ರಾಯಲ್ ಎನ್ಫೀಲ್ಡ್ ಸಂಸ್ಥೆಯ 120 ವಾರ್ಷಿಕೋತ್ಸವದ ವಿಶೇಷ ಮೊಟಾರ್ ಸೈಕಲ್ಗಳು 120 ಸೆಕೆಂಡುಗಳಲ್ಲಿ ಮಾರಾಟವಾದವು!
ಸಂಸ್ಥೆ ಲಾಂಚ್ ಮಾಡಿದ 60 ಇಂಟರ್ ಸೆಪ್ಟರ್ 650 ಮತ್ತು ಅಷ್ಟೇ ಸಂಖ್ಯೆಯ ಕಾಂಟಿನೆಂಟಲ್ ಜಿಟಿ 650 ಬೈಕ್ಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಕಳೆದ ವಾರ ನಾವು ರಾಯಲ್ ಎನ್ಫೀಲ್ಡ್ ಮೊಟಾರ್ ಸೈಕಲ್ ಕಂಪನಿಯು ತನ್ನ ಸಂಸ್ಥಾಪನೆಯ 120ನೇ ವರ್ಷದ ಅಂಗವಾಗಿ, ಕೆಲವೇ ಸಂಖ್ಯೆಗಳಷ್ಟು ಎರಡು ಹೊಸ ಮಾಡೆಲ್ ಬೈಕ್ ಲಾಂಚ್ ಮಾಡುತ್ತಿರುವ ಹಾಗೂ ಅವುಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುತ್ತಿರುವ ಬಗ್ಗೆ ನಿಮಗೆ ತಿಳಿಸಿದ್ದೆವು, ನೆನಪಿದೆ ತಾನೆ? ಆನ್ ಲೈನ್ ಮಾರಾಟ ಡಿಸೆಂಬರ್ 6 ರಂದು ನಡೆಯಲಿದೆ ಎಂದು ಕಂಪನಿ ಹೇಳಿತ್ತು. ಈ ಮಾರಾಟ ಯಾವಾಗ ಆರಂಭವಾಯಿತೋ ಯಾವಾಗ ಮುಗಿದು ಹೋಯಿತೋ ಅನ್ನೋದು ಬಹಳಷ್ಟು ಜನಕ್ಕೆ ತಿಳಿಯಲೇ ಇಲ್ಲ! ಯಾಕೆ ಗೊತ್ತಾ? ಮಾರಾಟ ಶುರುವಾದ ಎರಡೇ ನಿಮಿಷಗಳಲ್ಲಿ ಬೈಕ್ಗಳು ಸೋಲ್ಡ್ ಔಟ್!!
ಸಂಸ್ಥೆ ಲಾಂಚ್ ಮಾಡಿದ 60 ಇಂಟರ್ ಸೆಪ್ಟರ್ 650 ಮತ್ತು ಅಷ್ಟೇ ಸಂಖ್ಯೆಯ ಕಾಂಟಿನೆಂಟಲ್ ಜಿಟಿ 650 ಬೈಕ್ಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ. ಡಿಸೆಂಬರ್ 6ರಂದು ಸಾಯಂಕಾಲ 7:00 ಗಂಟೆಗೆ ಸೇಲ್ ಆರಂಭವಾಗಿ ಎಲ್ಲ 120 ಬೈಕ್ಗಳು ಕೇವಲ 120 ಸೆಕೆಂಡುಗಳಲ್ಲಿ ಮಾರಾಟವಾಗಿವೆ.
ಈ ಐ ಸಿ ಎಮ್ ಎ 2021 ರಲ್ಲಿ ಅನಾವರಣಗೊಂಡ ವಾರ್ಷಿಕೋತ್ಸವದ ಆವೃತ್ತಿಯ 650 ಅವಳಿ ಬೈಕ್ಗಳ ಮಾರಾಟ ಜಾಗತಿಕವಾಗಿ ನಡೆಯಿತು. ಸಂಸ್ಥೆಯ 120 ವರ್ಷಗಳ ಪಯಣವನ್ನು ಪ್ರತಿನಿಧಿಸುವ ಮತ್ತು ಕೈ ನಿರ್ಮಿತ ಬ್ರಾಸ್ ಟ್ಯಾಂಕ್ ಬ್ಯಾಜ್ ಹೊಂದಿರುವ ಕಪ್ಪು ಕ್ರೋಮೆ ಬಣ್ಣದ ಸ್ಕೀಮಿನ 480 ಬೈಕ್ಗಳನ್ನು ಕಂಪನಿಯು ಮಾರಾಟ ಮಾಡಿದೆ.
ಈ ವಾರ್ಷಿಕೋತ್ಸವ ವಿಶೇಷ ಪ್ಯಾಕೇಜ್ ಮೋಟಾರು ಸೈಕಲ್ಗಳ ಜೊತೆಗೆ ಒಂದು ವಿಶೇಷ ಬ್ಲ್ಯಾಕ್ಡ್ ಔಟ್ ರಾಯಲ್ ಎನ್ಫೀಲ್ಡ್ ಮೊಟಾರ್ ಸೈಕ್ಲಿಂಗ್ ಅಕ್ಸೆಸರಿ ಮತ್ತು 4ನೇ ಹಾಗೂ 5ನೆ ವರ್ಷಕ್ಕೆ ವಿಸ್ತೃತ ವಾರಂಟಿಯನ್ನು ಒಳಗೊಂಡಿದೆ.
ಇದನ್ನೂ ಓದಿ: Viral Video: ಬಾಯಾರಿದ ನಾಯಿಮರಿಗೆ ಬೋರ್ವೆಲ್ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್