‘ಜಾತಿ ಧರ್ಮ ಇಟ್ಕೊಂಡು ಡಾ. ರಾಜ್ ಕುಟುಂಬ ಮಾತಾಡಲ್ಲ’: ಅಪ್ಪು ಬಗ್ಗೆ ಕುಮಾರ್ ಬಂಗಾರಪ್ಪ ಮಾತು
Kumar Bangarappa | Puneeth Rajkumar: ಪುನೀತ್ ರಾಜ್ಕುಮಾರ್ ಜತೆಗಿನ ಒಡನಾಟವನ್ನು ಕುಮಾರ್ ಬಂಗಾರಪ್ಪ ಅವರು ನೆನಪಿಸಿಕೊಂಡಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಗುಣವನ್ನು ಅವರು ಸದನದಲ್ಲಿ ಕೊಂಡಾಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ಪ್ರತಿ ದಿನ ಅವರನ್ನು ನೆನಪು ಮಾಡಿಕೊಳ್ಳುವಂತಹ ಕೆಲಸ ಆಗುತ್ತಿದೆ. ಇಂದು (ಡಿ.13) ಬೆಳಗಾವಿಯಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ (Karnataka Assembly Winter Session) ಆರಂಭ ಆಗಿದೆ. ಸದನದಲ್ಲಿ ಅಪ್ಪು ಬಗ್ಗೆ ಅನೇಕರು ಮಾತನಾಡಿದ್ದಾರೆ. ರಾಜ್ ಕುಟುಂಬದ ಸಂಬಂಧಿ ಆದಂತಹ ಕುಮಾರ್ ಬಂಗಾರಪ್ಪ (Kumar Bangarappa) ಅವರು ಕೂಡ ಪುನೀತ್ ಅವರನ್ನು ಸ್ಮರಿಸಿದ್ದಾರೆ. ‘ಪುನೀತ್ ರಾಜ್ಕುಮಾರ್ ಅವರ ಜೊತೆ ನಮಗೆ ಒಡನಾಟ ಜಾಸ್ತಿ. ಅವರು ನಮ್ಮ ಸಂಬಂಧಿ. ಆದರೆ ಡಾ. ರಾಜ್ಕುಮಾರ್ ಕುಟುಂಬದವರು ಯಾವತ್ತೂ ಸಂಬಂಧ, ಜಾತಿ, ಧರ್ಮ ಇಟ್ಟುಕೊಂಡು ಮಾತನಾಡುವವರಲ್ಲ. ಅಪ್ಪು ಆ ಮಟ್ಟಕ್ಕೆ ಇದ್ದರು ಎಂಬುದಕ್ಕೆ ಇಂದು ಅನೇಕ ಉದಾಹರಣೆಗಳಿವೆ. ರಜನಿಕಾಂತ್ ಮತ್ತು ಪುನೀತ್ ಸಾಧನೆ ಸಮನಾಗಿದೆ ಎಂಬ ಬಗ್ಗೆ ರಜನಿಕಾಂತ್ ಅವರೇ ಒಮ್ಮೆ ಹೇಳಿದ್ದರು. ಪ್ರಧಾನಿಗಳಿಂದಲೂ ಪುನೀತ್ಗೆ ಪ್ರಶಂಸೆ ಸಿಕ್ಕಿತ್ತು’ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್ ಕಾಗೇರಿ
ಸದನದಲ್ಲೂ ಪುನೀತ್ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?