AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್​ ಖಾನ್​; ಅನಿಲ್​ ಕಪೂರ್​ ಹೇಳಿದ ಅಚ್ಚರಿ ವಿಷಯ

Salman Khan: ಸಲ್ಮಾನ್​ ಖಾನ್​ ಅವರು ಹೀಗೂ ಹಣ ಮಾಡಬಹುದು ಅಂತ ತೋರಿಸಿಕೊಟ್ಟ ಬಳಿಕ ಚಿತ್ರರಂಗದಲ್ಲಿ ಹೊಸ ಬದಲಾವಣೆ ಆಯಿತು. ಬೇರೆ ನಟ-ನಟಿಯರು ಕೂಡ ಇದೇ ಸೂತ್ರವನ್ನು ಅನುಸರಿಸಲು ಆರಂಭಿಸಿದರು.

ಹೀಗೂ ದುಡ್ಡು ಮಾಡಬಹುದು ಅಂತ ತೋರಿಸಿದ್ದೇ ಸಲ್ಮಾನ್​ ಖಾನ್​; ಅನಿಲ್​ ಕಪೂರ್​ ಹೇಳಿದ ಅಚ್ಚರಿ ವಿಷಯ
ಸಲ್ಮಾನ್​ ಖಾನ್
TV9 Web
| Updated By: ಮದನ್​ ಕುಮಾರ್​|

Updated on: Dec 16, 2021 | 9:35 AM

Share

ನಟ ಸಲ್ಮಾನ್​ ಖಾನ್ (Salman Khan)​ ಅವರಿಗೆ ಯಾವ ಪರಿ ಬೇಡಿಕೆ ಇದೆ ಎಂಬುದನ್ನು ಬಿಡಿಸಿ ಕೇಳಬೇಕಿಲ್ಲ. ಸಿನಿಮಾಗಳಲ್ಲಿ ನಟಿಸುವ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕವೂ ಅವರು ಬಹುಕೋಟಿ ರೂಪಾಯಿ ದುಡಿಯುತ್ತಾರೆ. ಬಿಗ್​ ಬಾಸ್​ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಕ್ಕಾಗಿ ಅವರಿಗೆ ಕೈ ತುಂಬಾ ಸಂಭಾವನೆ (Salman Khan Remuneration) ಸಿಗುತ್ತದೆ. ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದಕ್ಕೂ ಅವರು ಹಣ ಪಡೆಯುತ್ತಾರೆ. ಸಲ್ಮಾನ್​ ಖಾನ್​ ಕೇವಲ ನಟ ಮಾತ್ರವಲ್ಲ, ಅವರೊಬ್ಬ ಪಕ್ಕಾ ಬ್ಯುಸಿನೆಸ್​ ಮ್ಯಾನ್​. ಹಾಗಾಗಿ ಅವರು ಹಣದ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕುತ್ತಾರೆ. ಅದ್ದೂರಿಯಾಗಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡ್ಯಾನ್ಸ್​ ಮಾಡಿ ಹಣ ಗಳಿಸಿದ ಮೊದಲ ಬಾಲಿವುಡ್​ ಸ್ಟಾರ್​ ಎಂದರೆ ಅದು ಸಲ್ಮಾನ್​ ಖಾನ್​! ಈ ವಿಚಾರವನ್ನು ಅನಿಲ್​ ಕಪೂರ್ (Anil Kapoor)​ ಅವರು ಈ ಹಿಂದೆ ಬಾಯಿ ಬಿಟ್ಟಿದ್ದರು. ಆ ವಿಡಿಯೋ ಈಗ ಮತ್ತೆ ವೈರಲ್​ ಆಗುತ್ತಿದೆ.

ಸಿನಿಮಾ ಜಗತ್ತಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಸಾಕಷ್ಟು ಹಣ ಖರ್ಚು ಮಾಡಲಾಗುತ್ತದೆ. ಆಯೋಜಕರಿಗೆ ಅದರಿಂದ ಆದಾಯವೂ ಹರಿದುಬರುತ್ತದೆ. ಅಂಥ ಕಾರ್ಯಕ್ರಮಗಳಲ್ಲಿ ಅನೇಕ ಸೆಲೆಬ್ರಿಟಿಗಳು ಡ್ಯಾನ್ಸ್​ ಮಾಡುತ್ತಾರೆ. ಅದಕ್ಕಾಗಿ ಅವರಿಗೆ ಸಂಭಾವನೆ ಸಿಗುತ್ತದೆ. ಈ ರೀತಿ ಮೊಟ್ಟ ಮೊದಲ ಬಾರಿಗೆ ಸಂಭಾವನೆ ಪಡೆದವರು ಸಲ್ಮಾನ್​ ಖಾನ್​. ‘ನಾನು ಸ್ಟಾರ್​ ನಟ. ನಿಮ್ಮ ಕಾರ್ಯಕ್ರಮದಲ್ಲಿ ನಾನು ಡ್ಯಾನ್ಸ್​ ಮಾಡಬೇಕು ಎಂದರೆ ನೀವು ನನಗೆ ಹಣ ನೀಡಬೇಕು’ ಅಂತ ಡಿಮ್ಯಾಂಡ್​ ಮಾಡಿದ್ದು ಅವರೇ ಮೊದಲು.

ಸಲ್ಮಾನ್​ ಖಾನ್​ ಅವರು ಹೀಗೂ ಹಣ ಮಾಡಬಹುದು ಅಂತ ತೋರಿಸಿಕೊಟ್ಟ ಬಳಿಕ ಚಿತ್ರರಂಗದಲ್ಲಿ ಹೊಸ ಬದಲಾವಣೆ ಆಯಿತು. ಬೇರೆ ನಟ-ನಟಿಯರು ಕೂಡ ಇದೇ ಸೂತ್ರವನ್ನು ಅನುಸರಿಸಲು ಆರಂಭಿಸಿದರು. ಅವಾರ್ಡ್​ ಫಂಕ್ಷನ್​ಗಳಲ್ಲಿ ಪರ್ಫಾರ್ಮ್​ ಮಾಡುವ ಎಲ್ಲರಿಗೂ ಈಗ ಒಳ್ಳೆಯ ಸಂಭಾವನೆ ಸಿಗುತ್ತಿದೆ. ‘ಸಲ್ಮಾನ್​ ಖಾನ್​ ಈ ರೀತಿ ಮಾಡಿದ್ದು ಒಂದು ಕ್ರಾಂತಿ’ ಎಂದು ಅನಿಲ್​ ಕಪೂರ್​ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅವಾರ್ಡ್​ ಫಂಕ್ಷನ್​ಗಳಲ್ಲಿ ಡ್ಯಾನ್ಸ್​ ಮಾಡಿದರೆ ಹಣ ಕೊಡುತ್ತಾರೆ ಎಂಬ ವಿಷಯ ಅನಿಲ್​ ಕಪೂರ್​ ಅವರಿಗೆ ತಿಳಿದಿರಲಿಲ್ಲವಂತೆ. ಹಾಗಾಗಿ ಮೊದಲೆಲ್ಲ ತಾವು ಉಚಿತವಾಗಿ ಭಾಗವಹಿಸುತ್ತಿದ್ದ ವಿಚಾರದ ಬಗ್ಗೆಯೂ ಅವರು ಹೇಳಿಕೊಂಡಿದ್ದರು. ಹಲವು ವಿಚಾರಗಳಲ್ಲಿ ಸಲ್ಮಾನ್​ ಖಾನ್​ ಅವರು ಟ್ರೆಂಡ್​ ಸೆಟ್ಟರ್​ ಆಗಿದ್ದಾರೆ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತರೂ ಅವರಿಗೆ ಇರುವ ಡಿಮ್ಯಾಂಡ್​​ ಕಮ್ಮಿ ಆಗುವುದಿಲ್ಲ. ಸದ್ಯ ಅವರು ‘ಟೈಗರ್​ 3’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಯಾಕಿನ್ನೂ ಮದುವೆ ಆಗಿಲ್ಲ? ಅಸಲಿ ಕಾರಣ ತಿಳಿಸಿದ ಬಾಮೈದ ಆಯುಶ್​ ಶರ್ಮಾ

ಬಿಗ್​ ಬಾಸ್​ ವೇದಿಕೆ ಮೇಲೆ ಸಿದ್ದಾರ್ಥ್​ ಶುಕ್ಲಾಗೆ ಬರ್ತ್​ಡೇ ವಿಶ್​ ತಿಳಿಸಿದ ಸಲ್ಮಾನ್​ ಖಾನ್​

ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ