ಬಿಗ್​ ಬಾಸ್​ ವೇದಿಕೆ ಮೇಲೆ ಸಿದ್ದಾರ್ಥ್​ ಶುಕ್ಲಾಗೆ ಬರ್ತ್​ಡೇ ವಿಶ್​ ತಿಳಿಸಿದ ಸಲ್ಮಾನ್​ ಖಾನ್​

ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ ಸಿದ್ದಾರ್ಥ್​ ಶುಕ್ಲಾಗೆ ಅಪಾರ ಅಭಿಮಾನಿಗಳಿದ್ದಾರೆ. ಬಿಗ್​ ಬಾಸ್​ ಸೀಸನ್​ 13ರಲ್ಲಿ ಸ್ಪರ್ಧಿಸಿ ಗೆದ್ದ ಬಳಿಕವಂತೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ಸೆಪ್ಟೆಂಬರ್ 1ರಂದು ಇವರು ನಿಧನ ಹೊಂದಿದ್ದರು.

ಬಿಗ್​ ಬಾಸ್​ ವೇದಿಕೆ ಮೇಲೆ ಸಿದ್ದಾರ್ಥ್​ ಶುಕ್ಲಾಗೆ ಬರ್ತ್​ಡೇ ವಿಶ್​ ತಿಳಿಸಿದ ಸಲ್ಮಾನ್​ ಖಾನ್​
ಸಿದ್ದಾರ್ಥ್​ ಶುಕ್ಲಾ-ಸಲ್ಮಾನ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 13, 2021 | 3:07 PM

ಹಿಂದಿ ಬಿಗ್​ ಬಾಸ್​ ವಿನ್ನರ್​ ಸಿದ್ದಾರ್ಥ್​ ಶುಕ್ಲಾ ಅವರು ನಮ್ಮನ್ನು ಅಗಲಿ ಹಲವು ತಿಂಗಳು ಕಳೆದಿದೆ. ಅವರ ಅಕಾಲಿಕ ಮರಣದಿಂದ ಬಣ್ಣದ ಲೋಕಕ್ಕೆ ಸಾಕಷ್ಟು ನಷ್ಟ ಉಂಟಾಗಿದೆ. ಈಗಲೂ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಭಾನುವಾರ (ಡಿಸೆಂಬರ್ 12) ಸಿದ್ದಾರ್ಥ್​ ಶುಕ್ಲಾ ಬರ್ತ್​ಡೇ. ಈ ವೇಳೆ ಅವರನ್ನು ನೆನಪಿಸಿಕೊಳ್ಳುವ ಕಾರ್ಯವನ್ನು ಸಲ್ಮಾನ್​ ಖಾನ್​ ಮಾಡಿದ್ದಾರೆ. ಬಿಗ್​ ಬಾಸ್​ ವೇದಿಕೆ ಮೇಲೆಯೇ ಸಿದ್ದಾರ್ಥ್​ ಅವರನ್ನು ಸಲ್ಲು ನೆನೆದರು. ಈ ವೇಳೆ ಅವರು ಭಾವುಕರಾದರು.

ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ ಸಿದ್ದಾರ್ಥ್​ ಶುಕ್ಲಾಗೆ ಅಪಾರ ಅಭಿಮಾನಿಗಳಿದ್ದಾರೆ. ಬಿಗ್​ ಬಾಸ್​ ಸೀಸನ್​ 13ರಲ್ಲಿ ಸ್ಪರ್ಧಿಸಿ ಗೆದ್ದ ಬಳಿಕವಂತೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಿತು. ಸೆಪ್ಟೆಂಬರ್ 1ರಂದು ಇವರು ನಿಧನ ಹೊಂದಿದ್ದರು. ಇದು ಅಭಿಮಾನಿಗಳಿಗೆ ಶಾಕ್​ ನೀಡಿತ್ತು. ಅಲ್ಲದೆ, ಅವರ ಕುಟುಂಬಕ್ಕೂ ಸಾಕಷ್ಟು ನೋವು ತಂದಿತ್ತು. ಸಿದ್ದಾರ್ಥ್​ ಸಾವು ಸಲ್ಮಾನ್​ ಖಾನ್​ಗೂ ಬೇಸರ ತಂದಿದೆ.

ಭಾನುವಾರ ವೇದಿಕೆ ಮೇಲೆ ಮಾತನಾಡಿದ ಸಲ್ಮಾನ್​ ಖಾನ್​, ‘ಇಂದು ಬಿಗ್​ ಬಾಸ್​ ವಿನ್ನರ್​ ಜನ್ಮದಿನ. ಆದರೆ, ಅವರು ನಮ್ಮೊಂದಿಗೆ ಇಲ್ಲ. ಅವರ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಸಿದ್ದಾರ್ಥ್​ ನಮ್ಮನ್ನು ಅಗಲಿ ತುಂಬಾನೇ ಬೇಗ ಹೋಗಿದ್ದಾರೆ. ಈ ವಿಶೇಷ ದಿನಕ್ಕೆ ನಾವು ಅವರಿಗೆ ಶುಭ ಕೋರುತ್ತಿದ್ದೇವೆ. ಈ ಎಪಿಸೋಡ್​ ಅವರಿಗಾಗಿ ಅರ್ಪರಣೆ​ ಮಾಡುತ್ತಿದ್ದೇವೆ’ ಎಂದಿದ್ದಾರೆ ಸಲ್ಮಾನ್​ ಖಾನ್​.

ಸಿದ್ದಾರ್ಥ್​ ಸಾವಿನ ಕುರಿತು ಕೆಲವು ಅಚ್ಚರಿಯ ಮಾಹಿತಿಗಳು ಹೊರಬಂದಿತ್ತು. ಹೃದಯಾಘಾತ ಆಗುವ ಸಂದರ್ಭದಲ್ಲಿ ಅವರ ಪ್ರೇಯಸಿ ಶೆಹನಾಜ್​ ಗಿಲ್​ ಕೂಡ ಜೊತೆಯಲ್ಲೇ ಇದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಬಿಗ್​ ಬಾಸ್​ ಸೀಸನ್​ 13ರಲ್ಲಿ ಶೆಹನಾಜ್ ಮತ್ತು ಸಿದ್ದಾರ್ಥ್​ ಶುಕ್ಲಾ ಸ್ಪರ್ಧಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು.

ಇದನ್ನೂ ಓದಿ: ‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ