ್​ ವೇದಿಕೆಗೂ ತೆರಳಿ ಪ್ರಚಾರ ಮಾಡಲಾಗಿದೆ.

ಇದೇ ಕಾರ್ಯಕ್ರಮದಲ್ಲಿ ಒಂದು ಚಿಕ್ಕ ದೃಶ್ಯಕ್ಕೆ ರಾಜಮೌಳಿ ನಿರ್ದೇಶನ ಮಾಡಿದರು. ಅದರಲ್ಲಿ ಸಲ್ಲು ಹೀರೋ ಆಗಿ ನಟಿಸಿದರೆ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ವಿಲನ್​​ ಆಗಿದ್ದರು. ಒಟ್ಟಾರೆ ಈ ಎಪಿಸೋಡ್​ ಕಂಡು ಪ್ರೇಕ್ಷಕರು ಎಂಜಾಯ್​ ಮಾಡಿದ್ದಾರೆ. ಡಿ.27ರಂದು ಸಲ್ಮಾನ್​ ಖಾನ್​ ಬರ್ತ್​ಡೇ. ಮುಂಚಿತವಾಗಿಯೇ ಬಿಗ್​ ಬಾಸ್​ ಸೆಟ್​ನಲ್ಲಿ ‘ಆರ್​ಆರ್​ಆರ್​’ ತಂಡದವರು ಸಲ್ಲು ಹುಟ್ಟುಹಬ್ಬ ಆಚರಿಸಿದರು.

ಇದನ್ನೂ ಓದಿ:

ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್​ ಖಾನ್​; ಅನಿಲ್​ ಕಪೂರ್​ ಹೇಳಿದ ಅಚ್ಚರಿ ವಿಷಯ

ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ